ನಾಗರಪಂಚಮಿ ಹಬ್ಬದಂದೇ ಬೆಂಗಳೂರಿನಲ್ಲಿ ನಾಲ್ಕು ಮಹಿಳೆಯರ ಸರ ಅಪಹರಣ

ಈ ಸುದ್ದಿಯನ್ನು ಶೇರ್ ಮಾಡಿ

chain--snatcher

ಬೆಂಗಳೂರು, ಜು.29- ನಾಗರ ಪಂಚಮಿ ಹಬ್ಬದ ದಿನವಾದ ನಿನ್ನೆ ಮಹಿಳೆಯರು ನಡೆದು ಹೋಗುತ್ತಿದ್ದಾಗ ನಾಲ್ಕು ಕಡೆ ಸರಗಳ್ಳರು ತಮ್ಮ ಅಟ್ಟಹಾಸ ಮೆರೆದಿದ್ದು, ನಾಲ್ವರ ಸರಗಳನ್ನು ಅಪಹರಿಸಿದ್ದಾರೆ.
ಬಸವೇಶ್ವರನಗರ:
ಇಲ್ಲಿನ 3ನೆ ಹಂತದಲ್ಲಿ ಲೀಲಾ ಜಗದೀಶ್ ಎಂಬುವರು ಸಂಜೆ 6.30ರಲ್ಲಿ ದೇವಸ್ಥಾನಕ್ಕೆ ಹೋಗಿ ವಾಪಸ್ ಮರಳುತ್ತಿದ್ದಾಗ ಬೈಕ್‍ನಲ್ಲಿ ಹಿಂಬಾಲಿಸಿದ ಸರಗಳ್ಳರು 2 ಲಕ್ಷ ಮೌಲ್ಯದ 60 ಗ್ರಾಂ ಸರ ಅಪಹರಿಸಿದ್ದಾರೆ.
ಚಂದ್ರಾ ಲೇಔಟ್:
ಚಂದ್ರಾ ಲೇಔಟ್‍ನ 10ನೆ ಕ್ರಾಸ್‍ನಲ್ಲಿ ಆರತಿ ಎಂಬುವರು ರಾತ್ರಿ 8.30ರಲ್ಲಿ ನಡೆದು ಹೋಗುತ್ತಿದ್ದಾಗ ಬೈಕ್‍ನಲ್ಲಿ ಬಂದ ಇಬ್ಬರು ಇವರ ಕೊರಳಲ್ಲಿದ್ದ 25 ಗ್ರಾಂ ಸರ ಅಪಹರಿಸಿದ್ದಾರೆ.

ಮಹಾಲಕ್ಷ್ಮಿ ಲೇಔಟ್:
12ನೆ ಬಿ ಕ್ರಾಸ್‍ನಲ್ಲಿ ಸಿಂಧು ಎಂಬುವರು ರಾತ್ರಿ 9.30ರಲ್ಲಿ ನಡೆದು ಹೋಗುತ್ತಿದ್ದಾಗ ಬೈಕ್‍ನಲ್ಲಿ ಬಂದ ಸರಗಳ್ಳರು 12 ಗ್ರಾಂ ಸರ ಎಗರಿಸಿ ಪರಾರಿಯಾಗಿದ್ದಾರೆ.

ರಾಜಾಜಿನಗರ:
ರಾಮಮಂದಿರದ 53ನೆ ಕ್ರಾಸ್‍ನಲ್ಲಿ ಜಯಶ್ರೀ ಎಂಬುವರು ಸಂಜೆ 4.15ರಲ್ಲಿ ನಡೆದು ಹೋಗುತ್ತಿದ್ದಾಗ ವಿಳಾಸ ಕೇಳುವ ನೆಪದಲ್ಲಿ ಇವರ ಎದುರಿಗೆ ಬೈಕ್‍ನಲ್ಲಿ ಬಂದ ಇಬ್ಬರು ಸರಗಳ್ಳರು 65 ಗ್ರಾಂ ಸರ ಎಗರಿಸಿದ್ದಾರೆ.  ಈ ನಾಲ್ಕೂ ಪ್ರಕರಣಗಳನ್ನು ಆಯಾ ಠಾಣೆ ಪೊಲೀಸರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin