ಇನ್ನಿಬ್ಬರು ಶಾಸಕರ ರಾಜೀನಾಮೆ : ಗುಜರಾತ್ ಕಾಂಗ್ರೆಸ್‍ನಲ್ಲಿ ಭಾರೀ ಆಯೋಮಯ

ಈ ಸುದ್ದಿಯನ್ನು ಶೇರ್ ಮಾಡಿ

Congress-01

ಅಹಮದಾಬಾದ್, ಜು.28-ಬಿಹಾರದಲ್ಲಿ ಮಹಾಮೈತ್ರಿ ಒಡಕಿನ ಆಘಾತದಿಂದ ಚೇತರಿಸಿಕೊಳ್ಳುವ ಮುನ್ನವೇ ಕಾಂಗ್ರೆಸ್ ಗುಜರಾತ್‍ನಲ್ಲೂ ಭಾರೀ ಆಘಾತಕ್ಕೆ ಒಳಗಾಗಿದ್ದು ಆಯೋಮಯ ವಾತಾವರಣ ಸೃಷ್ಟಿಯಾಗಿದೆ. ದಿಢೀರ್ ಬೆಳವಣಿಗೆಯಲ್ಲಿ ನಿನ್ನೆ ಕಾಂಗ್ರೆಸ್‍ನ ಮೂವರು ಶಾಸಕರು ಬಿಜೆಪಿ ಸೇರಿದ ಬೆನ್ನಲ್ಲೇ ಇಂದು ಇನ್ನಿಬ್ಬರು ಕೈ ಶಾಸಕರು ಪಕ್ಷಕ್ಕೆ ಕೈಕೊಟ್ಟಿದ್ದಾರೆ. ಗುಜರಾತ್‍ನಲ್ಲಿ ರಾಜ್ಯಸಭೆಯ 9 ಸ್ಥಾನಗಳಿಗೆ ಒಂದು ತಿಂಗಳ ಅಂತರದಲ್ಲಿ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಮಹತ್ವ ಪಡೆದುಕೊಂಡಿದೆ.

ಗುಜರಾತ್ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ತೊರೆದಿರುವ ಶಂಕರ್ ಸಿಂಗ್ ವಘೇಲಾ ಹಾದಿಯನ್ನೇ ಮೂವರು ಶಾಸಕರು ಅನುಸರಿಸಿದ್ಧಾರೆ. ಕಾಂಗ್ರೆಸ್ ಮುಖ್ಯ ಸಚೇತಕ ಬಲವಂತ್ ಸಿನ್ಹಾ ರಜಪೂತ್, ತೇಜಶ್ರೀ ಪಟೇಲ್ ಮತ್ತು ಪ್ರಹ್ಲಾದ್ ಪಟೇಲ್ ಪಕ್ಷಕ್ಕ ರಾಜೀನಾಮೆ ನೀಡಿದ್ದರು. ಇದರ ಬೆನ್ನಲ್ಲೆ ವಘೇಲಾರ ಆಪ್ತರಾದ ಮಾಜಿ ಸಚಿವ ಮಾನ್‍ಸಿಂಗ್ ಚೌಧರಿ ಮತ್ತು ಸಾನಾಬಾಯಿ ಚೌದರಿ ಸಹ ಕಾಂಗ್ರೆಸ್‍ಗೆ ಗುಡ್‍ಬೈ ಹೇಳಿದ್ದಾರೆ. ಈವರೆಗೆ ಐವರು ಕಾಂಗ್ರೆಸ್ ಶಾಸಕರು ಪಕ್ಷಕ್ಕೆ ರಾಜೀನಾಮೆ ನೀಡಿದ್ದು. 182 ಸ್ಥಾನಗಳ ವಿಧಾನಸಭೆಯಲ್ಲಿ ಕೈ ಬಲ 51ಕ್ಕೆ ಕುಸಿದಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin