ಬಿಹಾರ ರಾಜಕೀಯ ಬೆಳವಣಿಗೆ : ಹೈಕೋರ್ಟ್‍ಗೆ ಆರ್‍ಜೆಡಿ ರಿಟ್ ಸಲ್ಲಿಕೆ

Patna--01

ಪಾಟ್ನಾ, ಜು.28- ಬಿಹಾರದ ರಾಜಕೀಯ ವಿದ್ಯಮಾನ ಇದೀಗ ಹೈಕೋರ್ಟ್ ಮೆಟ್ಟಿಲೇರಿದೆ. ಬಿಹಾರ ಮುಖ್ಯಮಂತ್ರಿಯಾಗಲು ನಿತೀಶ್ ಕುಮಾರ್‍ಗೆ ಅವಕಾಶ ನೀಡಿದ ರಾಜ್ಯಪಾಲ ಕೇಸರಿನಾಥ್ ತ್ರಿಪಾಠಿ ಅವರ ಕ್ರಮವನ್ನು ಪ್ರಶ್ನಿಸಿ ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ಪಾಟ್ನಾ ಹೈಕೋರ್ಟ್‍ನಲ್ಲಿ ಇಂದು ರಿಟ್ ಅರ್ಜಿ ಸಲ್ಲಿಸಿದೆ.

ಆರ್‍ಜೆಡಿ ಅತಿದೊಡ್ಡ ಪಕ್ಷವಾಗಿದ್ದರೂ ಸರ್ಕಾರ ರಚನೆಗೆ ಆಹ್ವಾನ ನೀಡದೇ ರಾಜ್ಯಪಾಲರು ಎನ್‍ಡಿಎ ಸರ್ಕಾರ ರಚನೆಗೆ ಅವಕಾಶ ಮಾಡಿಕೊಡಲು ನಿತೀಸ್ ಕುಮಾರ್ ಅವರನ್ನು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಅನುವು ಮಾಡಿಕೊಟ್ಟು ಸಂವಿಧಾನದ ನಿಯಮವನ್ನು ಉಲ್ಲಂಘಿಸಿದ್ದಾರೆ ಎಂದು ಆರ್‍ಜೆಡಿ ರಿಟ್‍ನಲ್ಲಿ ಆರೋಪಿಸಿದೆ. ಈ ರಿಟ್ ಅರ್ಜಿ ಕುರಿತು ಸೋಮವಾರ ಹೈಕೋರ್ಟ್ ವಿಚಾರಣೆ ನಡೆಸಲಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin