ಯಾಮಾರಿಸಿ ಮಾಯುವೆಯಾಗಿದ್ದ ‘ಪೋಲಿ’ಸಪ್ಪ ಅಂದರ್

Police--01

ಮೈಸೂರು, ಜು.29- ಪೊಲೀಸ್ ಎಂದು ನಂಬಿಸಿ ಯುವತಿಯನ್ನು ವಿವಾಹವಾಗಿದ್ದ ನಕಲಿ ಪೊಲೀಸಪ್ಪನೊಬ್ಬ ಗ್ರಾಮಾಂತರ ಪೊಲೀಸರ ಅತಿಯಾಗಿದ್ದಾನೆ. ಮೈಸೂರು ತಾಲ್ಲೂಕು ಮಾವಿನಹಳ್ಳಿಯ ಶಿವಮೂರ್ತಿ (25) ಬಂಧಿತ ನಕಲಿ ಪೊಲೀಸ್. ಆರೋಪಿಯು ಮೈಸೂರು ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ ಎಂದು ನಂಬಿಸಿ ಕಳೆದ ಒಂದು ವರ್ಷದ ಹಿಂದೆ ಯುವತಿಯನ್ನು ವಿವಾಹವಾಗಿದ್ದೆ. ಡಿಎಆರ್ ಪೇದೆ ಮಾದರಿಯಲ್ಲಿ ಐಡಿ ಕೋರ್ಡ್ ತೋರಿಸಿ ಈತ ನಂಬಿಸಿದ್ದ. ವಿವಾಹದ ವೇಳೆ 1 ಲಕ್ಷ ರೂ. ನಗದು 260 ಗ್ರಾಂ ಚಿನ್ನ ಪಡೆದಿದ್ದ. ಮನೆಯಿಂದ ಹೋಗುವಾಗ, ಬರುವಾಗ ಪೊಲೀಸ್ ಸಮವಸ್ತ್ರದಲ್ಲಿ ಇರುತ್ತಿದ್ದ . ಕೆಲ ದಿನಗಳಿಂದ ಈತ ನಾಪತ್ತೆಯಾಗಿದ್ದ.

ಈ ಸಂಬಂಧ ದೂರು ಕೊಡಲು ಡಿಎಆರ್‍ಗೆ ಪತ್ನಿ ಹೋಗಿದ್ದಾಗ ನಕಲಿ ಪೇದೆ ಎಂಬುದು ಗೊತ್ತಾಗಿದೆ.  ಈ ಹಿನ್ನೆಲೆಯಲ್ಲಿ ಆಕೆ ದೂರು ನೀಡಿದ್ದಳು. ಹಾಗಾಗಿ ಗ್ರಾಮಾಂತರ ಠಾಣೆ ಪೊಲೀಸರು ಶಿವಮೂರ್ತಿಯನ್ನು ಬಂಧಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin