ಮೊಂಟ್ ಬ್ಲಾಂಕ್‍ನಲ್ಲಿ ಅಪಘಾತಕ್ಕೀಡಾದ ಏರ್ ಇಂಡಿಯಾ ಪ್ರಯಾಣಿಕರ ದೇಹದ ಭಾಗಗಳು ಪತ್ತೆ..!

ಈ ಸುದ್ದಿಯನ್ನು ಶೇರ್ ಮಾಡಿ

Mont-Blanc

ಗ್ರೆನೊಬೆಲ್, ಜು.29-ಫ್ರೆಂಚ್ ಆಲ್ಫ್ಸ್  ನ ಮೊಂಟ್ ಬ್ಲಾಕ್ ಪರ್ವತದಲ್ಲಿ ಮಾನವ ಮೃತದೇಹಗಳ ಭಾಗಗಳು ಪತ್ತೆಯಾಗಿದ್ದು, ಅನೇಕ ವರ್ಷಗಳ ಹಿಂದೆ ಅಪಘಾತಕ್ಕೀಡಾದ ಎರಡು ಏರ್ ಇಂಡಿಯಾ ವಿಮಾನ ದುರಂತಗಳ ಪ್ರಯಾಣಿಕರದ್ದಾಗಿರಬಹುದು ಎಂದು ಶಂಕಿಸಲಾಗಿದೆ.  ಹಿಮಾಚ್ಚಾದಿತ ಪರ್ವತಗಳಲ್ಲಿ ಸಂಭವಿಸುವ ವಿಮಾನ ಅಪಘಾತಗಳ ಕುತೂಹಲಿಯಾಗಿರುವ ಡೇನಿಯಲ್ ರೋಚ್, ಬೊಸ್ಸೋನ್ಸ್ ನಿರ್ಗಲ್ಲು ಪ್ರದೇಶದಲ್ಲಿ ಹಲವಾರು ವರ್ಷಗಳಿಂದ ಮೃತದೇಹಗಳಿಗಾಗಿ ಶೋಧ ನಡೆಸುತ್ತಿದ್ದು, ನಿನ್ನೆ ದೇಹದ ಭಾಗಗಳು ಪತ್ತೆಯಾಗಿವೆ.

ಈವರೆಗೆ ನನಗೆ ಇಂಥ ಯಾವುದೇ ಗಮನಾರ್ಹ ಮಾನವ ದೇಹಗಳ ಭಾಗಗಳು ಕಂಡುಬಂದಿಲ್ಲ. ಆದರೆ ಈಗ ಒಂದು ಕೈ ಮತ್ತು ಕಾಲೊಂದರ ಮೇಲ್ಬಾಗ ಪತ್ತೆಯಾಗಿದೆ ಎಂದು ಡೇನಿಯಲ್ ಹೇಳಿದ್ದಾರೆ.  1966ರ ಜನವರಿಯಲ್ಲಿ ಮುಂಬೈನಿಂದ ನ್ಯೂಯಾರ್ಕ್‍ಗೆ ತೆರಳುತ್ತಿದ್ದ ಏರ್ ಇಂಡಿಯಾ ಬೋಯಿಂಗ್ 707 ವಿಮಾನ ಮೊಂಟ್ ಬ್ಲಾಂಕ್ ಗಿರಿಶೃಂಗದ ಬಳಿ ಅಪಘಾತಕ್ಕೀಡಾಗಿ ಅದರಲ್ಲಿದ್ದ ಎಲ್ಲ 117 ಮಂದಿ ದುರಂತ ಸಾವಿಗೀಡಾಗಿದ್ದರು. 1950ರಲ್ಲಿ ಇದೇ ಪರ್ವತ ಮೇಲೆ ಮತ್ತೊಂದು ಏರ್ ಇಂಡಿಯಾ ವಿಮಾನ ಡಿಕ್ಕಿ ಹೊಡೆದು ಕನಿಷ್ಠ 48 ಜನ ಮೃತಪಟ್ಟಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin