ಇಂದೂ ಕೂಡ ಅಗಲಿದ ಸ್ನೇಹಿತನ ಎದುರು ಕೂತು ಕಣ್ಣೀರಿಟ್ಟ ಖರ್ಗೆ

Dharma-Sing--04

ಬೆಂಗಳೂರು, ಜು.28-ತಮ್ಮ ಸ್ನೇಹಿತನ ಅಗಲಿಕೆಯ ನೋವಿನ ದುಃಖ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಮುಖದಲ್ಲಿ ಇಂದೂ ಕೂಡ ಉಮ್ಮಳಿಸಿ ಬರುತ್ತಿತ್ತು. ತನ್ನ ಆಪ್ತ ಗೆಳೆಯನ ಅಂತಿಮ ಸಂಸ್ಕಾರಕ್ಕೆ ನೆಲೊಗಿಗೆ ಆಗಮಿಸಿದ ಅವರು, ಪಾರ್ಥಿವ ಶರೀರಕ್ಕೆ ನಮನ ಸಲ್ಲಿಸಿ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರ ಪುತ್ರರನ್ನು ಅಪ್ಪಿ ಗಳಗಳನೆ ಅತ್ತರು. ಧರ್ಮಸಿಂಗ್ ಅವರ ಪತ್ನಿಗೆ ಸಾಂತ್ವಾನ ಹೇಳಿದರು. ನನ್ನ ಕುಟುಂಬದ ಸದಸ್ಯರೊಬ್ಬರನ್ನು ಕಳೆದುಕೊಂಡಿರುವುದರಿಂದ ನನಗೆ ಅತೀವ ನೋವಾಗಿದೆ ಎಂದು ಅವರು ಕಂಬನಿ ಮಿಡಿದರು. [ ಧರ್ಮಸಿಂಗ್ ಅವರ ಅಂತಿಮ ದರ್ಶನಕ್ಕೆ ಹರಿದು ಬಂದ ಜನಸಾಗರ  ]

ಬೆಳಗ್ಗೆಯೇ ಆಗಮಿಸಿದ್ದ ಅವರು ಸಂಜೆಯವರೆಗೆ ಇದ್ದು, ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು. ಕಾಲನಲ್ಲಿ ಲೀನನಾದ ಸ್ನೇಹಿತನ ನೋವು ಮರೆಯಲಾಗದೆ ದುಃಖಿಸುತ್ತಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin