‘ಜಮ್ಮು-ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನ ಹಿಂಪಡೆದರೆ ತಿರಂಗ ಧ್ವಜ ಹಿಡಿಯಲ್ಲ’

ಈ ಸುದ್ದಿಯನ್ನು ಶೇರ್ ಮಾಡಿ

Mehbooba-Mufti

ನವದೆಹಲಿ, ಜು.29- ಜಮ್ಮು-ಕಾಶ್ಮೀರಕ್ಕೆ ಒದಗಿಸಿರುವ ವಿಶೇಷ ಸ್ಥಾನಮಾನವನ್ನು ಹಿಂಪಡೆಯುವ ಅಥವಾ ಯಾವುದಾದ್ರೂ ಬದಲಾವಣೆ ಮಾಡುವ ತೆಗೆಯುವ ಕೆಲಸಕ್ಕೆ ಕೈ ಹಾಕಿದ್ರೆ ರಾಜ್ಯದಲ್ಲಿ ಯಾರೂ ತಿರಂಗ ಧ್ವಜವನ್ನು ಹಿಡಿಯುವುದಿಲ್ಲ ಎಂದು ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಎಚ್ಚರಿಸಿದ್ದಾರೆ.
ದೆಹಲಿಯಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಿಎಂ ಮೆಹಬೂಬಾ ಮುಫ್ತಿ ಸಂವಿಧಾನದ 35 (ಎ) ವಿಧಿಯ ವಿವಾದ ಬಗ್ಗೆ ಮಾತನಾಡುತ್ತಾ ಈ ಹೇಳಿಕೆ ನೀಡಿದ್ದಾರೆ.

ಸಂವಿಧಾನದ ಚೌಕಟ್ಟಿನಲ್ಲಿ ಕಾಶ್ಮೀರದ ಸಮಸ್ಯೆಯನ್ನು ಪರಿಹಾರಿಸುವ ನಿಟ್ಟಿನಲ್ಲಿ ನಾವು ಮಾತನಾಡುತ್ತಿದ್ದೇವೆ. ಆದರೆ, ಕೆಲವರು ಇದನ್ನು ಒಡೆಯುವ ಕೆಲಸದಲ್ಲಿ ತೊಡಗಿದ್ದಾರೆ ಅಂತಾ ಮೆಹಬೂಬಾ ಮುಫ್ತಿ ಆರೋಪಿಸಿದ್ದಾರೆ.  ಕಾಶ್ಮೀರದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಹಾಗೂ ತಮ್ಮ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಕಾರ್ಯಕರ್ತರು ಪ್ರಾಣ ಪಣಕ್ಕಿಟ್ಚು ಭಾರತದ ರಾಷ್ಟ್ರಧ್ವಜವನ್ನು ಎತ್ತಿ ಹಿಡಿಯುತ್ತಿದ್ದಾರೆ. ಒಂದು ವೇಳೆ ಸಂವಿಧಾನದಲ್ಲಿ ಕಾಶ್ಮೀರಕ್ಕೆ ನೀಡಲಾಗಿರುವ ವಿಶೇಷ ಸ್ಥಾನಮಾನವನ್ನು ತೆಗೆದು ಹಾಕಿದರೆ ಕಣಿವೆ ರಾಜ್ಯದಲ್ಲಿ ಯಾರೂ ತ್ರಿರಂಗ ಧ್ವಜವನ್ನು ಹಿಡಿಯುವುದಿಲ್ಲ ಎಂದು ಮೆಹಬೂಬಾ ಮುಫ್ತಿ ತಿಳಿಸಿದ್ದಾರೆ.

ಸಂವಿಧಾನದ 35 (ಎ) ವಿಧಿಯ ವಿವಾದ ಬಗ್ಗೆ ಮಾತನಾಡುತ್ತಾ ಹೇಳಿದ್ದು, ಸಂವಿಧಾನದ ಚೌಕಟ್ಟಿನಲ್ಲಿ ಕಾಶ್ಮೀರದ ಸಮಸ್ಯೆಯನ್ನು ಪರಿಹಾರಿಸುವ ನಿಟ್ಟಿನಲ್ಲಿ ನಾವು ಮಾತನಾಡುತ್ತಿದ್ದೇವೆ. ಆದರೆ, ಕೆಲವರು ಇದನ್ನು ಹೊಡೆಯುವ ಕೆಲಸದಲ್ಲಿ ತೊಡಗಿದ್ದಾರೆ ಅಂತಾ ಮೆಹಬೂಬಾ ಮುಫ್ತಿ ಆರೋಪಿಸಿದ್ದಾರೆ.
ಇದೇ ವೇಳೆ ಅವರು ಕಾಶ್ಮೀರದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಹಾಗೂ ತಮ್ಮ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಕಾರ್ಯಕರ್ತರು ಪ್ರಾಣ ಪಣಕ್ಕಿಟ್ಚು ಭಾರತದ ರಾಷ್ಟ್ರಧ್ವಜವನ್ನು ಎತ್ತಿ ಹಿಡಿಯುತ್ತಿದ್ದಾರೆ. ಒಂದು ವೇಳೆ ಸಂವಿಧಾನದಲ್ಲಿ ಕಾಶ್ಮೀರಕ್ಕೆ ನೀಡಲಾಗಿರುವ ವಿಶೇಷ ಸ್ಥಾನಮಾನವನ್ನು ತೆಗೆದು ಹಾಕಿದರೆ ಕಣಿವೆ ರಾಜ್ಯದಲ್ಲಿ ಯಾರೂ ತ್ರಿರಂಗ ಧ್ವಜವನ್ನು ಹಿಡಿಯುವುದಿಲ್ಲ ಎಂದು ಮೆಹಬೂಬಾ ಮುಫ್ತಿ ತಿಳಿಸಿದ್ದಾರೆ.

ಇಂದಿರಾ ಅಂದ್ರೆ ಇಂಡಿಯಾ:

ನನ್ನ ಪ್ರಕಾರ ಇಂದಿರಾ ಅಂದ್ರೆ ಇಂಡಿಯಾ. ಆಕೆ ಭಾರತವನ್ನು ಆದರ್ಶನೀಯವಾಗಿ ಪ್ರತಿನಿಧಿಸಿದವರು.  ನಾನು ಚಿಕ್ಕವಳಿದ್ದಾಗಿನಿಂದಲೂ ಇಂದಿರಾ ಗಾಂಧಿ ಭಾರತವನ್ನು ಪ್ರತಿನಿಧಿಸುತ್ತಿರುವುದನ್ನು ಕಂಡಿದ್ದೇನೆ. ಆಕೆಯನ್ನು ಕೆಲವರು ಇಷ್ಟಪಡದಿರಬಹುದು. ಆದರೆ ನನ್ನ ಪ್ರಕಾರ ಇಂದಿರಾ ಅಂದ್ರೆ ಇಂಡಿಯಾ ಎಂದು ಅವರು ಹೇಳಿದ್ದಾರೆ. ಇದೇ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನೂ ಶ್ಲಾಘಿಸುವುದಕ್ಕೆ ಅವರು ಮರೆಯಲಿಲ್ಲ. ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಕಾಶ್ಮೀರಿ ಕಣಿವೆಯಲ್ಲಿ ಶಾಂತಿಯನ್ನು ನೆಲೆಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ ಎಂದು ಸಹ ಅವರು ಹೇಳಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin