ಎಲ್ಲರ ಚಿತ್ತ ಭಾರತದ ಜೇಮ್ಸ್ ಬಾಂಡ್ ದೋವಲ್ ಅವರತ್ತ..!

ಈ ಸುದ್ದಿಯನ್ನು ಶೇರ್ ಮಾಡಿ

Jems-Bond-Ajit

ನವದೆಹಲಿ/ಬೀಜಿಂಗ್, ಜು.27-ಭಾರತ ಮತ್ತು ಚೀನಾ ನಡುವೆ ಸೇನಾ ಸಂಘರ್ಷ ಉಲ್ಬಣಗೊಳ್ಳಲು ಕಾರಣವಾಗಿರುವ ಸಿಕ್ಕಿಂ ಬಿಕ್ಕಟ್ಟು ನಿವಾರಣೆಯಲ್ಲಿ ಭಾರತದ ಜೇಮ್ಸ್ ಬಾಂಡ್ ಎಂದೇ ಖ್ಯಾತರಾಗಿರುವ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಪ್ರಮುಖ ಪಾತ್ರ ವಹಿಸಲಿದ್ದಾರೆ. ಚೀನಾದಲ್ಲಿ ಇಂದಿನಿಂದ ಬ್ರಿಕ್ಸ್ (ಬ್ರೆಜಿಲ್, ರಷ್ಯಾ, ಇಂಡಿಯಾ, ಚೀನಾ, ಸೌತ್ ಆಫ್ರಿಕಾ) ರಾಷ್ಟ್ರಗಳ ಉನ್ನತ ಭದ್ರತಾ ಅಧಿಕಾರಿಗಳ ಎರಡು ದಿನಗಳ ಸಭೆ ಆರಂಭವಾಗಿದ್ದು, ದೋವಲ್ ಭಾರತವನ್ನು ಪ್ರತಿನಿಧಿಸಿದ್ದಾರೆ.

ಅತ್ಯಂತ ಚಾಣಾಕ್ಷರು ಮತ್ತು ಕುಶಾಗ್ರಮತಿಯೂ ಆದ ದೋವಲ್ ಚೀನಾದ ಸ್ಟೇಟ್ ಕೌನ್ಸಿಲರ್ ಯಾಂಗ್ ಜೀಚಿ ಅವರೊಂದಿಗೆ ಸಿಕ್ಕಿಂ ಬಿಕ್ಕಟ್ಟು ಕುರಿತು ಮಹತ್ವದ ಸಮಾಲೋಚನೆ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲರ ಕಣ್ಣು ಈಗ ದೋವಲ್ ಅವರತ್ತ ನೆಟ್ಟಿದೆ.  ನಿನ್ನೆ ಬೀಜಿಂಗ್‍ಗೆ ತೆರಳಿದ ದೋವಲ್ ಬ್ರಿಕ್ಸ್ ಎನ್‍ಎಸ್‍ಎಗಳ ಸಭೆಯಲ್ಲಿ ಭಾಗವಹಿಸಿ, ಭಾರತದ ರಕ್ಷಣೆಗೆ ಸಂಬಂಧಪಟ್ಟ ಮಹತ್ತರ ಸಂಗತಿಗಳ ಕುರಿತು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಚರ್ಚಿಸುವರು.
ಸೂಕ್ಷ್ಮ ಮತ್ತು ಗಂಭೀರ ವಿಷಯಗಳ ಕುರಿತು ದೋವಲ್ ಈವರೆಗೆ ನಡೆಸಿರುವ ಯಾವುದೇ ಮಾತುಕತೆಗಳು ವಿಫಲವಾಗಿಲ್ಲ. ಹೀಗಾಗಿ ಈಶಾನ್ಯ ರಾಜ್ಯ ಸಿಕ್ಕಿಂನಲ್ಲಿ ಡೋಕ್ಲಾಮ್ ಗಡಿ ಸಂಘರ್ಷ ಉಪಶಮನಗೊಳ್ಳುವ ಸೂಚನೆ ಗೋಚರಿಸುತ್ತಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin