ಸಾಮಾನ್ಯ ವಲಯಗಳ ನಿಯಂತ್ರಣಕ್ಕೆ ಹೊಸ ಕಾಯ್ದೆ : ಎಎಪಿ ಆಕ್ಷೇಪ

AAP--01

ಬೆಂಗಳೂರು, ಜು.27- ಜುಲೈ 1ರ ನಗರಾಭಿವೃದ್ಧಿ ಕಾರ್ಯದರ್ಶಿಗಳ ಸೂಚನೆ ಹಿನ್ನೆಲೆಯಲ್ಲಿ ಸಾಮಾನ್ಯ ವಲಯಗಳ ನಿಯಂತ್ರಣಕ್ಕೆ ಹೊಸ ಮಾರ್ಪಾಡುಗಳನ್ನು ತರಲು ಹೊರಟಿ ರುವ ನಗರಾಭಿವೃದ್ಧಿ ಇಲಾಖೆಯ ಕ್ರಮವನ್ನು ಆಮ್ ಆದ್ಮಿ ಪಾರ್ಟಿ ಖಂಡಿಸಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಸಹಸಂಚಾಲಕಿ ಶಾಂತದಾವೆಲ್ಲ ಅವರು, ಜನರು ವಾಸವಿರುವುದು 29 ಫೀಟ್‍ಗೂ ಕಡಿಮೆ ಅಗಲವಿರುವ ರಸ್ತೆಗಳ ಪ್ರದೇಶಗಳಲ್ಲಿ ಮತ್ತು ಇದರಿಂದ ಅವರು ಈ ಸೂಚನೆಯನ್ವಯ ಆ ಪ್ರದೇಶಗಳಲ್ಲಿ ಯಾವುದೇ ವ್ಯಾಪಾರ ಮಾಡುವಂತಿಲ್ಲ. ಇದರಿಂದ ಅವರ ಜೀವನಕ್ಕೆ ಕುತ್ತು ತಂದಂತಾಗುತ್ತದೆ ಎಂದರು.

ತಕ್ಷಣವೇ ಗೆಜೆಟ್ ನೋಟಿಫಿಕೇಷನ್ ಹಿಂಪಡೆಯಬೇಕು. ದೀರ್ಘಕಾಲೀನ ಸಮಗ್ರ ಮಾಸ್ಟರ್ ಯೋಜನೆ ತಯಾರಿಸಬೇಕು ಮತ್ತು ಮುಂದಿನ 25 ವರ್ಷಗಳಲ್ಲಿ ಯೋಜಿತ ಬೆಳವಣಿಗೆಯನ್ನು ಮುಂದಿಟ್ಟು ಕೆಲಸ ಮಾಡಬೇಕು ಎಂಬ ಬೇಡಿಕೆಗಳನ್ನು ಅವರು ಮುಂದಿಟ್ಟಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin