ಅಬ್ದುಲ್ ಕಲಾಂ ಸ್ಮಾರಕ ಲೋಕಾರ್ಪಣೆ ಮಾಡಿದ ಪ್ರಧಾನಿ ಮೋದಿ

ಈ ಸುದ್ದಿಯನ್ನು ಶೇರ್ ಮಾಡಿ

AAP--01

ನವದೆಹಲಿ,ಜು.27- ತಮಿಳುನಾಡಿನ ರಾಮೇಶ್ವರದ ಪೈಕರಂಬೂರಿನಲ್ಲಿ ನಿರ್ಮಾಣಗೊಂಡಿರುವ ಮಾಜಿ ರಾಷ್ಟ್ರಪತಿ ಹಾಗೂ ವಿಶ್ವವಿಖ್ಯಾತ ವಿಜ್ಞಾನಿ ಡಾ.ಎ.ಬಿ.ಜೆ.ಅಬ್ದುಲ್ ಕಲಾಂ ಅವರ ಸ್ಮಾರಕವನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಉದ್ಘಾಟಿಸಿ ಲೋಕಾರ್ಪಣೆ ಮಾಡಿದರು.   ರಕ್ಷಣ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ(ಡಿಆರ್‍ಡಿಒ) 15 ಕೋಟಿ ವೆಚ್ಚದಲ್ಲಿ ಕಲಾಂ ಸ್ಮಾರಕ ನಿರ್ಮಿಸಿದ್ದು, 4 ಟನ್ ಭಾರ ಮತ್ತು 45 ಅಡಿ ಎತ್ತರದ ಅಗ್ನಿ-2
ಕ್ಷಿಪಣಿಯ ಮಾದರಿ ಹಾಗೂ ಕಲಾಂ ಅವರ 7 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಸ್ಮಾರಕದಲ್ಲಿ ಸ್ಥಾಪಿಸಲಾಗಿದೆ.

ಕಲಾಂ ಅವರ ಸಾಧನೆ ಅಗ್ನಿ ಕ್ಷಿಪಣಿ ಪೋಖ್ರಾನ್-2 ಪರಮಾಣು ಪರೀಕ್ಷೆ ಕುರಿತ ಅಪರೂಪದ ಛಾಯಚಿತ್ರಗಳು ಕಲಾಂ ಸಂದೇಶ ವಾಹಿನಿ ಸಂಚಾರಿ ವಸ್ತು
ಪ್ರದರ್ಶನಕ್ಕೆ ಮೋದಿ ಹಸಿರುನಿಸಾನೆ ತೋರಿಸಲಿದ್ದಾರೆ.  ಈ ವಾಹನವು ದೇಶಾದ್ಯಂತ ಸಂಚರಿಸಿ ಅ.15ರಂದು ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಅಬ್ದುಲ್ ಕಲಾಂ ಅವರ ಜನ್ಮದಿನಾಚರಣೆ ಕಾರ್ಯಕ್ರಮಕ್ಕೆ ಆಗಮಿಸಲಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin