ಕ್ರ್ಯಾಕ್ ಸೌಂಡ್ಸ್

ಈ ಸುದ್ದಿಯನ್ನು ಶೇರ್ ಮಾಡಿ

Crack--01

ಮಸ್ತ್ ಮಜಾ ಮಾಡಿ, ಟೈಸನ್‍ನಂಥ ಸೂಪರ್‍ಹಿಟ್ ಚಲನಚಿತ್ರಗಳನ್ನು ನಿರ್ದೇಶಿಸಿದ ಸಾಹಿತಿ, ಬರಹಗಾರ ಕೆ.ರಾಮ್‍ನಾರಾಯಣ್ ಈಗ ಮತ್ತೊಂದು ಮಾಸ್ ಚಿತ್ರದೊಂದಿಗೆ ಬರುತ್ತಿದ್ದಾರೆ. ವಿಜಯ್ ಸಿನಿಮಾಸ್‍ನ ವಿಜಯ್‍ಕುಮಾರ್.ವೈ ಹಾಗೂ ಶಂಕರ್ ಇಳಕಲ್ ಸೇರಿ ನಿರ್ಮಾಣ ಮಾಡಿರುವ ಈ ಚಿತ್ರದ ಹೆಸರು ಕ್ರ್ಯಾಕ್. ಈ ಹಿಂದೆ ಬಂದು ಟೈಸನ್  ಚಿತ್ರದ ಯಶಸ್ವೀ ಕಾಂಬಿನೇಷನ್ ಆದ ನಿರ್ದೇಶಕ ಕೆ.ರಾಮ್‍ನಾರಾಯಣ್ ಹಾಗೂ ನಾಯಕ ನಟ ವಿನೋದ್‍ಪ್ರಭಾಕರ್ ಈ ಚಿತ್ರದ ಮೂಲಕ ಮತ್ತೊಮ್ಮೆ ತೆರೆ ಮೇಲೆ ಬರುತ್ತಿದ್ದಾರೆ.  ಕ್ರ್ಯಾಕ್ ಚಿತ್ರದ ಹಾಡುಗಳ ಧ್ವನಿಸುರುಳಿ ಬಿಡುಗಡೆ ಸಮಾರಂಭ ರಾಜಾಜಿನಗರದ ಡಾ.ರಾಜ್‍ಕುಮಾರ್ ಕಲಾಕ್ಷೇತ್ರದಲ್ಲಿ ಅದ್ಧೂರಿ ಕಾರ್ಯಕ್ರಮದೊಂದಿಗೆ ನೆರವೇರಿತು. ವಿನೋದ್  ಪ್ರಭಾಕರ್ ಹಾಗೂ ಆಕಾಂಕ್ಷ ಮೊದಲ ಬಾರಿಗೆ ಜೊತೆಯಾಗಿ ಕಾಣಿಸಿಕೊಂಡಿರುವ ಈ ಚಿತ್ರಕ್ಕೆ ಡಾ.ಶಮಿತಾ ಮಲ್ನಾಡ್ ಹಾಗೂ ಎಸ್.ಚಿನ್ನ ಸಂಗೀತ ಸಂಯೋಜನೆ ಮಾಡಿದ್ದಾರೆ.

ಈಗಾಗಲೇ ರಿಲೀಸಾಗಿರುವ ಕ್ರ್ಯಾಕ್ ಚಿತ್ರದ ಟೀಸರನ್ನು 2 ಲಕ್ಷಕ್ಕೂ ಹೆಚ್ಚು ವೀಕ್ಷಕರು ನೋಡಿ ಆನಂದಿಸಿದ್ದಾರೆ. ನಟ ಶ್ರೀನಗರಕಿಟ್ಟಿ, ಹಿರಿಯ ನಟ ಉಮೇಶ್ ಹಾಗೂ ರಾಜಕೀಯದ ಮುಖಂಡರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಚಿತ್ರದ ಹಾಡುಗಳನ್ನು ಲೋಕಾರ್ಪಣೆ ಮಾಡಿದರು. ನಿಷ್ಠೆ ಹಾಗೂ ದಕ್ಷತೆಗೆ ಹೆಸರಾದ ಪೊಲೀಸ್ ಅಧಿಕಾರಿಯೊಬ್ಬನ ಸಾಹಸ ಕಥನ ಇದಾಗಿದ್ದು, ವೈರಿಗಳನ್ನು ನಿರ್ದಾಕ್ಷಿಣ್ಯವಾಗಿ ಮಟ್ಟ ಹಾಕುವ ಈತನನ್ನು ಬಹುತೇಕರು ಕ್ರ್ಯಾಕ್ ಅಂತಲೇ ಕರೆಯುತ್ತಿರುತ್ತಾರೆ. ಸೂರಿ ಚಿತ್ರದಲ್ಲಿ ದುನಿಯಾ ವಿಜಯ್ ಜೋಡಿಯಾಗಿ ಕಾಣಿಸಿಕೊಂಡಿದ್ದ ಆಕಾಂಕ್ಷ ಈ ಚಿತ್ರದಲ್ಲಿ ನಾಯಕಿಯ ಪಾತ್ರವನ್ನು ನಿರ್ವಹಿಸಿದ್ದಾರೆ.

ಈ ಚಿತ್ರದಲ್ಲಿ ಒಟ್ಟು 5 ಹಾಡುಗಳಿದ್ದು, ನಿರ್ದೇಶಕ ರಾಮ್‍ನಾರಾಯಣ್ ಅವರೇ ಎಲ್ಲಾ ಹಾಡುಗಳಿಗೆ ಸಾಹಿತ್ಯ ರಚಿಸಿದ್ದಾರೆ. ಮಾರೋ ಧಮ್ ಮಾರೋ ಎಂಬ ನಾಯಕನ ಇಂಟ್ರುಡಕ್ಷನ್ ಸಾಂಗ್‍ಗೆ ಶಶಾಂಕ್ ಶೇಷಗಿರಿ ದನಿಯಾಗಿದ್ದಾರೆ. ಕಾವೇರಿ ಸೋ ಸಾರಿ ಎಂಬ ಮಾಂಟೇಜ್ ಸಾಂಗನ್ನು ನಾಯಕ ನಟ ಶರಣ್ ಅವರು ಹಾಡಿದ್ದಾರೆ. ವರ್ಣರಂಜಿತವಾಗಿ ನೆರವೇರಿದ ಈ ಸಮಾರಂಭದಲ್ಲಿ ಮನರಂಜನಾ ಕಾರ್ಯಕ್ರಮಗಳು ಅಭಿಮಾನಿಗಳನ್ನು ರಂಜಿಸಿದವು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin