4 ತಿಂಗಳಲ್ಲಿ ಚಾಮುಂಡಿ ಹುಂಡಿಗೆ ಬಂದು ಸೇರಿತು ಬರೋಬ್ಬರಿ 11.08 ಕೋಟಿ ರೂ.

Chamundeshwari

ಮೈಸೂರು, ಜು.28-ಮೈಸೂರಿನ ಚಾಮುಂಡಿ ಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಿದ್ದ ಭಕ್ತರಿಂದ ಕಳೆದ 4 ತಿಂಗಳಲ್ಲೇ ದಾಖಲೆ ಪ್ರಮಾಣದಲ್ಲಿ ಆದಾಯ ಸಂಗ್ರಹವಾಗಿದೆ. ಚಾಮುಂಡಿ ದೇವಾಲಯಕ್ಕೆ ಭೇಟಿ ನೀಡುವ ಭಕ್ತರಿಂದ 4 ತಿಂಗಳ ಅವಧಿಯಲ್ಲಿ 11.08 ಕೋಟಿ ರೂ. ಆದಾಯ ಸಂಗ್ರಹವಾಗಿದೆ ಎಂದು ಜಿಲ್ಲಾಧಿಕಾರಿ ರಂದೀಪ್ ತಿಳಿಸಿದ್ದಾರೆ. ಆಷಾಢಮಾಸದ 4 ಶುಕ್ರವಾರಗಳು ಹಾಗೂ ವರ್ಧಂತಿ ದಿನದಂದು ಟಿಕೆಟ್ ಪಡೆದು ದೇವಾಲಯಕ್ಕೆ ಭೇಟಿ ನೀಡಿದ ಭಕ್ತರಿಂದ ಹುಂಡಿಯಲ್ಲಿ ಕಾಣಿಕ ರೂಪದಲ್ಲಿ ಸಂಗ್ರಹವಾದ ಮೊತ್ತ 11.08 ರೂ. ಆದಾಯ ಬಂದಿದೆ ಎಂದರು.

2016ರ ಏಪ್ರಿಲ್‍ನಿಂದ ಜುಲೈವರೆಗೆ 3,51,39,248 ರೂ. ಹುಂಡಿಯಿಂದ, ಟಿಕೆಟ್ ಪಡೆದ ಭಕ್ತರಿಂದ 4,35,08,597 ರೂ. ಸೇರಿದಂತೆ ಒಟ್ಟು 7,86,47,755 ರೂ. ಸಂಗ್ರಹವಾಗಿತ್ತು ಎಂದು ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin