ಎಲ್ಲಾ ವೈರಿಗಳನ್ನು ಮಣಿಸುವ ಸಾಮರ್ಥ್ಯ ನಮ್ಮ ಸೇನೆಗಿದೆ : ಚೀನಾ ಅಧ್ಯಕ್ಷ ಜಿನ್‍ಪಿಂಗ್

China--01

ಬೀಜಿಂಗ್, ಜು.30-ದಾಳಿ ಮಾಡುವ ಎಲ್ಲ ವೈರಿಗಳನ್ನೂ ಪರಾಭವಗೊಳಿಸುವ ಅಗಾಧ ಸಾಮರ್ಥ್ಯವನ್ನು ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್‍ಎ) ಹೊಂದಿದೆ ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಹೇಳಿದ್ದಾರೆ.  ಚೀನಾದ 2.3 ದಶಲಕ್ಷ ಸದೃಢ ಸೇನೆಪಡೆಯಾದ ಪಿಎಲ್‍ಎಗೆ ಆಗಸ್ಟ್ 1ರಂದು 90ನೇ ವಾರ್ಷಿಕೋತ್ಸವ. ದೇಶದ ಬೃಹತ್ ಸೇನಾ ನೆಲೆಯಲ್ಲಿ ಸಂಸ್ಥಾಪನ ದಿನಾಚರಣೆಗೆ ಪೂರ್ವಭಾವಿಯಾಗಿ ಸೇನಾ ಪಥಸಂಚಲನವನ್ನು ವೀಕ್ಷಿಸಿ ಮಾತನಾಡಿದ ಅವರು. ಚೀನಾ ಮಿಲಿಟರಿ ಪ್ರಬಲ ಆತ್ಮವಿಶ್ವಾಸ ಹೊಂದಿರುವ ವಿಶ್ವದ ಅತ್ಯುತ್ತಮ ಸೇನಾಪಡೆಗಳಲ್ಲಿ ಒಂದಾಗಿದೆ ಎಂದರು.

ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾದ(ಸಿಪಿಸಿ) ಸಂಪೂರ್ಣ ನಾಯಕತ್ವವನ್ನು ಪಿಎಲ್‍ಎ ಕಡ್ಡಾಯವಾಗಿ ಅನುಸರಿಸಬೇಕು. ಹಾಗೂ ಪಕ್ಷವು ತೋರಿದ ದಿಕ್ಕಿನತ್ತ ಸಾಗಬೇಕು ಎಂದು ಕ್ಸಿ ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin