ಉತ್ತರ ಕೊರಿಯಾ ದ್ವೀಪಕಲ್ಪದ ಮೇಲೆ ಅಮೆರಿಕ ಬಾಂಬರ್ ವಿಮಾನಗಳ ಹಾರಾಟ

America-Bombaer--01

ವಾಷಿಂಗ್ಟನ್, ಜು.30-ಖಂಡಾಂತರ ಕ್ಷಿಪಣಿ ಪ್ರಯೋಗ ನಡೆಸಿ ವಿಶ್ವದಲ್ಲಿ ಆತಂಕ ಸೃಷ್ಟಿಸಿರುವ ಉತ್ತರ ಕೊರಿಯಾಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಲು ಅಮೆರಿಕದ ಬಾಂಬರ್ ವಿಮಾನಗಳು ಕೊರಿಯಾ ದ್ವೀಪಕಲ್ಪದ ಮೇಲೆ ಹಾರಾಟ ನಡೆಸಿ ಸಮರಾಭ್ಯಾಸ ಕೈಗೊಂಡಿವೆ. ದಕ್ಷಿಣ ಕೊರಿಯಾ ಮತ್ತು ಜಪಾನ್ ವಾಯು ನೆಲೆಯಿಂದ ಆ ದೇಶಗಳ ಫೈಟರ್ ಜೆಟ್‍ಗಳೊಂದಿಗೆ ಗಗನಕ್ಕೇರಿದ ಯುಎಸ್ ಬಿ-1ಬಿ ಬಾಂಬರ್‍ಗಳು ಕೊರಿಯಾ ಪರ್ಯಾಯ ದ್ವೀಪದಲ್ಲಿ 10 ತಾಸುಗಳ ಕಾಲ ಸಂಭವನೀಯ ವೈರಿ ದಾಳಿ ನಿಗ್ರಹಿಸುವ ಜಂಟಿ ಅಭ್ಯಾಸದ ಮೂಲಕ ಕದನೋತ್ಸಾಹದಲ್ಲಿರುವ ಉತ್ತರ ಕೊರಿಯಾಗೆ ಎಚ್ಚರಿಕೆ ನೀಡಿವೆ.

ಎರಡನೇ ಬಾರಿ ಪ್ರಯೋಗಿಸಲಾದ ಖಂಡಾಂತರ ಕ್ಷಿಪಣಿಯು ಅಮೆರಿಕದ ಪ್ರಮುಖ ನಗರಗಳನ್ನು ಧ್ವಂಸ ಮಾಡಬಲ್ಲದು ಎಂದು ಉತ್ತರ ಕೊರಿಯಾ ಸರ್ವಾಧಿಕಾರಿ ಕಿಂಗ್ ಜಾಂಗ್ -ಉನ್ ಬಡಾಯಿ ಕೊಚ್ಚಿಕೊಂಡ ಬೆನ್ನಲ್ಲೇ ಈ ಡ್ರಿಲ್ ನಡೆದಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin