ಸುಷ್ಮಾಜಿ, ನೀವು ನಮ್ಮ ದೇಶದ ಪ್ರಧಾನಿಯಾಗಬೇಕಿತ್ತು : ಪಾಕ್ ಮಹಿಳೆಯ ಮನದಾಳದ ಮಾತು

ಈ ಸುದ್ದಿಯನ್ನು ಶೇರ್ ಮಾಡಿ

Sushma-Swaraj--01

ನವದೆಹಲಿ/ಇಸ್ಲಾಮಾಬಾದ್, ಜು.28-ಸುಷ್ಮಾ, ನೀವು ನಮ್ಮ ದೇಶದ ಪ್ರಧಾನಮಂತ್ರಿಯಾಗಿದ್ದರೆ, ಪಾಕಿಸ್ತಾನ ಬದಲಾಗುತ್ತಿತ್ತು-ಹೀಗೆ ತಮ್ಮ ಚಿಕಿತ್ಸೆಗೆ ನೆರವಾಗುತ್ತಿರುವ ವಿದೇಶಾಂಗ ವ್ಯವಹಾರ ಸಚಿವರನ್ನು ಪಾಕಿಸ್ತಾನದ ಮಹಿಳೆಯೊಬ್ಬರು ಮನಸಾರೆ ಹೊಗಳಿದ್ದಾರೆ. ಪಾಕಿಸ್ತಾನದ ಮಹಿಳೆ ಹಿಜಾಬ್ ಆಸೀಫ್ ಚಿಕಿತ್ಸೆಗಾಗಿ ಭಾರತಕ್ಕೆ ಬರಲು ತಕ್ಷಣ ವೀಸಾ ನೀಡುವಂತೆ ಸುಷ್ಮಾ ಸ್ವರಾಜ್ ಇಸ್ಲಾಮಾಬಾದ್‍ನಲ್ಲಿರುವ ಭಾರತೀಯ ಹೈಕಮೀಷನರ್ ಗೌತಮ್ ಜಂಬಾವಾಲೆ ಅವರಿಗೆ ಸೂಚನೆ ನೀಡಿದ್ದಾರೆ.

ತಮ್ಮ ಚಿಕಿತ್ಸೆಗಾಗಿ ಸ್ಪಂದಿಸಿರುವ ಸುಷ್ಮಾ ಅವರ ಸಹಾಯಹಸ್ತಕ್ಕೆ ಕೃತಜ್ಞತೆ ಸಲ್ಲಿಸಿರುವ ಅವರು ನೀವು ನಮ್ಮ ದೇಶದ ಪ್ರಧಾನಿಯಾಗಿದ್ದರೆ ಚೆನ್ನಾಗಿತ್ತು ಎಂದು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin