ಆನ್ಲೈನ್ ನಲ್ಲಿ ಜಾಹೀರಾತು ನೀಡಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಇಬ್ಬರ ಬಂಧನ

Online--01

ಬೆಂಗಳೂರು, ಜು.27- ಅಂತರ್ಜಾ ಲದಲ್ಲಿ ಲೊಕಾಂಟೋ ವೆಬ್‍ಸೈಟ್ ಮೂಲಕ ಜಾಹೀರಾತು ಪ್ರಕಟಿಸಿ ಹೈಟೆಕ್ ವೇಶ್ಯಾವಾಟಿಕೆ ನಡೆಸುತ್ತಿದ್ದ ಹೋಟೆಲ್ ಮ್ಯಾನೇಜ್‍ಮೆಂಟ್ ಪದವೀಧರ ಸೇರಿ ಇಬ್ಬರನ್ನು ಬೊಮ್ಮನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಹೊಸಪಾಳ್ಯದ 3ನೇ ಕ್ರಾಸ್ ನಿವಾಸಿ ಮಹೇಶ್(27) ಮತ್ತು ರವೀಶ್(30) ಬಂಧಿತ ಆರೋಪಿಗಳು. ನಗರದ ಹಲವು ಕಡೆ ಕೆಲವು ವ್ಯಕ್ತಿಗಳು ಲೊಕಾಂಟೋ ವೆಬ್‍ಸೈಟ್ ಮೂಲಕ ಕಾಲೇಜು ಹುಡುಗಿಯರು, ಸಾಫ್ಟವೇರ್ ಇಂಜಿನೀಯರ್‍ಗಳು, ಕಾಲ್‍ಗರ್ಲ್ ಸೇವೆಗೆ ಲಭ್ಯವಿರುತ್ತಾರೆಂದು ಅಂತರ್ಜಾ ಲದಲ್ಲಿ ಹುಡುಗಿಯರ ಫೋಟೋ ಮತ್ತು ಮೊಬೈಲ್ ನಂಬರ್‍ಗಳನ್ನು ಅಪ್‍ಲೋಡ್ ಮಾಡಿ ಜಾಹೀರಾತು ಪ್ರಕಟಿಸುತ್ತಿದ್ದರು.

ಏಜೆಂಟ್ ನಂಬರ್‍ಗಳನ್ನು ಗ್ರಾಹಕರಿಗೆ ನೀಡಿ ನಿರ್ದಿಷ್ಟ ಸ್ಥಳಕ್ಕೆ ಗ್ರಾಹಕರನ್ನು ಕರೆಸಿಕೊಂಡು ಹೈಟೆಕ್ ವೈಶ್ಯಾವಾಟಿಕೆ ನಡೆಸಲು ಹುಡುಗಿಯರನ್ನು ಕಳುಹಿಸಿಕೊಡುತ್ತಿದ್ದ ಮಾಹಿತಿಯನ್ನು ಪಡೆದ ಬೊಮ್ಮನಹಳ್ಳಿ ಪೊಲೀಸರು ಈ ಬಗ್ಗೆ ಸೈಬರ್ ಕ್ರೈಂ ಮತ್ತು ಟೆಕ್ನಿಕಲ್ ಟೀಂಗಳ ಸಹಾಯದಿಂದ ತನಿಖೆ ಮಾಡಿ ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ.

ಆರೋಪಿ ರವೀಶ್ ಹಾಸನ ಜಿಲ್ಲೆಯ ವಾಸಿಯಾಗಿದ್ದು, ಹೋಟೆಲ್ ಮ್ಯಾನೇಜ್‍ಮೆಂಟ್‍ನಲ್ಲಿ ಪದವಿ ಶಿಕ್ಷಣ ಪಡೆದಿದ್ದು, ಸಿಸ್ಟ ಹಾಸ್ಪಿಟಲಿಟಿ ಸರ್ವೀಸ್ ಕಂಪೆನಿಗೆ ಬರುವ ಗೆಸ್ಟ್‍ಗಳ ಮಾಹಿತಿ ಸ್ವೀಕರಿಸಿ ಅವರಿಗೆ ರೂಂ ಮತ್ತು ಊಟ ಇತರೆ ವ್ಯವಸ್ಥೆ ಮಾಡುವ ಕೆಲಸ ಮಾಡಿಕೊಂಡಿದ್ದನು. ಆ ಸಮಯದಲ್ಲಿ ಗೆಸ್ಟ್‍ಗಳಿಗೆ ಹುಡು ಗಿಯರನ್ನು ಪೂರೈಸುತ್ತಿದ್ದ ಆರೋಪಿ ಮಹೇಶ್ ಎಂಬುವನ ಪರಿಚಯ ಮಾಡಿಕೊಂಡು ಈ ಕೃತ್ಯಕ್ಕಿಳಿದಿದ್ದು ವಿಚಾರಣೆಯಿಂದ ಬೆಳಕಿಗೆ ಬಂದಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin