ಟ್ರಂಪ್ ಆದೇಶಿಸಿದರೆ ಮುಂದಿನ ವಾರವೇ ಚೀನಾ ಮೇಲೆ ಪರಮಾಣು ಬಾಂಬ್ ದಾಳಿ..!

Trump--01

ಕ್ಯಾನ್‍ಬೆರಾ(ಆಸ್ಟ್ರೇಲಿಯಾ), ಜು.28-ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶ ನೀಡಿದರೆ ಮುಂದಿನ ವಾರ ಚೀನಾ ಮೇಲೆ ಪರಮಾಣು ದಾಳಿ ನಡೆಸುವುದಾಗಿ ಅಮೆರಿಕದ ಪೆಸಿಫಿಕ್ ನೌಕಾ ಕಮಾಂಡರ್ ಆಡ್ಮಿರಲ್ ಸ್ಕಾಟ್ ಸ್ವೀಫ್ಟ್ ಹೇಳಿದ್ದಾರೆ. ಆಸ್ಟ್ರೇಲಿಯಾ ಕರಾವಳಿಯಲ್ಲಿ ಅಮೆರಿಕ-ಆಸ್ಟ್ರೇಲಿಯಾ ಬೃಹತ್ ಜಂಟಿ ಸೇನಾಭ್ಯಾಸದ ಬಳಿಕ, ಆಸ್ಟ್ರೇಲಿಯನ್ ನ್ಯಾಷನಲ್ ಯೂನಿವರ್ಸಿಟಿಯಲ್ಲಿ ನಡೆದ ಭದ್ರತಾ ಸಮಾವೇಶದಲ್ಲಿ ಸಭಿಕರೊಬ್ಬರು ಕೇಳಿದ ಪ್ರಶ್ನೆ ಸ್ಕಾಟ್ ಈ ರೀತಿ ಉತ್ತರಿಸಿದ್ದಾರೆ.

ಅಧ್ಯಕ್ಷ ಟ್ರಂಪ್ ಆದೇಶ ನೀಡಿದರೆ ಮುಂದಿನ ವಾರ ಚೀನಾ ಮೇಲೆ ಪರಮಾಣು ದಾಳಿ ನಡೆಸುವಿರಾ ಎಂದು ಎಂದು ಸಭಿಕರ ಪ್ರಶ್ನಿಸಿದಾಗ, ಇದಕ್ಕೆ ನನ್ನ ಉತ್ತರ ಹೌದು ಅವರು ಸ್ಪಷ್ಟವಾಗಿ ತಿಳಿಸಿದರು.  ಅಮೆರಿಕದ ಸಾರ್ವಭೌಮತ್ವವನ್ನು ರಕ್ಷಿಸಲು ವಿದೇಶಿಯರಾಗಲಿ ಅಥವಾ ದೇಶಿಯರಾಗಲಿ ಎಲ್ಲ ವೈರಿಗಳ ವಿರುದ್ಧ ಹೋರಾಡಲು ಸೇನೆ ಬದ್ಧವಾಗಿದೆ ಎಂದು ಅವರು ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin