ಜಿಂಗ್‍ಪಿಂಗ್ – ದೋವಲ್ ಭೇಟಿಯಲ್ಲೂ ಡೋಕ್ಲಾಮ್ ಬಿಕ್ಕಟ್ಟಿಗೆ ಸಿಗಲಿಲ್ಲ ಪರಿಹಾರ

ಈ ಸುದ್ದಿಯನ್ನು ಶೇರ್ ಮಾಡಿ

Ajit-Doval--1

ಬೀಜಿಂಗ್, ಜು.29-ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಚೀನಾ ಅಧ್ಯಕ್ಷ ಕ್ಸಿ ಜಿಂಗ್‍ಪಿಂಗ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರಾದರೂ. ಉಭಯದೇಶಗಳ ನಡುವೆ ಈಶಾನ್ಯ ರಾಜ್ಯ ಸಿಕ್ಕಿಂ ವಲಯದ ಡೋಕ್ಲಾಮ್ ಗಡಿಯಲ್ಲಿ ಉಲ್ಬಣಗೊಂಡಿರುವ ಸೇನಾ ಸಂಘರ್ಷ ಇತ್ಯರ್ಥವಾಗಿಲ್ಲ. ಆದರೆ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಭಾರತ-ಚೀನಾ ನಾಯಕರಿಗೆ ಸ್ವಲ್ಪ ಕಾಲಾವಕಾಶ ನೀಡಿರುವುದು ಸಮಾಧಾನಕರ ಬೆಳವಣಿಗೆಯಾಗಿದೆ.

Ajit-Doval--1

ಚೀನಾ ರಾಜಧಾನಿ ಬೀಜಿಂಗ್‍ನಲ್ಲಿ ನಡೆದ ಬ್ರಿಕ್ಸ್ಸ್ (ಬ್ರೆಜಿಲ್, ರಷ್ಯಾ, ಇಂಡಿಯಾ, ಚೀನಾ, ಸೌತ್ ಆಫ್ರಿಕಾ) ದೇಶಗಳ ರಾಷ್ಟ್ರೀಯ ಭದ್ರತಾ ಸಲಹೆಗಾರರ (ಎನ್‍ಎಸ್‍ಎಗಳ) ಸಭೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಅಧ್ಯಕ್ಷ ಜಿಂಗ್‍ಪಿಂಗ್ ಮತ್ತು ಇತರ ಅಧಿಕಾರಿಗಳೊಂದಿಗೆ ಡೋಕ್ಲಾಮ್ ಬಿಕ್ಕಟ್ಟು ಕುರಿತು ಪ್ರಸ್ತಾಪಿಸಿದರು. ಆದರೆ ಆ ಪ್ರದೇಶದಿಂದ ಭಾರತೀಯ ಸೇನಾಪಡೆಗಳು ಹಿಂದಕ್ಕೆ ಸರಿದ ನಂತರವಷ್ಟೇ ಮಾತುಕತೆಗೆ ಚೀನಾ ಸಿದ್ದ ಎಂಬ ನಿಲುವು ಸಭೆಯಲ್ಲಿ ಮತ್ತೆ ವ್ಯಕ್ತವಾಯಿತು ಎಂದು ಮಾಧ್ಯಮಗಳು ವರದಿ ಮಾಡಿವೆ. ಆದರೆ ಬಿಕ್ಕಟ್ಟು ಸುಧಾರಣೆಯಾಗುವ ನಿಟ್ಟಿನಲ್ಲಿ ಪೂರಕ ಮಾತುಕತೆಗೆ ಚೀನಿ ನಾಯಕರು ಒಲವು ತೋರಿರುವುದು ಸಮಾಧಾನಕರ ಸಂಗತಿಯಾಗಿದೆ.   ಆಗಸ್ಟ್ 1 ರಂದು ಚೀನಾ ಸೇನೆ-ಪೀಪಲ್ಸ್ ಲಿಬರೇಷನ್ ಆರ್ಮಿಯ(ಪಿಎಲ್‍ಎ) 90ನೆ ವಾರ್ಷಿಕೋತ್ಸವ ನಡೆಯಲಿದ್ದು, ಆ ಬಳಿಕ ಡೋಕ್ಲಾಮ್ ಗಡಿ ಬಿಕ್ಕಟ್ಟು ಉಪಶಮನಕ್ಕೆ ಬೀಜಿಂಗ್ ಮುಂದಾಗುವ ನಿರೀಕ್ಷೆ ಇದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOSb

Facebook Comments

Sri Raghav

Admin