ನಾಳೆ ನಿತೀಶ್ ಕುಮಾರ್‍ಗೆ ಅಗ್ನಿಪರೀಕ್ಷೆ

ಈ ಸುದ್ದಿಯನ್ನು ಶೇರ್ ಮಾಡಿ

Nitish-Kuamr--01

ಪಾಟ್ನಾ, ಜು.27-ಬಿಹಾರದ ನೂತನ ಮುಖ್ಯಮಂತ್ರಿಯಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿರುವ ನಿತೀಶ್ ಕುಮಾರ್‍ಗೆ ನಾಳೆ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಸುವರು. ಬಹುಮತ ಸಾಬೀತು ಮಾಡಲು ನಾಳೆ ವಿಧಾನಸಭೆ ವಿಶೇಷ ಅಧಿವೇಶನ ಕರೆಯಲಾಗಿದೆ ಎಂದು ಬಿಹಾರ ಸರ್ಕಾರದ ಸಂಪುಟ ಸಮನ್ವಯ ಇಲಾಖೆ ಮುಖ್ಯ ಕಾರ್ಯದರ್ಶಿ ಬ್ರಿಜೇಶ್ ಮಲ್ಹೋತ್ರಾ ತಿಳಿಸಿದ್ದಾರೆ.  ಈ ಅಧಿವೇಶನದಲ್ಲಿ ಎಲ್ಲ ಸದಸ್ಯರೂ ಕಡ್ಡಾಯವಾಗಿ ಭಾಗವಹಿಸುವಂತೆ ವಿಧಾನಸಭಾಧ್ಯಕ್ಷ ವಿಜಯ ಕುಮಾರ್ ಚೌಧರಿ ಸೂಚನೆ ನೀಡಿದ್ದಾರೆ.

243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ ಜೆಡಿಯು ಮತ್ತು ಬಿಜೆಪಿಯ ನೂತನ ಎನ್‍ಡಿಎ ಮೈತ್ರಿಕೂಟದಲ್ಲಿ 132 ಸದಸ್ಯರಿದ್ದಾರೆ. ಜೆಡಿಯು-71, ಬಿಜೆಪಿ-53, ಆರ್‍ಎಲ್‍ಎಸ್‍ಪಿ-2, ಎಲ್‍ಜೆಪಿ-2, ಎಚ್‍ಎಎಂ-1 ಮತ್ತು ಮೂವರು ಪಕ್ಷೇತರ ಶಾಸಕರನ್ನು ಒಳಗೊಂಡಿದೆ. ಸರ್ಕಾರ ರಚನೆಗೆ 122 ಸದಸ್ಯ ಬಲದ ಅಗತ್ಯವಿದೆ. ಇರುವುದರಿಂದ ನಿತೀಶ್ ವಿಶ್ವಾಸ ಮತದಲ್ಲಿ ಜಯಶೀಲರಾಗುವುದು ನಿಶ್ಚಿತ.

ಮಹಾಮೈತ್ರಿ ಮುರಿದು ಬಿದ್ದು ಸಂಕಷ್ಟದಲ್ಲಿರುವ ಆರ್‍ಜೆಡಿ 81 ಶಾಸಕರನ್ನು ಹೊಂದಿದೆ. ಕಾಂಗ್ರಸ್‍ನ 27 ಶಾಸಕರು ಮತ್ತು ಸಿಪಿಐ-ಎಂಎಲ್‍ನ ಮೂವರು ಆರ್‍ಜೆಡಿಗೆ ಬೆಂಬಲ ಘೋಷಿಸಿದ್ದಾರೆ. ಇವರೆಲ್ಲರೂ ಸೇರಿ 110 ಸದಸ್ಯರಿದ್ದು, ಮ್ಯಾಜಿಕ್ ನಂಬರ್‍ಗೆ 12 ಸದಸ್ಯರ ಕೊರತೆ ಇದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin