ಬಿಜೆಪಿ ಜತೆ ದೋಸ್ತಿ, ಯುಪಿಎ ಅಭ್ಯರ್ಥಿಗೆ ಬೆಂಬಲ : ಶಾಕ್ ಕೊಟ್ಟ ನಿತೀಶ್

Nitish-KumaR--01

ಪಾಟ್ನಾ, ಜು.29- ಬಿಜೆಪಿ ಜತೆ ಸಖ್ಯ ಮಾಡಿಕೊಂಡು ಬಿಹಾರದಲ್ಲಿ ಎನ್‍ಡಿಎ ಮೈತ್ರಿಕೂಟ ಸರ್ಕಾರ ರಚಿಸಿರುವ ಜೆಡಿ(ಯು) ಧುರೀಣ ಮತ್ತು ಮುಖ್ಯಮಂತ್ರಿ ನಿತೀಶ್‍ಕುಮಾರ್, ಉಪರಾಷ್ಟ್ರಪತಿ ಚುನಾವಣೆಯಲ್ಲಿ ಮಾತ್ರ ತಾವು ಯುಪಿಎ ಅಭ್ಯರ್ಥಿ ಗೋಪಾಲಕೃಷ್ಣಗಾಂಧಿ ಅವರಿಗೆ ಬೆಂಬಲ ನೀಡುವುದಾಗಿ ಘೋಷಿಸಿ ಅಚ್ಚರಿ ಮೂಡಿಸಿದ್ದಾರೆ. ಈ ಹಿಂದೆ ಯುಪಿಎಗೆ ನೀಡಿದ ವಾಗ್ದಾನದಂತೆ ಕಾಂಗ್ರೆಸ್ ಮಿತ್ರಪಕ್ಷದ ಉಮೇದುವಾರ ಹಾಗೂ ರಾಷ್ಟ್ರಪಿತ ಮಹಾತ್ಮಗಾಂದಿ ಅವರ ಮೊಮ್ಮಗ ಜಿ.ಕೆ.ಗಾಂಧಿಗೆ ತಾವು ಬೆಂಬಲ ನೀಡುವುದಾಗಿ ನಿತೀಶ್ ಸ್ಪಷ್ಟಪಡಿಸಿದ್ದಾರೆ.

ರಾಜ್ಯದ ಹಿತಾಸಕ್ತಿ ದೃಷ್ಟಿಯಿಂದ ಬಿಜೆಪಿ ಜತೆ ಕೈ ಜೋಡಿಸಿ ಸರ್ಕಾರ ರಚಿಸಲಾಗಿದೆ. ಆದರೆ, ಗೋಪಾಲಕೃಷ್ಣ ಗಾಂಧಿ ಅವರನ್ನು ಅದರ ವ್ಯಕ್ತಿತ್ವ ಮತ್ತು ಸಾಮಥ್ರ್ಯದ ಆಧಾರದಲ್ಲಿ ಬೆಂಬಲಿಸಲಾಗುತ್ತಿದೆ. ಈ ವಿಷಯದಲ್ಲಿ ಗೊಂದಲ ಬೇಡ ಎಂದು ನಿತೀಶ್ ಹೇಳಿದ್ದಾರೆ. ಈ ವಿಚಾರದಲ್ಲಿ ಪಕ್ಷದ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಬಿಹಾರದಲ್ಲಿ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಗೂ, ಹಿಂದೆ ಕೈಗೊಂಡ ಈ ನಿಲುವಿನ ಮೇಲೆ ಯಾವುದೇ ಪರಿಣಾಮ ಬೀರದು ಎಂದು ಮುಖ್ಯಮಂತ್ರಿ ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin