ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಅಮಿತ್ ಶಾ, ಸ್ಮತಿ ಇರಾನಿ

Amit-Shah--01

ನವದೆಹಲಿ, ಜು.28-ಗುಜರಾತ್‍ನಿಂದ ರಾಜ್ಯಸಭೆಗೆ ಸ್ಪರ್ಧಿಸಲು ನಿರ್ಧಾರ ಕೈಗೊಂಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಮತ್ತು ಕೇಂದ್ರ ಸಚಿವೆ ಸ್ಮತಿ ಇರಾನಿ ಇಂದು ನಾಮಪತ್ರ ಸಲ್ಲಿಸಿದರು.  ಆಗಸ್ಟ್ 8ರಂದು ರಾಜ್ಯಸಭೆಗೆ ಚುನಾವಣೆ ನಡೆಯಲಿದೆ. ಅಮಿತ್ ಶಾ ಇದೇ ಮೊದಲ ಬಾರಿಗೆ ರಾಜ್ಯಸಭೆಗೆ  ಸ್ಪರ್ಧಿಸುತ್ತಿದ್ದಾರೆ.   ಶಾ ಗುಜರಾತಿನ ಶಾಸಕರಾಗಿದ್ದರೆ, ಸ್ಮತಿ ಇರಾನಿ ಅದೇ ರಾಜ್ಯದಿಂದ ರಾಜ್ಯಸಭೆ ಸದಸ್ಯರಾಗಿದ್ದಾರೆ.

ಗುಜರಾತ್‍ನಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದ ಕಾಂಗ್ರೆಸ್‍ನ ಅಹಮದ್ ಪಟೇಲ್, ಸ್ಮತಿ ಮತ್ತು ಬಿಜೆಪಿಯ ದಿಲೀಪ್ ಭಾಯಿ ಪಾಂಡ್ಯ ಅವರ ಅಧಿಕಾರವಧಿ ಅಗಸ್ಟ್ 18ರಂದು ಮುಗಿಯಲಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin