ಶ್ರದ್ಧಾಂಜಲಿ ಸಭೆಯಾಗಿ ಪರಿವರ್ತನೆಯಾದ ಕಾಂಗ್ರೆಸ್ ಸಮಾವೇಶ

ಈ ಸುದ್ದಿಯನ್ನು ಶೇರ್ ಮಾಡಿ

Nanjanagud--01

ನಂಜನಗೂಡು, ಜು.28- ನಗರದ ಶಂಕರ ಮಠದಲ್ಲಿ ಆಯೋಜಿಸಲಾಗಿದ್ದ ಬೃಹತ್ ತಗಡೂರು ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್‍ರವರ ನಿಧನದಿಂದ ಸಮಾವೇಶ ರದ್ದುಪಡಿಸಿ ಶ್ರದ್ಧಾಂಜಲಿ ಸಭೆಯಾಗಿ ಪರಿವರ್ತನೆಗೊಂಡಿತು. ಶಾಸಕ ಕಳಲೆ ಕೇಶವಮೂರ್ತಿ ಮಾತನಾಡಿ, ಧರ್ಮಸಿಂಗ್ ವ್ಯಕ್ತಿತ್ವ ಬಗ್ಗೆ ತಿಳಿಸಿದರಲ್ಲದೆ ಉತ್ತರ ಕರ್ನಾಟಕ ಭಾಗದಲ್ಲಿ ಸಂಸದರಾಗಿ, ಶಾಸಕರಾಗಿ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿ ಪಕ್ಷಕ್ಕೆ ಆಸ್ತಿಯಾಗಿದ್ದರು. ಅವರ ನಿಧನದಿಂದ ಕಾಂಗ್ರೆಸ್ ಪಕ್ಷಕ್ಕೆ ಆಘಾತವಾಗಿದೆ. ಅವರು ಮುಖ್ಯಮಂತ್ರಿಯಾಗಿದ್ದಾಗ ಸಿದ್ದರಾಮಯ್ಯನವರು ಉಪಮುಖ್ಯಮಂತ್ರಿಯಾಗಿದ್ದರು. ಸಮ ಸಮಾಜದ ನಿರ್ಮಾಣಕ್ಕೆ ಪಣ ತೊಟ್ಟವರಲ್ಲಿ ಅವರೂ ಒಬ್ಬರಾಗಿದ್ದರು ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಜೆ.ವಿಜಯಕುಮಾರ್ ಮಾತನಾಡಿ, ಮಾಜಿ ಮುಖ್ಯಮಂತ್ರಿ ಹಾಗೂ ಅಪರೂಪದ ರಾಜಕಾರಣಿ ಧರ್ಮಸಿಂಗ್ ಸಮಾಜವಾದದ ಹಿನ್ನೆಲೆಯುಳ್ಳ ನಾಯಕರಾಗಿದ್ದರು.ಉತ್ತರ ಕರ್ನಾಟಕದ ಆರ್ಥಿಕ ಸಾಮಾಜಿಕ ಕ್ರಾಂತಿ ಹಾಗೂ ವಿಶೇಷ ಸ್ಥಾನಮಾನದ ಕೂಗಿಗೆ ಬೆನ್ನೆಲುಬಾಗಿ ನಿಂತವರು ಹಾಗೂ ನಂಜುಡಪ್ಪ ವರದಿಯ ಸಂಪೂರ್ಣ ಅನುಷ್ಠಾನಕ್ಕೆ ಧರ್ಮಸಿಂಗ್ ಶ್ರಮಿಸಿದ್ದರು ಎಂದರು.

ಮೈಸೂರು ಜಿಲ್ಲಾ ಕಾಂಗ್ರೆಸ್ ವೀಕ್ಷಕರಾದ ವಿಷ್ಣುನಾರಂಗ್, ಕಾಂಗ್ರೆಸ್ ಉಸ್ತುವಾರಿ ಗುರಪ್ಪನಾಯ್ಡು, ವರುಣಾ ಕ್ಷೇತ್ರದ ಜಾಗೃತಿ ಸಮಿತಿ ಅಧ್ಯಕ್ಷ ಡಾ.ಯತೀಂದ್ರಸಿದ್ದರಾಮಯ್ಯ, ಎಸ್ಸಿ ಬಸವರಾಜು, ನಂದಿನಿ ಚಂದ್ರಶೇಖರ್ ಮಾತನಾಡಿ ಧರ್ಮಸಿಂಗ್ ಒಬ್ಬ ಅಜಾತ ಶತ್ರು. ಯಾವುದೇ ವಿವಾದ ಇಲ್ಲದೆ ಎಲ್ಲರೊಡನೆ ಬೆರೆತು ಸಮಾಜಮುಖಿ ಕೆಲಸ ಮಾಡುತ್ತಿದ್ದ ಧೀಮಂತ ನಾಯಕ ಎಂದು ಬಣ್ಣಿಸಿದರು.

ಜಿಲ್ಲಾ ಕಾಂಗ್ರೇಸ್ ಉಪಾಧ್ಯಕ್ಷ ಗುರುಪಾದಸ್ವಾಮಿ, ಪ್ರೊಶಿವಕುಮಾರ್, ನಂದಿನಿ ಚಂದ್ರಶೇಖರ್, ಭೋವಿ ನಿಗಮದ ಅಧ್ಯಕ್ಷ ಸೀತಾರಾಮು, ತಗಡೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಸ್ವಾಮಿ, ತಾಪಂ ಉಪಾದ್ಯಕ್ಷ ಗೊವಿಂದರಾಜು, ಸದಸ್ಯರಾದ ಪದ್ಮನಾಭ, ದೇವನೂರು ಮಹದೇವಮ್ಮ, ಜಿಪಂ ಮಾಜಿ ಸದಸ್ಯ ಧಮೇಂದ್ರ, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಕುಮಾರ್, ಸುರೇಶ್‍ಕುಮಾರ್, ನಂಜುಂಡಸ್ವಾಮಿ, ಬೆಲವೆತ್ತ ಶಿವಕುಮಾರ್, ಬಸವಣ್ಣ, ಬಸವರಾಜನಾಯಕ್, ಗಿರೀಶ್, ವಸಂತ, ಕಾರ್ಯದಶಿಗಳಾದ ಪ್ರಭುಸ್ವಾಮಿ, ಪ್ರಮೀಳ, ಮನೋನ್ಮಣಿ, ಚಂದ್ರು, ಶಿವಕುಮಾರ್, ಸಂಜಯ್, ಸೇರಿದಂತೆ ಹಲವಾರು ಪ್ರಮುಖರು ಇದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin