ವರುಣಾ ಕ್ಷೇತ್ರದಲ್ಲೊಂದು ಶಾಪಗ್ರಸ್ಥ ಅಗಸ್ತಪುರ

ಈ ಸುದ್ದಿಯನ್ನು ಶೇರ್ ಮಾಡಿ

T-Narasipura--01

ಟಿ.ನರಸೀಪುರ, ಜು.27- ಕುಡಿಯುವ ನೀರಿಗಾಗಿ ಕಳೆದ ಆರು ತಿಂಗಳಿನಿಂದಲೂ ಖಾಲಿ ಕೊಡ ಒತ್ತು ಮೈಲಿಗಟ್ಟಲೇ ಕ್ರಮಿಸುತ್ತಿರುವ ಮಹಿಳೆಯರು, ಸ್ಕೂಟರ್ ಹಾಗೂ ಎತ್ತಿನ ಗಾಡಿಗಳಲ್ಲಿ ಕುಡಿಯುವ ನೀರು ಹೊತ್ತು ತಂದು ದಿನ ದೂಡುತ್ತಿರುವ ಗ್ರಾಮಸ್ಥರು, ಇದೂ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣಾ ವಿಧಾನ ಸಭಾ ಕ್ಷೇತ್ರದ ತಾಲ್ಲೂಕಿನ ತುಂಬಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಗಸ್ತಪುರದ ಬವಣೆ. ಗ್ರಾಮದಲ್ಲಿ ಕುರುಬ ಸಮುದಾಯದ 80 ಕುಟುಂಬಗಳು ವಾಸವಿದ್ದು 300-400 ಜನಸಂಖ್ಯೆ ಹೊಂದಿರುವ ಈ ಗ್ರಾಮದಲ್ಲಿ ಸಿಎಂ ಆಪ್ತ ಸಂಬಂಧಿಕರೇ ಹೆಚ್ಚು ವಾಸ ಮಾಡುತ್ತಿದ್ದಾರೆ.

ಕುಡಿಯುವ ನೀರಿನ ಸಮಸ್ಯೆ ಕುರಿತಂತೆ ಗ್ರಾಮಸ್ಥರು ಸಂಬಂಧಪಟ್ಟ ಜಿಲ್ಲಾ, ತಾಲ್ಲೂಕು, ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದರೂ ಸಮಸ್ಯೆ ಬಗೆಹರಿಸಲು ಮುಂದಾಗದ ಅಧಿಕಾರಿಗಳ ವಿರುದ್ದ ಗ್ರಾಮಸ್ಥರು ಆಕ್ರೋಶ ವಕ್ತಪಡಿಸಿದ್ದಾರೆ. ನಮ್ಮ ಅಕ್ಕ ಪಕ್ಕದ ಗ್ರಾಮಕ್ಕೆ ಭೇಟಿ ನೀಡುವ ಸಿಎಂ ಪುತ್ರ ಡಾ.ಯತೀಂದ್ರ ನಮ್ಮ ಗ್ರಾವiಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸದಿರುವುದಕ್ಕೆ ಗ್ರಾಮಸ್ಥರಾದ ಅಂಗಡಿ ಮಹದೇವು, ಶೇಖರ್, ಮಹದೇವಸ್ವಾಮಿ, ಲೀಲಾವತಿ, ಮರಮ್ಮ, ರೇವಮ್ಮ, ನಿಂಗೇಗೌಡ ಬೇಸರ ವ್ಯಕ್ತಪಡಿಸಿದ್ದಾರೆ. ಈ ಗ್ರಾಮಕ್ಕೆ ಮೂಲ ಸೌಲಭ್ಯ ಸಂಪೂರ್ಣ ಮರೀಚಿಕೆಯಾಗಿದ್ದು, ಗ್ರಾಮದಲ್ಲಿರುವ ಚರಂಡಿಗಳನ್ನು ಸ್ವಚ್ಛತೆ ಮಾಡದ ಕಾರಣ ತ್ಯಾಜ್ಯಯುಕ್ತ ಕೊಳಚೆ ನೀರು ತುಂಬಿ ಗಬ್ಬು ನಾರುತ್ತಿದೆ.

ಕುಡಿಯುವ ನೀರಿಗಾಗಿ ನಿರ್ಮಾಣ ಮಾಡಲಾಗಿರುವ ಮೂರು ತೊಂಬೆಗಳು ನೀರಿನ ಸಂಪರ್ಕ ಇಲ್ಲದೇ ಆಡು, ಕುರಿ ಹಾಗೂ ದನಗಳ ಕೊಟ್ಟಿಗೆಯಾಗಿ ಮಾರ್ಪಾಡಾಗಿವೆ. ಗ್ರಾಮದಲ್ಲಿ ಬರಿ ಕುರುಬ ಜನಾಂಗದ ಜನರ ಇದ್ದಾರೆಂಬ ಕಾರಣಕ್ಕೆ ನಮ್ಮ ಸಮಸ್ಯೆಗಳಿಗೆ ಸ್ಪಂದಿಸಲು ಹಿಂದೇಟು ಹಾಕುತ್ತಿದ್ದು ಇತರೆ ವರ್ಗದ ಜನರು ಇಲ್ಲಿ ವಾಸ ಮಾಡುತ್ತಿದ್ದರೇ ನಮ್ಮ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸುತ್ತಿದ್ದರೇನೋ ಎಂಬ ಅನುಮಾನ ನನ್ನನ್ನು ಕಾಡುತ್ತಿದೆ. ಹಾಗಾಗಿ ಇನ್ನಾದರೂ ಅಧಿಕಾರಿಗಳು ಇತ್ತ ಗಮನಹರಿಸಿ ಸಮಸ್ಯೆ ಬಗೆಹರಿಸಬೇಕಿದೆ ಎನ್ನುವುದು ಗ್ರಾಮಸ್ಥರ ಬೇಡಿಕೆಯಾಗಿದೆ.

ಗ್ರಾಮದಲ್ಲಿ ಉದ್ಬವಿಸಿರುವ ಕುಡಿಯುವ ನೀರಿನ ಸಮಸ್ಯೆ ಕುರಿತು ನನ್ನ ಗಮನಕ್ಕೆ ಬಂದಿಲ್ಲ. ಈ ಕೂಡಲೇ ಸಂಬಂಧಪಟ್ಟ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳಿಗೆ ಸೂಚನೆ ನೀಡಿ ಸಮಸ್ಯೆ ಬಗೆಹರಿಸಲು ಕ್ರಮವಹಿಸಲಾಗುವುದು ಎಂದು ತಾಪಂ ಇಒ ಬಿ.ಎಸ್.ರಾಜು ಭರವಸೆ ನೀಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin