ರಷ್ಯಾ, ಉತ್ತರ ಕೊರಿಯಾ ವಿರುದ್ಧ ದಿಗ್ಬಂಧನ ವಿಧಿಸುವ ಮಸೂದೆಗೆ ಅಮೆರಿಕ ಅನುಮೋದನೆ

ಈ ಸುದ್ದಿಯನ್ನು ಶೇರ್ ಮಾಡಿ

America--01

ವಾಷಿಂಗ್ಟನ್, ಜು.28-ಉಭಯಪಕ್ಷೀಯ ಭಾರೀ ಬೆಂಬಲದ ಹಿನ್ನೆಲೆ ಅಮೆರಿಕ ಸೆನೆಟ್, ರಷ್ಯಾ, ಇರಾನ್, ಮತ್ತು ಉತ್ರರ ಕೊರಿಯಾ ವಿರುದ್ಧ ಕಠಿಣ ಮತ್ತು ಹೆಚ್ಚುವರಿ ದಿಗ್ಬಂಧನಗಳನ್ನು ವಿಧಿಸುವ ಮಸೂದೆಯೊಂದಕ್ಕೆ ಅನುಮೋದನೆ ನೀಡಿದೆ.  ನಾಲ್ಕು ದಿನಗಳ ಹಿಂದೆ ಈ ವಿಧೇಯಕ್ಕೆ ಪ್ರತಿನಿಧಿಗಳ ಸದನ (ಹೌಸ್ ಆಫ್ ರೆಪ್ರೆಸೆಂಟಿಟೀವ್) ಅಂಗೀಕಾರ ನೀಡಿತ್ತು. ಇಂದು ಸೆನೆಟ್‍ನಲ್ಲಿ 98-2 ಮತಗಳಿಂದ ದಿಗ್ಬಂಧನ ಮೂಲಕ ಅಮೆರಿಕದ ವಿರೋಧಿಗಳ ನಿಯಂತ್ರಣ ಮಸೂದೆಗೆ ಸಮ್ಮತಿ ದೊರೆತಿದೆ.

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಂತಿಮ ಸಮ್ಮತಿಗಾಗಿ ಈ ಮಸೂದೆ ಈಗ ಶ್ವೇತಭವನಕ್ಕೆ ರವಾನೆಯಾಗಿದೆ. ಹೊಸ ದಿಗ್ಬಂಧನಗಳನ್ನು ವಿಧಿಸುವ ಮೂಲಕ, 2016ರ ಅಧ್ಯಕ್ಷೀಯ ಚುನಾವಣೆ ವೇಳೆ ಎಸಗಿದ ಅಕ್ರಮಗಳಿಗಾಗಿ ರಷ್ಯಾವನ್ನು ತಪ್ಪಿತಸ್ಥ ದೇಶವನ್ನಾಗಿಸಲು ಈ ಮಸೂದೆ ನೆರವಾಗಲಿದೆ ಎಂದು ಸೆನೆಟ್ ಸಶಸ್ತ್ರ ಸೇವೆಗಳ ಸಮಿತಿ ಅಧ್ಯಕ್ಷ ಸೆನೆಟರ್ ಜಾನ್ ಮ್ಯಾಕ್‍ಕೈನ್ ಹೇಳಿದ್ದಾರೆ. ನಮ್ಮ ಪ್ರಜಾಪ್ರಭುತ್ವ ಅಥವಾ ರಾಷ್ಟ್ರೀಯ ಭದ್ರತಾ ಹಿತಾಸಕ್ತಿಗಳ ಮೇಲೆ ನಡೆಯುವ ದಾಳಿಗಳನ್ನು ಅಮೆರಿಕ ಸಹಿಸದು ಎಂಬುದಕ್ಕೆ ಸೆನೆಟ್‍ನಲ್ಲಿ ಮಸೂದೆಗೆ ಲಭಿಸಿದ ಭಾರೀ ಬೆಂಬಲವೇ ಸಾಕ್ಷಿಯಾಗಿದೆ. ಅಲ್ಲದೇ ಇಂಥ ದಾಳಿ-ಅಕ್ರಮಣಗಳನ್ನು ನಾನು ಅತ್ಯಂತ ಸಮರ್ಥವಾಗಿ ಎದುರಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin