ನಮ್ಮ ಕ್ಷಿಪಣಿ ಅಮೆರಿಕವನ್ನೇ ಉಡೀಸ್ ಮಾಡಬಲ್ಲದು : ಕಿಮ್

ಈ ಸುದ್ದಿಯನ್ನು ಶೇರ್ ಮಾಡಿ

Kim-a01

ಪಯೊಂಗ್‍ಯಾಂಗ್, ಜು.29- ಎರಡನೆ ಬಾರಿ ಪ್ರಯೋಗಿಸಲಾದ ಅಂತರ ಖಂಡಾಂತರ ಕ್ಷಿಪಣಿಯು(ಇಂಟರ್‍ಕಾಂಟಿನೆಂಟಲ್ ಬ್ಯಾಲಿಸ್ಟಿಕ್ ಮಿಸೈಲ್-ಐಸಿಬಿಎಂ) ಅಮೆರಿಕವನ್ನೇ ಧ್ವಂಸಗೊಳಿಸಬಲ್ಲದು ಎಂದು ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಹೇಳಿದ್ದಾರೆ.  ಉತ್ತರ ಕೊರಿಯಾದ ಐಸಿಬಿಎಂ ಅಸ್ತ್ರವು ಅಗಾಧ ಸಾಮಥ್ರ್ಯ ಹೊಂದಿದ್ದು, ಲಾಸ್ ಏಂಜಲಿಸ್ ಮತ್ತು ಚಿಕಾಗೋ ಸೇರಿದಂತೆ ಅಮೆರಿಕದ ಪ್ರಮುಖ ನಗರಗಳನ್ನು ಒಂದೇ ಬಾರಿಗೆ ನುಚ್ಚುನೂರು ಮಾಡಬಲ್ಲದು. ಈ ಪ್ರಯೋಗದಿಂದ ನಮಗೆ ದೊಡ್ಡ ಸಮಾಧಾನವಾಗಿದೆ ಎಂದು ಕಿಮ್ ತಿಳಿಸಿದ್ದಾರೆ.

3,725 ಕಿ.ಮೀ. ಗರಿಷ್ಠ ಎತ್ತರ ಹಾಗೂ 998 ಕಿ.ಮೀ. ನಿಖರ ಗುರಿಯತ್ತ ಚಲಿಸಿ ಜಪಾನಿನ ಸಮುದ್ರ ತೀರದಲ್ಲಿ ಇಳಿದ ಹೌವಾಸಾಂಗ್-14 ಕ್ಷಿಪಣಿ ಪ್ರಯೋಗ ಮತ್ತೆ ವಿಶ್ವಸಂಸ್ಥೆ ಮತ್ತು ಅಮೆರಿಕವನ್ನು ಕೆರಳಿಸಿದೆ.

ಟ್ರಂಪ್ ಆಕ್ರೋಶ : ಈ ಕ್ಷಿಪಣಿ ಪ್ರಯೋಗವು ಉತ್ತರ ಕೊರಿಯಾದ ಅತ್ಯಂತ ಅಪಾಯಕಾರಿ ಕೃತ್ಯ ಎಂದು ಆಕ್ರೋಶ ವ್ಯಕ್ತಪಡಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್. ಈ ದುಸ್ಸಾಹಸದಿಂದ ಆ ದೇಶವು ಅಂತಾರಾಷ್ಟ್ರೀಯ ಸಮುದಾಯದಿಂದ ಮತ್ತಷ್ಟು ದೂರವಾಗಲಿದೆ. ಪಯೊಂಗ್‍ಯಾಂಗ್‍ನ ಈ ಪ್ರಚೋದನಕಾರಿ ಕೃತ್ಯಕ್ಕೆ ಮುಂದೆ ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದು ಗುಡುಗಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin