ಜನರಿಗೆ ವಂಚಿಸುತ್ತಿದ್ದ 10 ಪ್ರತಿಷ್ಠಿತ ಕಂಪೆನಿಗಳ ಬಣ್ಣ ಬಯಲು, 100 ಮಂದಿ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Police-00024

ಬೆಂಗಳೂರು, ಜು.29- ಸಾರ್ವಜನಿಕರಿಗೆ ಮೋಸ ಮಾಡುವ 10 ನಕಲಿ ಕಂಪೆನಿಗಳ ಹಗರಣಗಳನ್ನು ತನಿಖೆ ಮಾಡಿರುವ ಪೊಲೀಸರು 3450ಕೋಟಿ ರೂ. ವಂಚನೆಯನ್ನು ಪತ್ತೆಹಚ್ಚಿದ್ದು, 422 ಪ್ರಕರಣಗಳನ್ನು ದಾಖಲಿಸಿ 100 ಮಂದಿಯನ್ನು ಬಂಧಿಸಿದ್ದಾರೆ. ಸಿಐಡಿ ಪ್ರಧಾನ ಕಚೇರಿಯಲ್ಲಿಂದು ಆರ್ಥಿಕ ಅಪರಾಧಗಳ ಕುರಿತು ಮಾಹಿತಿ ನೀಡಿದ ಡಿಜಿಪಿ ಕಿಶೋರ್‍ಚಂದ್ರ ಮತ್ತು ಎಡಿಜಿಪಿ ಪ್ರತಾಪ್‍ರೆಡ್ಡಿ, 2013-16ರೊಳಗೆ 10 ಸಂಸ್ಥೆಗಳ ವಿರುದ್ಧ ದಾಖಲಾಗಿದ್ದ 422 ಪ್ರಕರಣಗಳನ್ನು ಸಿಐಡಿ ತನಿಖೆ ಮಾಡುತ್ತಿದೆ. ಈವರೆಗಿನ ಮಾಹಿತಿಯಂತೆ 17,93.480 ಸಾರ್ವಜನಿಕರು 3273 ಕೋಟಿ ರೂ.ಗಳನ್ನು ಈ ಸಂಸ್ಥೆಗಳಲ್ಲಿ ಹೂಡಿಕೆ ಮಾಡಿರುವುದು ತಿಳಿದು ಬಂದಿದೆ ಎಂದರು.

ಇದರಲ್ಲಿ ಇಂಜಿನಿಯರ್‍ಗಳು, ಸರ್ಕಾರಿ ನೌಕರರು, ನಿವೃತ್ತ ಅಧಿಕಾರಿಗಳು, ಮಹಿಳೆಯರು ಸೇರಿದಂತೆ ಹಲವಾರು ಪ್ರಜ್ಞಾವಂತರೇ ಹಣ ಕಳೆದುಕೊಂಡಿದ್ದಾರೆ ಎಂದು ವಿವರಿಸಿದರು. ಸಾರ್ವಜನಿಕರಿಗೆ ವಂಚಿಸಿದ 10 ಪ್ರತಿಷ್ಠಿತ ಕಂಪೆನಿಗಳ ಪೈಕಿ ಅಗ್ರಿಗೋಲ್ಡ್ ಕಂಪೆನಿ, ಹಿಂದೂಸ್ಥಾನ್ ಇನ್‍ಪ್ರಾಕಾನ್ ಕಂಪೆನಿ, ಸೆವನ್ ಹಿಲ್ಸ್, ಡ್ರೀಮ್ಸ್ ಇಂಡಿಯಾ ಕಂಪೆನಿ, ಟಿಜಿಎಸ್ ಕನ್ಸ್‍ಟ್ರಕ್ಷನ್ ಲಿಮಿಟೆಡ್, ಗೃಹ ಕಲ್ಯಾಣ್, ವೃಕ್ಷ ಬಿಜಿನಸ್, ಹರ್ಷಾ ಎಂಟರ್‍ಟೈನ್‍ಮೆಂಟ್, ಮೈತ್ರಿ ಪ್ಲಾಂಟೆಷನ್ ಅಂಡ್ ಹಾರ್ಟಿಕಲ್ಟ್ರರ್ ಪ್ರೈ.ಲಿ., ಗ್ರೀನ್‍ಬಡ್ಸ್ ಆಗ್ರೋ ಫಾರಂ ಪ್ರೈ.ಲಿ. ಈ 10 ಕಂಪೆನಿಗಳ ವಿರುದ್ಧ ವಿಚಾರಣೆ ಮುಂದುವರೆಯುತ್ತಿದೆ.
ಇವುಗಳಲ್ಲಿ ಹಣ ಹೂಡಿಕೆ ಮಾಡಿ ಬಹಳಷ್ಟು ಮಂದಿ ಮೋಸ ಹೋಗಿದ್ದಾರೆ. ಕೆಲವರು ಮಾತ್ರ ದೂರು ಕೊಟ್ಟಿದ್ದಾರೆ. ದೂರು ಕೊಡೆದೇ ಇರುವವರು ಹತ್ತಿರದ ಪೊಲೀಸ್ ಠಾಣೆಗಾಗಲಿ ಅಥವಾ ಸಿಐಡಿ ಆರ್ಥಿಕ ಅಪರಾಧಗಳ ವಿಭಾಗಕ್ಕಾಗಲಿ ನೇರ ಮಾಹಿತಿ ನೀಡುವಂತೆ ಅಧಿಕಾರಿಗಳು ಮನವಿ ಮಾಡಿದರು.

ಅಗ್ರಿಗೋಲ್ಡ್ ಕಂಪೆನಿಯ ಆರೋಪಿ ಹೌವಾ ವೆಂಕಟರಮಣರಾವ್ ಅವರು ಸಾರ್ವಜನಿಕರಿಂದ 1640 ಕೋಟಿ ರೂ. ಸಂಗ್ರಹಿಸಿದ್ದಾರೆ. ಇವರ ವಂಚನೆ ತನಿಖೆ ಮಾಡಿದ ಪೊಲೀಸರು ಕಂಪೆನಿಗೆ ಸೇರಿದ 430 ಎಕರೆ ಭೂಮಿಯನ್ನು ಜಫ್ತಿ ಮಾಡಿದ್ದಾರೆ. 2006ರಿಂದ 2015ರವರೆಗೆ ಇವರ ವಿರುದ್ಧ 80 ಪ್ರಕರಣಗಳು ದಾಖಲಾಗಿವೆ. 24 ಮಂದಿಯನ್ನು ಬಂಧಿಸಲಾಗಿದೆ. 8,41,616 ಮಂದಿಗೆ 1640 ಕೋಟಿಯಷ್ಟು ವಂಚನೆಯಾಗಿದೆ. ಕಂಪೆನಿಯಿಂದ 250 ಕೋಟಿ ಮೌಲ್ಯದ 530 ಎಕರೆ ಜಮೀನು, 12 ಕಾರು, 76ಲಕ್ಷ ನಗದು ಜಫ್ತಿ ಮಾಡಲಾಗಿದೆ.

ಹಿಂದೂಸ್ಥಾನ್ ಇನ್‍ಪ್ರಾಕಾನ್ ಕಂಪೆನಿಯ ಪ್ರಮುಖ ಆರೋಪಿ ಲಕ್ಷ್ಮಿನಾರಾಯಣ್ ಸೇರಿದಂತೆ 19 ಮಂದಿ ಆರೋಪಿಗಳು 7,19,293 ಮಂದಿಗೆ 389 ಕೋಟಿ ರೂ. ವಂಚನೆ ಮಾಡಿದ್ದಾರೆ. 2010ರಿಂದ 2016ರ ನಡುವೆ ವಂಚಿಸಿದ್ದಾರೆ. ಇವರ ವಿರುದ್ಧ 64 ಪ್ರಕರಣಗಳನ್ನು ದಾಖಲಿಸಿ 374 ಎಕರೆ ಜಮೀನು, 14ಲಕ್ಷ ರೂ. ಸೇರಿ 34 ಕೋಟಿ ಮೊತ್ತದ ಆಸ್ತಿ ಜಫ್ತಿ ಮಾಡಲಾಗಿದೆ ಎಂದು ವಿವರಿಸಿದರು. ಮೈತ್ರಿ ಪ್ಲಾಂಟೆಷನ್ ಅಂಡ್ ಹಾರ್ಟಿಕಲ್ಟ್ರರ್ ಪ್ರೈ.ಲಿ. 2007ರಿಂದ 2014ರ ನಡುವೆ 7,779ಮಂದಿಗೆ 10 ಕೋಟಿಯನ್ನು ವಂಚಿಸಿದರೆ, 12 ಪ್ರಕರಣಗಳನ್ನು ದಾಖಲಿಸಿ 7 ಮಂದಿಯನ್ನು ಬಂಧಿಸಿದ್ದು, 43ಕೋಟಿ ರೂ. ಮೌಲ್ಯದ ಆಂಧ್ರ ಪ್ರದೇಶ ಮತ್ತು ಕರ್ನಾಟಕದಲ್ಲಿದ್ದ 4,580 ಎಕರೆ ಭೂಮಿಯನ್ನು ಜಫ್ತಿ ಮಾಡಲಾಗಿದೆ. ಆರೋಪಿ ಕೊನ್ನಾರೆಡ್ಡಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ.

ಗ್ರೀನ್‍ಬಡ್ಸ್ ಆಗ್ರೋ ಫಾರಂ ಪ್ರೈ.ಲಿ. 2008ರಿಂದ 2013ರವರೆಗೆ 94,045 ಮಂದಿಯಿಂದ 53.88 ಕೋಟಿಯನ್ನು ಸಂಗ್ರಹಿಸಿದೆ. ಈ ಕಂಪೆನಿ ವಿರುದ್ಧ 122 ಪ್ರಕರಣಗಳು ದಾಖಲಾಗಿದ್ದು, ಡಿ.ಎಲ್.ರವೀಂದ್ರನಾಥ್ ಸೇರಿದಂತೆ 5 ಮಂದಿಯನ್ನು ಬಂಧಿಸಲಾಗಿದೆ. ಮೂರು ಮನೆಗಳು, 254ಗುಂಟೆ ಭೂಮಿ, ಮೂರು ನಿವೇಶನ, 8 ವಾಹನ ಸೇರಿದಂತೆ 30 ಕೋಟಿ ಮೌಲ್ಯದ ಆಸ್ತಿ ಜಫ್ತಿ ಮಾಡಲಾಗಿದೆ.

ಸುಭೋದ್ ಅಲಿಯಾಸ್ ಹರ್ಷಖಾಸಾನೀಸ್ ಎಂಬ ವ್ಯಕ್ತಿಗೆ ಸೇರಿದ ಹರ್ಷಾ ಎಂಟರ್‍ಟೈನ್‍ಮೆಂಟ್ ಕಂಪೆನಿ 2009ರಿಂದ 2015ರ ನಡುವೆ 74 ಸಾವಿರ ಜನರಿಂದ 136 ಕೋಟಿ ಸಂಗ್ರಹಿಸಿದೆ. ಒಂದು ಪ್ರಕರಣವನ್ನು ದಾಖಲಿಸಿ 8 ಮಂದಿಯನ್ನು ಬಂಧಿಸಲಾಗಿದೆ. ಜಮೀನು, ಸೈಟುಗಳು, ಮನೆ, ಷೇರು, ವಾಹನಗಳು ಸೇರಿ ವಿವಿಧ ಸಿನಿಮಾಗಳ ನಿರ್ಮಾಣಕ್ಕೆ ಹೂಡಲಾಗಿದ್ದ 9.42 ಕೋಟಿರೂ. ಒಳಗೊಂಡಂತೆ 40 ಕೋಟಿರೂ.ಗಳ ಆಸ್ತಿಯನ್ನು ಜಫ್ತಿ ಮಾಡಲಾಗಿದೆ.

ಸಚಿನ್‍ನಾಯಕ್ ದಿಶಾ ಚೌಧರಿ ಅವರಿಗೆ ಸೇರಿದ ಡ್ರೀಮ್ಸ್ ಇಂಡಿಯಾ ಕಂಪೆನಿ 2011ರಿಂದ 2016ರವರೆಗೆ 6500ಮಂದಿಯಿಂದ 573 ಕೋಟಿ ರೂ.ಗಳನ್ನು ಸಂಗ್ರಹಿಸಿದೆ. ಈ ಸಂಬಂಧ 37 ಪ್ರಕರಣಗಳನ್ನು ಬಂಧಿಸಿ 3 ಮಂದಿಯನ್ನು ಬಂಧಿಸಲಾಗಿದೆ. ಜಮೀನು, ನಿವೇಶನ 100 ಕೋಟಿ ರೂ. ಮೌಲ್ಯದ ಆಸ್ತಿ ಜಫ್ತಿ ವಶಪಡಿಸಿಕೊಳ್ಳಲಾಗಿದೆ. ಸಚಿನ್‍ನಾಯಕ್ ಮತ್ತು ಮನ್‍ದೀಪ್‍ಕೌರ್ ಅವರಿಗೆ ಸೇರಿದ ಟಿಜಿಎಸ್ ಕನ್ಸ್‍ಟ್ರಕ್ಷನ್ ಲಿಮಿಟೆಡ್ 2013ರಿಂದ 2016ರವರೆಗೆ 5315 ಮಂದಿಯಿಂದ 260 ಕೋಟಿಯನ್ನು ಸಂಗ್ರಹಿಸಿದೆ. 27 ಪ್ರಕರಣಗಳು ದಾಖಲಾಗಿದ್ದು, 6 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. 15ಲಕ್ಷ ನಗದು, 250 ಗ್ರಾಂ ಚಿನ್ನ ಸೇರಿದಂತೆ 65 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಜಫ್ತಿ ಮಾಡಲಾಗಿದೆ.

ಸಚಿನ್‍ನಾಯಕ್, ಮಜುಂದಾರ್ ಶತಪರಿಣಿ ಸೇರಿದಂತೆ 6 ಮಂದಿ ಆರೋಪಿಗಳು 6237 ಮಂದಿಯಿಂದ 277ಕೋಟಿ ಗಳನ್ನು ಸಂಗ್ರಹಿಸಿಲಾಗಿದೆ. 18 ಪ್ರಕರಣಗಳನ್ನು ದಾಖಲಿಸಲಾಗಿದ್ದು, 21 ಕೋಟಿ ಮೌಲ್ಯದ ಆಸ್ತಿ ಜಫ್ತಿ ಮಾಡಲಾಗಿದೆ. ಸೆವನ್ಸ್ ಹಿಲ್ಸ್ ಕಂಪೆನಿಯ ಜಿ.ನಾರಾಯಣಪ್ಪ ಸೇರಿದಂತೆ 28 ಮಂದಿ ಆರೋಪಿಗಳು 1.3ಲಕ್ಷ ಜನರಿಂದ 81 ಕೋಟಿ ರೂ.ಗಳನ್ನು ಸಂಗ್ರಹಿಸಿದ್ದು, ಇವರಿಂದ 13 ಪ್ರಕರಣಗಳನ್ನು ದಾಖಲಿಸಲಾಗಿದೆ. 11 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಫ್ತಿ ಮಾಡಲಾಗಿದೆ.

ಜೀವರಾಜ್‍ಪುರಾಣಿಕ್ ಹಾಗೂ ಇತರೆ ಮೂರು ಮಂದಿಗೆ ಸೇರಿದ ವೃಕ್ಷ ಬಿಜಿನಸ್ ಕಂಪೆನಿ 1995 ಮಂದಿಗೆ 30 ಕೋಟಿ ರೂ. ವಂಚನೆ ಮಾಡಿದೆ. ಈ ಕಂಪೆನಿ ವಿರುದ್ಧ 339 ಪ್ರಕರಣಗಳು ದಾಖಲಾಗಿದ್ದು, 10 ಲಕ್ಷ ರೂ. ಮೌಲ್ಯದ ಆಸ್ತಿ ಜಫ್ತಿ ಮಾಡಲಾಗಿದೆ ಎಂದು ವಿವರಿಸಿದರು. ಇದರಲ್ಲಿ ಬಹುತೇಕ ಆರೋಪಿಗಳು ಈಗಲೂ ಪೊಲೀಸರ ವಿಚಾರಣೆಯಲ್ಲಿದ್ದಾರೆ ಎಂದರು. ಡ್ರೀಮ್ಸ್ ಕಂಪೆನಿಯಿಂದ 6500 ಮಂದಿ ವಂಚನೆಗೊಳಗಾಗಿದ್ದರೆ, 2382 ಮಂದಿ ಮಾತ್ರ ದೂರು ನೀಡಿದ್ದಾರೆ. ಟಿಜಿಎಸ್ ಕಂಪೆನಿ 5315 ಜನರ ಪೈಕಿ 2750 ಮಂದಿ, ಗೃಹ ಕಲ್ಯಾಣ್ ಸಂಸ್ಥೆಯಿಂದ 2220 ಮಂದಿ ವಂಚನೆಗೆ ಒಳಗಾಗಿದ್ದಾರೆ 814 ಮಂದಿ ಮಾತ್ರ ಸಿಐಡಿಗೆ ಸಂಬಂಧಿಸಿದ ದಾಖಲೆ ನೀಡಿದ್ದಾರೆ.

ವಂಚನೆಗೊಳಗಾದ ಇತರರು ಶೀಘ್ರವಾಗಿ ಮಾಹಿತಿ ನೀಡಿ ದಾಖಲಾತಿ ನೀಡಿದರೆ ತನಿಖೆಗೆ ಅನುಕೂಲವಾಗಲಿದೆ. ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸುವಾಗ ಯಾರಿಗೆಲ್ಲ ವಂಚನೆಯಾಗಿದೆ ಎಂಬ ಮಾಹಿತಿಯನ್ನು ಕೊಡುವ ಅಗತ್ಯವಿದೆ ಎಂದರು. ಸಿಐಡಿ ಆರೋಪಿಗಳಿಂದ ಜಫ್ತಿ ಮಾಡಿರುವ ಆಸ್ತಿ ಹಾಗೂ ನಗದನ್ನು ವಂಚನೆಗೊಳಗಾದವರಿಗೆ ಹಂಚಿಕೆ ಮಾಡಲು ಸರ್ಕಾರ ಮತ್ತು ನ್ಯಾಯಾಲಯ ಕ್ರಮ ತೆಗೆದುಕೊಳ್ಳಲಿದೆ. ಹೀಗಾಗಿ ವಂಚನೆಗೊಳಗಾದವರು ಸಿಐಡಿ ಕಚೇರಿ 080-22942444 ಅಥವಾ ಇಮೇಲ್ ಐಡಿ Z್ಝಛ್ಟಿಠ್ಚಿಜಿb.ho್ಚ.ಜಟq.ಜ್ಞಿ ಗೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.

ಸಿಐಡಿಯ ಸುಮಾರು 40ಕ್ಕೂ ಹೆಚ್ಚು ಅಧಿಕಾರಿಗಳು ಈ ಪ್ರಕರಣಗಳ ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳು ಸಾರ್ವಜನಿಕರಿಗೆ ಪಡೆದುಕೊಂಡ ಹಣವನ್ನು ಮನಸೋಇಚ್ಚೆ ಖರ್ಚು ಮಾಡಿದ್ದಾರೆ. ಕೆಲವರು ಸಿನಿಮಾ ತೆಗೆದಿದ್ದಾರೆ. ಹೆಂಡತಿಯನ್ನು ಹೀರೋಯಿನ್ ಮಾಡಿದ್ದಾರೆ. ಅವರು ಮಜಾ ಮಾಡಿರುವುದು ಸಾರ್ವಜನಿಕರ ಹಣ ಎಂಬ ಪಾಪಪ್ರಜ್ಞೆ ಅವರಿಗಿಲ್ಲ ಎಂದು ಕಿಶೋರ್‍ಚಂದ್ರ ವಿಷಾದಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin