ಜಮ್ಮು- ಕಾಶ್ಮೀರದಲ್ಲಿ ತಲೆ ಎತ್ತಿದ ಅಲ್‍ಕೈದಾ ಬ್ರಾಂಚ್ : ತೀವ್ರ ಕಟ್ಟೆಚ್ಚರ

ಈ ಸುದ್ದಿಯನ್ನು ಶೇರ್ ಮಾಡಿ

Zakir-Musa

ನವದೆಹಲಿ, ಜು.29-ಕುಖ್ಯಾತ ಭಯೋತ್ಪಾದಕ ಝಾಕೀರ್ ಮುಸಾ ನೇತೃತ್ವದಲ್ಲಿ ಕಣಿವೆ ರಾಜ್ಯ ಕಾಶ್ಮೀರದಲ್ಲಿ ಅಲ್-ಕೈದಾ ಉಗ್ರಗಾಮಿ ಸಂಘಟನೆಯ ಹೊಸ ಶಾಖೆಯೊಂದು ತಲೆ ಎತ್ತಿದೆ. ಈ ಆಘಾತಕಾರಿ ಬೆಳವಣಿಗೆಯಿಂದಾಗಿ ಜಮ್ಮು ಮತ್ತು ಕಾಶ್ಮೀರದ ಮೇಲೆ ಕೇಂದ್ರ ಗೃಹ ಸಚಿವಾಲಯ ನಿಗಾ ವಹಿಸಿದೆ. ಅಲ್‍ಕೈದಾದ ಹೊಸ ಸಂಘಟನೆ ರಚನೆಯಾಗಿರುವ ಸುದ್ದಿಯನ್ನು ಗುಪ್ತಚರ ಮೂಲಗಳು ಖಚಿತಪಡಿಸಿವೆ. ಈ ಹಿನ್ನೆಲೆಯಲ್ಲಿ ಕಣಿವೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗಿ ಹಿಂಸಾಚಾರ ಭುಗಿಲೇಳುವ ಸಾಧ್ಯತೆ ಇರುವುದರಿಂದ ಭದ್ರತಾಪಡೆಗಳು ತೀವ್ರ ಕಟ್ಟೆಚ್ಚರ ವಹಿಸಿವೆ.

ತೀವ್ರ ಭಿನ್ನಾಭಿಪ್ರಾಯದಿಂದಾಗಿ ಹಿಜ್‍ಬುಲ್ ಮುಜಾಹಿದೀನ್ (ಎಚ್‍ಎಂ) ಉಗ್ರಗಾಮಿ ಬಣವನ್ನು ಇತ್ತೀಚೆಗೆ ತೊರೆದಿದ್ದ ಮುಸಾ, ತನ್ನದೇ ಆದ ಭಯೋತ್ಪಾದಕ ಸಂಘಟನೆಯನ್ನು ರಚಿಸುವುದಾಗಿ ಹೇಳಿಕೊಂಡಿದ್ದ. ಮೊದಲಿನಿಂದಲೂ ಅಲ್-ಕೈದಾ ಭಯೋತ್ಪಾದಕರಿಗೆ ಬೆಂಬಲ ನೀಡುತ್ತಿರುವ ಈತ ಈಗ ಕಾಶ್ಮೀರದ ಹೊಸ ಶಾಖೆಗೆ ನೇತೃತ್ವ ವಹಿಸಿದ್ದಾನೆ. ಕಳೆದ ವರ್ಷ ಯೋಧರ ಗುಂಡಿಗೆ ಬಲಿಯಾದ ಕುಪ್ರಸಿದ್ಧ ಭಯೋತ್ಪಾದಕ ಬುರ್‍ಹನ್ ವಾನಿಯ ನಿಕಟವರ್ತಿಯಾದ ಮುಸಾ, ಕಾಶ್ಮೀರ ಕಣಿವೆಯಲ್ಲಿ ಇತ್ತೀಚೆಗೆ ನಡೆಯುತ್ತಿರುವ ಸರಣಿ ದಾಳಿಗಳು ಮತ್ತು ಭಾರಿ ಪ್ರತಿಭಟನೆಗೆ ಕುಮ್ಮಕ್ಕು ನೀಡುತ್ತಿದ್ಧಾನೆ.

ಈ ನಡುವೆಯೇ ಈತನ ಮುಖಂಡತ್ವದಲ್ಲಿ ಕಾಶ್ಮೀರದಲ್ಲಿ ಅಲ್-ಕೈದಾ ಉಗ್ರಗಾಮಿ ಸಂಘಟನೆ ತಲೆಎತ್ತಿರುವುದು ಪ್ರಕ್ಷುಬ್ಧಮಯ ಕಣಿವೆಯಲ್ಲಿ ಮತ್ತೆ ಹಿಂಸಾಚಾರ ಮತ್ತು ಆಕ್ರಮಣಗಳು ಹೆಚ್ಚಾಗುವ ಆತಂಕ ಸೃಷ್ಟಿಯಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin