ಜೇಟ್ಲಿ ವಿರುದ್ಧ ಕೆಟ್ಟ ಪದ ಬಳಸಲು ಜೇಠ್ಮಲಾನಿಗೆ ಹೇಳಿಕೊಟ್ಟಿದ್ದು ಕೇಜ್ರಿವಾಲ್ ಅಂತೆ..!

Kejriwal--01

ನವದೆಹಲಿ, ಜು.29-ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ವಿರುದ್ಧ ಹಿರಿಯ ವಕೀಲ ರಾಮ್ ಜೇಠ್ಮಲಾನಿ ಕೆಟ್ಟ ಪದ ಬಳಸಿದ್ದ ವಿಷಯ ಈಗ ಹೊಸ ತಿರುವು ಪಡೆದುಕೊಂಡಿದೆ. ಅಮ್ ಆದ್ಮಿ ಪಕ್ಷದ (ಎಎಪಿ) ವರಿಷ್ಠ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ನಿಮ್ಮ ಬಗ್ಗೆ (ಅರುಣ್ ಜೇಟ್ಲಿ) ಕೆಟ್ಟ ಪದ ಬಳಸಲು ನನಗೆ ತಿಳಿಸಿದ್ದರು ಎಂದು ಹೇಳಿದ್ದಾರೆ.

ಅರುಣ್ ಜೇಟ್ಲಿ ಅವರು ಕೇಜ್ರಿವಾಲ್ ವಿರುದ್ಧ ಮಾನನಷ್ಟ ಮೊಕದ್ದಮೆಗಳನ್ನು ಹೂಡಿದ್ದರು. ಈ ಸಂದರ್ಭದಲ್ಲಿ ಹಿರಿಯ ವಕೀಲ ಜೇಠ್ಮಲಾನಿ ಅವರು ಜೇಟ್ಲಿ ವಿರುದ್ಧ ಕೆಲವು ಅಸಂಸದೀಯ ಪದಗಳನ್ನು ಬಳಸಿದ್ದು ವಿವಾದಕ್ಕೆ ಕಾರಣವಾಗಿತ್ತು. ಕೇಜ್ರಿವಾಲ್ ಪರ ವಕಾಲತ್ತು ವಹಿಸುವುದರಿಂದ ಹಿಂದೆ ಸರಿದಿರುವ ಹಿರಿಯ ವಕೀಲರು ಇತ್ತೀಚೆಗೆ ಜೇಟ್ಲಿ ಅವರಿಗೆ ಪತ್ರ ಬರೆದು ನಿಮ್ಮ ವಿರುದ್ಧ ಕೆಟ್ಟ ಪದಗಳನ್ನು ಬಳಸುವಂತೆ ಅವರು (ಕೇಜ್ರಿವಾಲ್) ನನಗೆ ಪ್ರಚೋದನೆ ನೀಡಿದ್ದರು ಎಂದು ತಿಳಿಸಿದ್ದಾರೆ.

Facebook Comments

Sri Raghav

Admin