ಮಾರಾಟವಾಗದೆ ಉಳಿದ ಫ್ಲ್ಯಾಟ್‍ಗಳ ಮಾರಾಟಕ್ಕೆ ಬಿಡಿಎ ಹೊಸ ತಂತ್ರ

ಈ ಸುದ್ದಿಯನ್ನು ಶೇರ್ ಮಾಡಿ

BDA

ಬೆಂಗಳೂರು, ಜು.28- ಮಾರಾಟವಾಗದೆ ಉಳಿದಿರುವ ಫ್ಲ್ಯಾಟ್‍ಗಳ ಮಾರಾಟಕ್ಕೆ ಹೊಸ ತಂತ್ರ ಅನುಸರಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮುಂದಾಗಿದೆ. ಇದಕ್ಕಾಗಿ ಅದು ಮಾರ್ಕೆಟಿಂಗ್ ವಿಭಾಗಕ್ಕೆ ಎಂಬಿಎ ಪದವೀಧರರನ್ನು ನೇಮಿಸಿಕೊಳ್ಳಲು ನಿರ್ಧರಿಸಿದೆ. ಇದಕ್ಕಾಗಿ ಪ್ರತ್ಯೇಕ ಅಧಿಸೂಚನೆ ಹೊರಡಿಸುವ ಬದಲು, ಮೊದಲು ಬಂದವರಿಗೆ ಮೊದಲ ಆದ್ಯತೆ ಮೆರೆಗೆ, ಮೊದಲು ಅರ್ಜಿ ಸಲ್ಲಿಸಿದವರಿಗೆ ಫ್ಲ್ಯಾಟï ಮಾರಾಟ ಮಾಡುವ ಹೊಸ ವಿಧಾನಕ್ಕೆ ಬಿಡಿಎ ಚಾಲನೆ ನೀಡಿದೆ.

ಅರ್ಜಿಗಳ ಶೀಘ್ರ ವಿಲೇವಾರಿ, ಮಾರಾಟದ ದೃಷ್ಟಿಯಿಂದ ಎಂಬಿಎ ಪದವೀಧರರನ್ನು ಒಳಗೊಂಡ ತನ್ನದೇ ಮಾರ್ಕೆಟಿಂಗ್ ಟೀಮï ಬಳಸಿಕೊಳ್ಳುವುದು ಬಿಡಿಎ ಉದ್ದೆಶವಾಗಿದೆ. ಪದವೀಧರರು ಗ್ರಾಹಕಸ್ನೆಹಿಯಾಗಿ ವ್ಯವಹರಿಸುತ್ತಾರೆ. ಆ ಮೂಲಕ ಬಾಕಿ ಉಳಿದಿರುವ 2,370 ಫ್ಲ್ಯಾಟ್‍ಗಳ ಮಾರಾಟಕ್ಕೆ ನೆರವಾಗಲಿದ್ದಾರೆ. ಇದಕ್ಕಾಗಿ ಬಿಡಿಎ ಕಚೇರಿ ಆವರಣದಲ್ಲಿ ಪ್ರತ್ಯೆಕ ಸಹಾಯ ಕೇಂದ್ರ ತೆರೆಯಲು ಚಿಂತನೆ ನಡೆಸಿದೆ.

ತಾತ್ಕಾಲಿನ ನೇಮಕಾತಿ:

ಮಾರಾಟ ವಿಭಾಗಕ್ಕೆ ನೇಮಕಗೊಳ್ಳಲಿರುವ ಎಂಬಿಎ ಪದವೀಧರರು ತಾತ್ಕಾಲಿಕ ಉದ್ಯೊಗಿಗಳಾಗಿರುತ್ತಾರೆ. ಫ್ಲ್ಯಾಟ್‍ಗಳ ಖರೀದಿಸಲು ಆಸಕ್ತಿ ತೊರಿದ ಗ್ರಾಹಕರ ಬಳಿ ಹೊಗಿ, ಅವರ ಮನವೊಲಿಸುತ್ತಾರೆ ಎಂಬ ವಿಶ್ವಾಸವಿದೆ. ಫ್ಲ್ಯಾಟ್‍ಗಳ ಮಾರಾಟ ಪೂರ್ಣಗೊಳ್ಳುವವರೆಗೆ ಮಾತ್ರ ಇವರು ಕಾರ್ಯ ನಿರ್ವಹಿಸಲಿದ್ದಾರೆ. ಈವರೆಗೆ ಬಿಡಿಎನಲ್ಲಿ ಯಾವುದೇ ಮಾಹಿತಿ ಬೇಕಿದ್ದರೂ, ಸಂಬಂಧಪಟ್ಟ ವಿಭಾಗದ ಅಧಿಕಾರಿಗಳನ್ನೆ ಕೇಳಬೇಕಾಗಿತ್ತು. ಅಧಿಕಾರಿಗಳು ಕಾರ್ಯ ನಿಮಿತ್ತ ಕಚೇರಿಯಲ್ಲಿ ಇರದಿದ್ದರೆ, ಗ್ರಾಹಕರಿಗೆ ಸಮಸ್ಯೆ ಉಂಟಾಗುತ್ತಿತ್ತು. ಹೀಗಾಗಿ ವೃತ್ತಿಪರರ ಪ್ರತ್ಯೆಕ ವಿಭಾಗ ರಚನೆಗೆ ಚಿಂತನೆ ನಡೆಸಲಾಗಿದೆ ಎಂದು ಬಿಡಿಎ ಮೂಲಗಳು ಮಾಹಿತಿ ನೀಡಿವೆ.

ಎಲ್ಲೆಲ್ಲಿ, ಎಷ್ಟೆಷ್ಟು ಪ್ಲ್ಯಾಟ್ ಲಭ್ಯ? :

ಕಣಿಮಿಣಿಕೆ ಪ್ರದೇಶದಲ್ಲಿ 650 ಚದರ ಅಡಿ ವಿಸ್ತೀರ್ಣದ 2 ಬಿಹೆಚ್‍ಕೆ ಮನೆಗಳ ಸಂಖ್ಯೆ 546, ಕಣಿಮಿಣಿಕೆ ಪ್ರದೇಶದಲ್ಲಿ 800 ಚದರ ಅಡಿ ವಿಸ್ತೀರ್ಣದ 2 ಬಿಹೆಚ್‍ಕೆ ಮನೆಗಳ ಸಂಖ್ಯೆ 284, ಕೊಮ್ಮಘಟ್ಟ ಪ್ರದೇಶದಲ್ಲಿ 650 ಚದರ ಅಡಿ ವಿಸ್ತೀರ್ಣದ 2 ಬಿಹೆಚ್‍ಕೆ ಮನೆಗಳ ಸಂಖ್ಯೆ 164, ಮತ್ತು 800 ಚದರ ಅಡಿ ವಿಸ್ತೀರ್ಣದ 2 ಬಿಹೆಚ್‍ಕೆ ಮನೆಗಳ ಸಂಖ್ಯೆ 313, ಮಾಳಗಾಳ ಪ್ರದೇಶದಲ್ಲಿ 900 ಚದರ ಅಡಿ ವಿಸ್ತೀರ್ಣದ 2 ಬಿಹೆಚ್‍ಕೆ ಮನೆಗಳ ಸಂಖ್ಯೆ 335 ಹಾಗೂ 600 ಚದರ ಅಡಿ ವಿಸ್ತೀರ್ಣದ 2 ಬಿಹೆಚ್‍ಕೆ ಮನೆಗಳ ಸಂಖ್ಯೆ 470 ಖಾಲಿ ಇವೆ.  ಇನ್ನು ವಿಲ್ಲಾಗಳನ್ನು ಗಮನಿಸಿದರೆ ಆಲೂರಿನಲ್ಲಿ 2 ಬಿಹೆಚ್‍ಕೆ ಸಿಂಪ್ಲೆಕ್ಸ್ 1 ಮಹಡಿಯ ಮನೆಗಳು 57, ಎರಡು ಮಹಡಿಯ ಮನೆಗಳು 221 ಇವೆ. ಒಟ್ಟು 2,370 ಮನೆಗಳು ಸದ್ಯ ಖಾಲಿ ಇವೆ ಎನ್ನಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin