ಚೀನಾ ಜೊತೆ ಡೋಕ್ಲಾ ಬಿಕ್ಕಟ್ಟು : ಸೌಹಾರ್ದ ಪರಿಹಾರಕ್ಕೆ ಸಿದ್ದ ಎಂದ ಕೇಂದ್ರ ಸರ್ಕಾರ

singh

ನವದೆಹಲಿ, ಜು.28-ಈಶಾನ್ಯ ರಾಜ್ಯ ಸಿಕ್ಕಿಂ ವಲಯದ ಡೋಕ್ಲಾದಲ್ಲಿ ಭಾರತ ಮತ್ತು ಚೀನಾ ನಡುವೆ ಭುಗಿಲೆದ್ದಿರುವ ಸೇನಾ ಸಂಘರ್ಷದ ಬಿಕ್ಕಟ್ಟನ್ನು ಉಭಯ ದೇಶಗಳಿಗೂ ಒಪ್ಪಿಗೆಯಾಗುವ ರೀತಿಯಲ್ಲಿ ಸೌಹಾರ್ದ ಪರಿಹಾರ ಕಂಡುಕೊಳ್ಳಲು ಸಿದ್ದವಿರುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ. ವಿದೇಶಾಂಗ ವ್ಯವಹಾರಗಳ ಸಹಾಯಕ ಸಚಿವ ವಿ.ಕೆ.ಸಿಂಗ್, ಲೋಕಸಭೆಯಲ್ಲಿ ಈ ಕುರಿತು ಲಿಖಿತ ಹೇಳಿಕೆ ನೀಡಿದ್ದು, ಬಿಕ್ಕಟ್ಟು ಶಮನಕ್ಕಾಗಿ ಕೇಂದ್ರ ಸರ್ಕಾರವು ಭೂತಾನ್ ಜೊತೆ ನಿರಂತರ ಸಂಪರ್ಕದಲ್ಲಿದೆ ಎಂದು ತಿಳಿಸಿದ್ಧಾರೆ.

ವಿವಾದಿತ ಸ್ಥಳದಲ್ಲಿ ಚೀನಾ ರಸ್ತೆ ನಿರ್ಮಿಸುವುದನ್ನು ಭಾರತ ಸೇನೆ ತಡೆದ ನಂತರ, ಡೋಕ್ಲಾ ಪ್ರದೇಶದಲ್ಲಿ ಭಾರತ ಮತ್ತು ಚೀನಾ ಯೋಧರು ಪರಸ್ಪರ ಮುಖಾಮುಖಿಯಾಗಿದ್ದಾರೆ. ಈ ನಡುವೆಯೇ ಭೂತಾನ್ ಕೂಡ ಈ ಭಾಗವನ್ನು ತನ್ನದೆಂದು ಹೇಳಿಕೊಳ್ಳುತ್ತಿದೆ. ಈ ಬಿಕ್ಕಟ್ಟನ್ನು ಸೌಹಾರ್ದಯುತವಾಗಿ ಇತ್ಯರ್ಥಗೊಳಿಸಲು ಭಾರತ ಬದ್ದವಾಗಿದೆ ಎಂದು ಸಿಂಗ್ ಹೇಳಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin