ನಿಮಗೆ ಅಧಿಕಾರ ಕೊಟ್ಟೋರ್ಯಾರು..? ಮೋದಿ ವಿರುದ್ಧ ಗುಡುಗಿದ ಗೌಡರು

Devegowda--01

ಬೆಂಗಳೂರು, ಜು.29- ಒಂದು ರಾಷ್ಟ್ರ ಒಂದು ಕಾನೂನು ಒಂದು ಧರ್ಮ ಮಾಡಲು ನಿಮಗ್ಯಾರು ಅಧಿಕಾರ ಕೊಟ್ಟರು? ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಹೇಳಿದ್ದಾರೆಯೇ ? ಸಂವಿಧಾನದ ಪ್ರಕಾರ ಪ್ರತಿಜ್ಞೆ ಸ್ವೀಕರಿಸಿದವರು ನೀವು, ಇದು ಸಾಧ್ಯವಾಗುತ್ತದೆಯೇ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಪರೋಕ್ಷವಾಗಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡರು. ಗಾಂಧಿನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಸಂವಿಧಾನ ಎಲ್ಲಾ ಧರ್ಮಗಳಿಗೂ ಗೌರವ ಕೊಡುವುದನ್ನು ಹೇಳುತ್ತದೆ. ಆಹಾರ ಪದ್ಧತಿಯ ವಿಚಾರದಲ್ಲಿ ನಿರ್ಧರಿಸಲು ನಿಮಗೆ ಯಾರು ಅಧಿಕಾರ ಕೊಟ್ಟರು. ಅದು ವ್ಯಕ್ತಿಗತವಾದ ವಿಚಾರ ಆಹಾರ ಅವರವರ ಆಯ್ಕೆ ಎಂದು ಹೇಳಿದರು.

ಕಾಂಗ್ರೆಸ್ ಬಗ್ಗುಬಡಿಯುತ್ತಿದ್ದೀರಿ ಎನ್ನುತ್ತೀರಿ ಇದಕ್ಕೆ ನಿಮಗೆ ಜನಾದೇಶ ಕೊಟ್ಟಿದ್ದಾರೆಯೇ ಎಂದು ಪ್ರಶ್ನಿಸಿದ ಅವರು ನಾಲ್ಕೈದು ರಾಜ್ಯಗಳನ್ನು ಹೊರತುಪಡಿಸಿ ಇಡೀ ರಾಷ್ಟ್ರ ಕೇಸರಿಮಯ ವಾಗುತ್ತದೆ ಎಂದು ಹೇಳಿಕೆ ಕೊಡುತ್ತಿದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಬಿಹಾರದಲ್ಲಿ 24 ಗಂಟೆಗಳಲ್ಲಿ ಮತ್ತೆ ನಿತೀಶ್ ಕುಮಾರ್ ಅವರು ಮುಖ್ಯಮಂತ್ರಿಯಾಗುತ್ತಾರೆ. ಇವರ ಜೊತೆ ಸೇರಿದ ಮೇಲೆ ಲಾಲು ಪ್ರಸಾದ್ ಯಾದವ್‍ರನ್ನು ತಬ್ಬಿಕೊಳ್ಳುತ್ತೀರಿ, ಮತ್ತೆ ಇತ್ತ ಅವರ ಶಕ್ತಿ ಕಗ್ಗಿಸಲು ಅವರ ವಿರುದ್ಧ ಹೊಸ ಕೇಸ್ ಹಾಕಿಸುತ್ತೀರಿ ಇದು ವಾಮಮಾರ್ಗವಲ್ಲವೇ ಇದೆಲ್ಲವನ್ನು ದೇಶದ ಜನ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದರು.

Devegowda--01-JDS

ನಾನು ಮುಖ್ಯಮಂತ್ರಿಯಾಗಿದ್ದಾಗ ಈದ್ಗಾ ಮೈದಾನದಲ್ಲಿ ಉಂಟಾದ ವಿವಾದವನ್ನು ರಾಷ್ಟ್ರಧ್ವಜ ಹಾರಿಸುವ ಮೂಲಕ ಬಗೆಹರಿಸಿದ್ದರು. ಇಂದಿನವರೆಗೂ ವಿವಾದ ತಲೆಯೆತ್ತಿಲ್ಲ ಒಂದೂವರೆ ವರ್ಷ ಅವಧಿಯಲ್ಲಿ 2 ಲಕ್ಷ ಹಕ್ಕುಪತ್ರಗಳನ್ನು ನೀಡಿದೆವು. ನಮ್ಮ ಅವಧಿಯಲ್ಲಿ ಕಡಿಮೆ ದರದಲ್ಲಿ ಸೀಮೆಎಣ್ಣೆ ಸೇರಿದಂತೆ ಪಡಿತರ ವಿತರಿಸಲಾಗುತ್ತಿತ್ತು.

ರಾಜ್ಯ ಸರ್ಕಾರ ಎಲ್ಲ ಭಾಗ್ಯಗಳನ್ನು ನೀಡಿದೆ ಇನ್ಯಾವ ಭಾಗ್ಯ ಉಳಿಸಿದೆಯೋ ತಿಳಿದುಕೊಳ್ಳಲು ಸಾಧ್ಯವಿಲ್ಲ ಎಂದು ಮಾರ್ಮಿಕವಾಗಿ ನುಡಿದರು. ಕಾವೇರಿ ನ್ಯಾಯಾಧಿಕರಣದ ಅಂತಿಮ ತೀರ್ಪಿನ ಅಧಿಸೂಚನೆ ಹೊರಡಿಸಬೇಡಿ ಎಂದು ಪ್ರಧಾನಿ ಮನ್‍ಮೋಹನ್ ಸಿಂಗ್ ಅವರಿಗೆ ಮನವಿ ಮಾಡಿದ್ದೆವು. ಆದರೆ ಅವರು ಕೈಚೆಲ್ಲಿದ್ದರು. ಕಳೆದ ಎರಡು ವರ್ಷಗಳಿಂದ ಮಹದಾಯಿಗಾಗಿ ಆಗ್ರಹಿಸಿ ಉತ್ತರ ಕರ್ನಾಟಕದ ಜನ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಇನ್ನೂ ನ್ಯಾಯ ಸಿಕ್ಕಿಲ್ಲ ಎಂದು ಗೌಡರು ಬೇಸರ ವ್ಯಕ್ತಪಡಿಸಿದರು. ನಾವು ಬೆಂಗಳೂರಿಗೆ ಕುಡಿಯುವ ನೀರು ಕೊಟ್ಟಿದ್ದೇವೆ. ರಾಜಕೀಯ ಕೇತ್ರದಲ್ಲಿ ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿಗಾಗಿ ಠರಾವು ಮಂಡಿಸಿ ಪ್ರಧಾನಿಗೆ ಮನವಿ ಸಲ್ಲಿಸಿದ್ದೇವೆ ಎಂದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin