ಬಿಹಾರದ ಜನರಿಗೆ ನಿತೀಶ್ ಹೇಗೆ ಮುಖ ತೋರಿಸುತ್ತಾರೆ : ಲಾಲು ಪ್ರಶ್ನೆ

Nitish--01

ರಾಂಚಿ, ಜು.27-ರಾಜ್ಯದ ಜನತೆಯ ಬೆನ್ನಿಗೆ ಚೂರಿ ಹಾಕಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರಜೆಗಳಿಗೆ ಹೇಗೆ ಮುಖ ತೋರಿಸುತ್ತಾರೆ ಎಂದು ರಾಷ್ಟ್ರೀಯ ಜನತಾದಳ (ಆರ್‍ಜೆಡಿ) ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಪ್ರಶ್ನಿಸಿದ್ದಾರೆ.  ಬಹುಕೋಟಿ ರೂ. ಮೇವು ಹಗರಣದ ವಿಚಾರಣೆಗಾಗಿ ರಾಂಚಿಯಲ್ಲಿರುವ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಬಿಜೆಪಿ ಜೊತೆ ಕೈಜೋಡಿಸುವುದಿಲ್ಲ ಎಂದು ಪ್ರಮಾಣ ಮಾಡಿದ್ದ ನಿತೀಶ್ ಈಗ ಆ ಪಕ್ಷದೊಂದಿಗೆ ಸಖ್ಯ ಬೆಳೆಸಿ ಸರ್ಕಾರ ರಚನೆಗೆ ಮುಂದಾಗಿದ್ಧಾರೆ. ಇದು ರಾಜ್ಯದ ಜನತೆಗೆ ಬಗೆದಿರುವ ಮಹಾದ್ರೋಹ ಎಂದು ಟೀಕಿಸಿದರು.

ನಿತೀಶ್‍ಗೆ ಅಧಿಕಾರದ ದುರಾಸೆ. ಉಪ ಮುಖ್ಯಮಂತ್ರಿಯಾಗಿದ್ದ ತಮ್ಮ ಪುತ್ರ ತೇಜಸ್ವಿ ಯಾದವ್ ಬೆಳವಣಿಗೆ ಸಹಿಸದೇ ಆತನನ್ನು ವ್ಯವಸ್ಥಿತವಾಗಿ ಮಟ್ಟ ಹಾಕುವ ಉದ್ದೇಶದಿಂದ ಇಲ್ಲಸಲ್ಲದ ಆರೋಪಗಳನ್ನು ಮಾಡಿ ತೇಜೋವಧೆ ಮಾಡಲಾಗಿದೆ ಎಂದು ಲಾಲು ಕಿಡಿಕಾರಿದರು.  ಜನತೆಯೇ ಪಾಠ ಕಲಿಸುತ್ತಾರೆ : ನಿತೀಶ್ ಕುಮಾರ್ ಜನರನ್ನು ಮೂರ್ಖರೆಂದು ಪರಿಗಣಿಸಿದ್ದಾರೆ. ಆದರೆ ಜನರು ಮುಂದಿನ ಚುನಾವಣೆಯಲ್ಲಿ ಇಂಥ ಸ್ವಾರ್ಥಿಗಳಿಗೆ ತಕ್ಕ ಪಾಠ ಕಲಿಸುತ್ತಾರೆ. ನನ್ನ ಮೇಲಿನ ರಾಜಕೀಯ ಹಗೆತನದ ವಿಷವರ್ತುಲ ಜೆಡಿಯು ಮತ್ತು ಬಿಜೆಪಿ ಮೈತ್ರಿಯಿಂದ ಬಯಲಾಗಿದೆ ಎಂದು ತೇಜಸ್ವಿ ಯಾದವ್ ಛೇಡಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin