ಪ್ರಧಾನಿ ನವಾಜ್ ಷರೀಫ್ ಪದಚ್ಯುತಿ, ಪಾಕ್ ರಾಜಕೀಯ ಅಲ್ಲೋಲ-ಕಲ್ಲೋಲ

ಈ ಸುದ್ದಿಯನ್ನು ಶೇರ್ ಮಾಡಿ

Nawaz-Shareef--1

ಇಸ್ಲಮಾಬಾದ್, ಜು.28- ಬಹುಕೋಟಿ ಪನಾಮ ಗೇಟ್ ಲಂಚ ಹಗರಣದಲ್ಲಿ ಪಾಕಿಸ್ತಾನದ ಪ್ರಧಾನಮಂತ್ರಿ ನವಾಜ್ ಷರೀಫ್ ಅವರನ್ನು ಸುಪ್ರೀಂಕೋರ್ಟ್ ದೋಷಿ ಎಂದು ಘೋಷಿಸಿದೆಯಲ್ಲದೆ ಪ್ರಧಾನಿ ಹುದ್ದೆಯಿಂದ ಅವರನ್ನು ಅನರ್ಹಗೊಳಿಸಿದೆ. ಈ ಬೆಳವಣಿಗೆಯಿಂದಾಗಿ ಪಾಕಿಸ್ತಾನದಲ್ಲಿ ರಾಜಕೀಯ ಅಲ್ಲೋಲ-ಕಲ್ಲೋಲ ಸೃಷ್ಟಿಯಾಗಿದ್ದು, ಪಾಕ್‍ನಲ್ಲಿ ಮಿಲಿಟರಿ ಆಡಳಿತ ವಿಧಿಸುವುದು ಬಹುತೇಕ ಖಚಿತವಾಗಿದೆ. ನವಾಜ್ ಷರೀಫ್ ಹಾಗೂ ಅವರ ಕುಟುಂಬದ ವಿರುದ್ಧ ಪನಾಮಗೇಟ್ ಲಂಚ ಪ್ರಕರಣದ ವಿಚಾರಣೆಯನ್ನು ನಿನ್ನೆ ಮುಕ್ತಾಯಗೊಳಿಸಿದ್ದ ಸುಪ್ರೀಂಕೋರ್ಟ್‍ನ ಪಂಚ ನ್ಯಾಯಾಧೀಶರ ಪೀಠವು ಇಂದು ಈ ಮಹತ್ವದ ತೀರ್ಪು ನೀಡಿದೆ.

ಈ ತೀರ್ಪು ನವಾಜ್ ಶರೀಫ್ ಅವರ ರಾಜಕೀಯ ಭವಿಷ್ಯವನ್ನೇ ಪ್ರಪಾತಕ್ಕೆ ತಳ್ಳಿದ್ದು, ಮುಂದಿನ ಬೆಳವಣಿಗೆ ತೀವ್ರ ಕುತೂಹಲ ಕೆರಳಿಸಿದೆ.
ನವಾಜ್ ವಿರುದ್ಧದ ಪನಾಮಗೇಟ್ ಲಂಚ ಹಗರಣವನ್ನು ವಿಚಾರಣೆಗಾಗಿ ಭ್ರಷ್ಟಾಚಾರ ನಿಗ್ರಹ ಕೋರ್ಟ್‍ಗೆ ಸುಹ ವಹಿಸಿದೆ.  ಭಾರೀ ಭ್ರಷ್ಟಾಚಾರ ಹಗರಣದಲ್ಲಿ ಶಾಮೀಲಾಗಿರುವ ನವಾಜ್ ಶರೀಫ್ ಪ್ರಧಾನಿ ಹುದ್ದೆಯಲ್ಲಿ ಮುಂದುವರಿಯಲು ಅನರ್ಹರು. ಅವರನ್ನು ಆ ಸ್ಥಾನದಿಂದ ಪದಃಚ್ಯುತಗೊಳಿಸುವುದೇ ಸೂಕ್ತ ಎಂದು ಪೀಠವು ಘೋಷಿಸಿತು.

ನವಾಜ್ ಶರೀಫ್ ಹಾಗೂ ಅವರ ಮಕ್ಕಳ ವಿರುದ್ಧ ಆರು ವಾರಗಳೊಳಗೆ ಪ್ರಕರಣ ದಾಖಲಿಸುವಂತೆ ನ್ಯಾಷನಲ್ ಅಕೌಂಟೆಬಿಲಿಟಿ ಬ್ಯೂರೋ (ರಾಷ್ಟ್ರೀಯ ಉತ್ತರದಾಯಿತ್ವ ಮಂಡಳಿ)ಗೆ ಸುಪ್ರೀಂಕೋರ್ಟ್ ಆದೇಶ ನೀಡಿದೆ. ಈ ತೀರ್ಪಿನಿಂದಾಗಿ ಪಾಕಿಸ್ತಾನದಲ್ಲಿ ರಾಜಕೀಯ ಪರಿಸ್ಥಿತಿ ಸಂಪೂರ್ಣ ಅಯೋಮಯವಾಗಿದೆ. ಪ್ರಸ್ತುತ ಡೋಲಾಯಮಾನ ಸನ್ನಿವೇಶದಲ್ಲಿ ಪಾಕ್‍ನಲ್ಲಿ ಸೇನಾ ಆಡಳಿತ ವಿಧಿಸುವುದು ಬಹುತೇಕ ನಿಶ್ಚಿತವಾಗಿದೆ.

ಇಂಗ್ಲೆಂಡ್‍ನ ಐಷಾರಾಮಿ ಪ್ರದೇಶವಾದ ಪಾನಾಮಗೇಟ್‍ನಲ್ಲಿ ವಸತಿ ಸ್ತೋಮಗಳನ್ನು ಖರೀದಿಸಲು ದೊಡ್ಡ ಮಟ್ಟದ ಅಕ್ರಮ-ಅವ್ಯವಹಾರಗಳು ನಡೆದಿದ್ದವು. ಈ ಹಗರಣಗಳಲ್ಲಿ ಪ್ರಧಾನಿ ಶರೀಫ್ ಮತ್ತು ಅವರ ಪುತ್ರರು ನೇರವಾಗಿ ಶಾಮೀಲಾಗಿದ್ದರು. ಅಕ್ರಮ ಸಂಪಾದನೆ, ತೆರಿಗೆ ವಂಚನೆಯಿಂದ ಗಳಿಸಿದ ಕಾಳಧನವನ್ನು ಅಂತಾರಾಷ್ಟ್ರೀಯ ಬ್ಯಾಂಕ್‍ಗಳಲ್ಲಿ ವಿಧಿಸುವವರ ಪಟ್ಟಿಯೂ ಪನಾಮ ಪೇಪರ್ಸ್ ಸೋರಿಕೆಯಿಂದ ಬಹಿರಂಗಗೊಂಡಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin