ಸೂರ್ಯಶಿಕಾರಿ : ಜೆಟ್‍ನಲ್ಲಿ ಖಗ್ರಾಸ ಸೌರಗ್ರಹಣ ಬೆನ್ನಟ್ಟಲಿದ್ದಾರೆ ನಾಸಾ ವಿಜ್ಞಾನಿಗಳು

ಈ ಸುದ್ದಿಯನ್ನು ಶೇರ್ ಮಾಡಿ

Solar

ವಾಷಿಂಗ್ಟನ್, ಜು.27-ಮುಂದಿನ ತಿಂಗಳು 21ರಂದು ಘಟಿಸಲಿರುವ ಸಂಪೂರ್ಣ ಸೂರ್ಯಗ್ರಹಣದಲ್ಲಿ ಅಪೂರ್ವ ವಿದ್ಯಮಾನವೊಂದು ನಡೆಯಲಿದೆ. ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ-ನಾಸಾದ ವಿಜ್ಞಾನಿಗಳು ಎರಡು ಅತ್ಯಾಧುನಿಕ ಸಂಶೋಧನಾ ಜೆಟ್‍ಗಳನ್ನು ಬಳಸಿ ಗ್ರಹಣ ಕೌತುಕದ ಬೆನ್ನಟ್ಟಲಿದ್ದಾರೆ. ಅಂತರಿಕ್ಷ ವಿಜ್ಞಾನ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿರುವ ಈ ಸಾಹಸದ ಬಗ್ಗೆ ವಿಶ್ವವೇ ಕಾತುರದಿಂದ ನಿರೀಕ್ಷಿಸುತ್ತದೆ.

ಗ್ರಹಣದ ಸಂದರ್ಭದಲ್ಲಿ ಮತ್ತು ಆನಂತರ ಸೂರ್ಯನ ಬಾಹ್ಯ ವಾತಾವರಣದ ಪ್ರತಿಬಿಂಬಗಳನ್ನು ಆದಷ್ಟು ಹತ್ತಿರದಿಂದ ಸೆರೆ ಹಿಡಿಯುವ ಪ್ರಪ್ರಥಮ ಪ್ರಯತ್ನ ಇದಾಗಿದೆ. ಅಮೆರಿಕದ ಸೌತ್‍ವೆಸ್ಟ್ ರಿಸರ್ಚ್ ಇನ್ಸ್‍ಟಿಟ್ಯೂಟ್‍ನ ಅಮಿರ್ ಕಾಪ್ಸಿ ಮತ್ತು ಅವರ ತಂಡವು ನಾಸಾದ ಎರಡು ಡಬ್ಲ್ಯುಬಿ-57ಎಫ್ ಸಂಶೋಧನಾ ಜೆಟ್ ವಿಮಾನಗಳನ್ನು ಬಳಸಿ ಅ.21ರಂದು ರಾತ್ರಿ ಅಮೆರಿಕದ ಆಗಸದಲ್ಲಿ ಸೂರ್ಯಗ್ರಹಣದಲ್ಲಿ ಸಂಭವಿಸುವ ಕತ್ತಲು ವಲಯವನ್ನು ಬೆನ್ನಟ್ಟಲಿದ್ದಾರೆ.

ಈ ಅಂತರಿಕ್ಷ ಸಾಹಸಕ್ಕಾಗಿ ಈಗಿನಿಂದಲೇ ಸಾಕಷ್ಟು ಸಿದ್ದತೆಗಳು ನಡೆಯುತ್ತಿವೆ. ಜೆಟ್‍ನ ಮೂಗಿನ ಮೇಲೆ ಸೂಕ್ಷ್ಮ ಕ್ಯಾಮೆರಾ ಹೊಂದಿರುವ ಎರಡು ಅತ್ಯಂತ ಪ್ರಬಲ ದೂರದರ್ಶಕಗಳನ್ನು ಅಳವಡಿಸಿ ಗ್ರಹಣದ ಸಂದರ್ಭದಲ್ಲಿ ಸೂರ್ಯನ ಕರೋನಾ ವಲಯದ ಸ್ಪಷ್ಟ ಪ್ರತಿಬಿಂಬಗಳನ್ನು ಸೆರೆಹಿಡಿಯಲಿದೆ. ಇದೇ ವೇಳೆ ಈ ವಿದ್ಯಮಾನ ನಡೆಯುವ ಸಂದರ್ಭದಲ್ಲೇ ಸನಿಹದಲ್ಲಿರುವ ಬುಧ ಗ್ರಹದ ಉಷ್ಣ ವಲಯದ ಚಿತ್ರಗಳನ್ನೂ ಕ್ಲಿಕ್ಕಿಸಲಿದೆ. ಗ್ರಹದ ಮೇಲ್ಮೈನಲ್ಲಿ ತಾಪಮಾನ ಯಾವ ರೀತಿ ಬದಲಾವಣೆಯಾಗುತ್ತದೆ ಎಂಬ ಸಂಗತಿಯನ್ನು ಈ ಪ್ರಯೋಗ ಮೊದಲ ಬಾರಿಗೆ ಬಹಿರಂಗಗೊಳಿಸಲಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin