ಕೆರೆಗಳಿಗೆ ಹರಿಸಬೇಕೆಂದು ಆಗ್ರಹಿಸಿ ಮದ್ದೂರು ಪಟ್ಟಣ ಬಂದ್

ಮಂಡ್ಯ, ಜು.27- ತಮಿಳುನಾಡಿಗೆ ಹರಿಸುವ ಕಾವೇರಿ ನೀರನ್ನು ಜಿಲ್ಲೆಯ ಕೆರೆಗಳಿಗೆ ಹರಿಸಬೇಕೆಂದು ಆಗ್ರಹಿಸಿ ಕಳೆದ 20 ದಿನಗಳಿಂದ ಇಲ್ಲಿನ ಮದ್ದೂರಮ್ಮನ ಕೆರೆಯಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ಬೆಂಬಲಿಸಿ ಇಂದು ಮದ್ದೂರು ಪಟ್ಟಣ ಬಂದ್ ಆಚರಿಸಲಾಯಿತು. ಸರ್ಕಾರ ಮಂಡ್ಯ ಜಿಲ್ಲೆಯಲ್ಲಿ ಕೆರೆಗಳು ಒಣಗಿ ಕುಡಿಯಲು ನೀರಿಲ್ಲದಿದ್ದರೂ ತಮಿಳುನಾಡಿಗೆ ನೀರು ಹರಿಸುತ್ತಿದೆ. ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸಬೇಕು ಎಂದು ಆಗ್ರಹಿಸಿ ಜನಪರ ವೇದಿಕೆ ಕಾರ್ಯಕರ್ತರು ಸಂಘಟನೆಯ ರಾಜ್ಯಾಧ್ಯಕ್ಷ ರಮೇಶ್‍ಗೌಡ ನೇತೃತ್ವದಲ್ಲಿ 20 ದಿನಗಳಿಂದಲೂ ಪ್ರತಿಭಟನೆ ನಡೆಸುತ್ತಿದ್ದಾರೆ.

ಹೋರಾಟಕ್ಕೆ ಜಿಲ್ಲೆಯಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಮದ್ದೂರು ಪಟ್ಟಣದ ವರ್ತಕರು, ಸಣ್ಣ ಪುಟ್ಟ ವ್ಯಾಪಾರಿಗಳು ಎಲ್ಲರೂ ಇಂದು ತಮ್ಮ ವಹಿವಾಟು ಸ್ಥಗಿತಗೊಳಿಸಿ ಸ್ವಪ್ರೇರಿತವಾಗಿ ಬಂದ್ ನಡೆಸಿದರು. ರೈತರು ಕೂಡ ಜಾನುವಾರುಗಳ ಸಹಿತ ಪ್ರತಿಭಟನೆಗೆ ಇಳಿದಿದ್ದಾರೆ. ಪಟ್ಟಣದ ಎಲ್ಲಾ ನಾಗರಿಕರು ಈ ಬಂದ್ ಅನ್ನು ಬೆಂಬಲಿಸಿದ್ದಾರೆ. ಜನಪರ ವೇದಿಕೆ ಮಂಡ್ಯ ಜಿಲ್ಲಾ ಅಧ್ಯಕ್ಷ ಉಮಾಶಂಕರ್ ಮತ್ತಿತರ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin