ಖಾಸಗಿತನ ಹಕ್ಕು ಮೂಲಭೂತ ಹಕ್ಕಲ್ಲ : ಸುಪ್ರೀಂಗೆ ಕೇಂದ್ರ ಸ್ಪಷ್ಟೋಕ್ತಿ

Suprem-Court

ನವದೆಹಲಿ, ಜು.27-ಖಾಸಗಿತನವು ಬಹು ಆಯಾಮದ ವಿಷಯವಾ ಗಿರುವುದರಿಂದ ಅದನ್ನು ಮೂಲಭೂತ ಹಕ್ಕಾಗಿ ಪರಿಗಣಿಸಲು ಸಾಧ್ಯವಾಗದು ಎಂದು ಕೇಂದ್ರ ಸರ್ಕಾರವು ಸುಪ್ರೀಂಕೋರ್ಟ್‍ಗೆ ಇಂದು ತಿಳಿಸಿದೆ. ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಇಂದು ಸರ್ಕಾರದ ಪರವಾಗಿ, ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ನೇತೃತ್ವದ ಒಂಭತ್ತು ನ್ಯಾಯಾಧೀಶರ ಪೀಠದ ಮುಂದೆ ತಮ್ಮ ವಾದವನ್ನು ಮಂಡಿಸಿದರು.  ಖಾಸಗಿತನಕ್ಕೆ ಯಾವುದೇ ಮೂಲಭೂತ ಹಕ್ಕು ಇಲ್ಲ. ಇದು ಮೇಲ್ನೋಟಕ್ಕೆ ಮೂಲಭೂತ ಹಕ್ಕು ಎಂದು ಕಂಡುಬಂದರೂ, ಅದು ಬಹು ಆಯಾಮಗಳನ್ನು ಒಳಗೊಂಡಿದೆ. ಹೀಗಾಗಿ ಇದನ್ನು ಮೂಲಭೂತ ಹಕ್ಕಾಗಿ ಪರಿಗಣಿಸುವುದು ಅಸಾಧ್ಯ ಎಂದು ಅವರು ತಿಳಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin