ಆನ್‍ಲೈನ್ ಡ್ರಗ್ ರಾಕೆಟ್ : ಚಿತ್ರ ನಟ ರವಿತೇಜಾ ಚಾಲಕನಿಗೆ ಎಸ್‍ಐಟಿ ಡ್ರಿಲ್

ಈ ಸುದ್ದಿಯನ್ನು ಶೇರ್ ಮಾಡಿ

Raviteja

ಹೈದರಾಬಾದ್,ಜು.29-ಆನ್‍ಲೈನ್ ಡ್ರಗ್ಸ್ ಜಾಲ ಪ್ರಕರಣ ಸಂಬಂಧ ನಿನ್ನೆ ಖ್ಯಾತ ತೆಲುಗು ನಟ ರವಿತೇಜಾ ಅವರನ್ನು ವಿಚಾರಣೆ ನಡೆಸಿದ ಬೆನ್ನಲ್ಲೇ ಇಂದು ಅವರ ಕಾರು ಚಾಲಕ ಶ್ರೀನಿವಾಸ್‍ನನ್ನು ಎಸ್‍ಐಟಿ ತನಿಖೆಗೊಳಪಡಿಸಿರುವುದು ತೀವ್ರ ಕುತೂಹಲ ಕೆರಳಿಸಿದೆ.   ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಭಾರೀ ಸುದ್ದಿಯಾಗಿರುವ ಆನ್‍ಲೈನ್ ಡ್ರಗ್ಸ್ ಜಾಲ ಪ್ರಕರಣ ಸಂಬಂಧ ತೆಲುಗು ನಟ ರವಿ ತೇಜಾ ಅವರ ಕಾರು ಚಾಲಕ ಶ್ರೀನಿವಾಸ್ ರಾವ್ ಇಂದು ಎಸ್‍ಟಿಗೆ ಅಧಿಕಾರಿಗಳು ತೀವ್ರ ವಿಚಾರಣೆ ಒಳಪಡಿಸಿ ಡ್ರಗ್ ಜಾಲ ಪ್ರಕರಣದ ಬಗ್ಗೆ ಮಾಹಿತಿ ಕಲೆಹಾಕಿದರು.

ಎಸ್‍ಐಟಿ ಮುಂದೆ ವಿಚಾರಣೆಗೆ ಹಾಜರಾದ ಶ್ರೀನಿವಾಸ್ ಅವರನ್ನು ಪ್ರಕರಣ ಸಂಬಂಧ ಹೆಸರು ಕೇಳಿಬಂದಿರುವ ಹಿನ್ನೆಲೆಯಲ್ಲಿ ಚಿತ್ರನಟರ ಬಗ್ಗೆ ವಿಚಾರಣೆ ನಡೆಸಿದರು.  ನಿನ್ನೆ ಎಸ್‍ಐಟಿ ಕಚೇರಿಗೆ ಆಗಮಿಸಿದ್ದ ರವಿತೇಜ ಅವರನ್ನು ಅಧಿಕಾರಿಗಳ ಸುಮಾರು 10 ಗಂಟೆಗಳಿಗೆ ಹೆಚ್ಚು ಕಾಲ ತೀವ್ರ ವಿಚಾರಣೆಗೊಳಪಡಿಸಿದ್ದರು. ಕಳೆದ ಜುಲೈ 19 ರಂದು ಸಿನಿ ಛಾಯಗ್ರಾಹಕ ಶ್ಯಾಂ ಕೆ ನಾಯ್ಡ್,, ನಟರಾದ ಸುಬ್ಬರಾಜ್, ತರುಣ್‍ಕುಮಾರ್, ಪಿ.ನವದೀಪ್, ನಟಿ ಚಾರ್ಮಿಕೌರ್ ಮತ್ತು ಮುಮೈತ್ ಖಾನ್ ಹಾಗೂ ಚಿತ್ರ ನಿರ್ದೇಶಕ ಧರಂರಾವ್ ಸೇರಿದಂತೆ ಮುಂತಾದವರನ್ನು ಕೂಡ ಎಸ್‍ಐಟಿ ವಿಚಾರಣೆ ನಡೆಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin