ಶ್ವೇತಭವನ ಸಿಬ್ಬಂದಿ ಮುಖ್ಯಸ್ಥರಾಗಿ ಜಾನ್ ಕೆಲ್ಲಿ ನೇಮಕ

ಈ ಸುದ್ದಿಯನ್ನು ಶೇರ್ ಮಾಡಿ

John-Klly

ವಾಷಿಂಗ್ಟನ್, ಜು.29-ಉನ್ನತಾಧಿಕಾರಿಗಳನ್ನು ಪದಚ್ಯುತಗೊಳಿಸಿ ಈಗಾಗಲೇ ವಿವಾದಕ್ಕೆ ಗುರಿಯಾಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮತ್ತೆ ತಮ್ಮ ವರಸೆಯನ್ನು ಮುಂದುವರಿಸಿದ್ದಾರೆ. ಶ್ವೇತಭವನದ ಸಿಬ್ಬಂದಿ ಮುಖ್ಯಸ್ಥರಾಗಿದ್ದ (ಚೀಫ್ ಆಫ್ ಸ್ಟಾಫ್) ರೀನ್ಸ್ ಪ್ರೀಬಸ್‍ನನ್ನು ಕೆಳಗಿಸಿರುವ ಟ್ರಂಪ್ ಆ ಸ್ಥಾನಕ್ಕೆ ತಮ್ಮ ಪರಮಾಪ್ತ ಹಾಗೂ ಆಂತರಿಕ ಭದ್ರತೆ ಕಾರ್ಯದರ್ಶಿ ಜಾನ್ ಕೆಲ್ಲಿ ಅವರನ್ನು ನೇಮಕ ಮಾಡಿದ್ದಾರೆ.

ಪ್ರೀಬಸ್ ಕಳೆದ ಆರು ತಿಂಗಳ ಅವಧಿಯಲ್ಲಿ ವಜಾಗೊಂಡ ಅಥವಾ ರಾಜೀನಾಮೆ ನೀಡಿದ ಟ್ರಂಪ್ ಆಡಳಿತದ ಐದನೇ ಉನ್ನತಾಧಿಕಾರಿಯಾಗಿದ್ದಾರೆ. ಅಮೆರಿಕ ಅಧ್ಯಕ್ಷರು ಈ ಹಿಂದೆ. ಸಿಬ್ಬಂದಿ ಉಪ ಮುಖ್ಯಸ್ಥರು, ರಾಷ್ಟ್ರೀಯ ಭದ್ರತಾ ಸಲಹೆಗಾರ, ಸಂವಹನ ನಿರ್ದೇಶಕರು ಮತ್ತು ಪತ್ರಿಕಾ ಕಾರ್ಯದರ್ಶಿಯವರನ್ನು ಪದಚ್ಯುತಿಗೊಳಿಸಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin