ಕೆಂಪಯ್ಯ ಅವರೇ ಅನಧಿಕೃತ ಗೃಹ ಸಚಿವ : ಕುಮಾರಸ್ವಾಮಿ ವಾಗ್ದಾಳಿ

HD-Kumaraswamy

ಉಡುಪಿ,ಜ.30-ಒಂದು ವೇಳೆ ಅರಣ್ಯ ಸಚಿವ ರಮಾನಾಥ್ ರೈ ಅವರು ಗೃಹ ಮಂತ್ರಿಯಾದರೆ ಅವರು ಹೆಸರಿಗಷ್ಟೇ ಗೃಹಮಂತ್ರಿ ಎನ್ನಬಹುದು.
ಆಸಲಿಗೆ ನಿಜವಾದ ಗೃಹಮಂತ್ರಿ ಸಿದ್ದರಾಮಯ್ಯನವರ ಆಪ್ತ ಸಹಾಯಕರಾಗಿರುವ ನಿವೃತ್ತ ಐಪಿಎಸ್ ಅಧಿಕಾರಿ ಕೆಂಪಯ್ಯ ಅವರೇ ಆಗಿರುತ್ತಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೆಂಪಯ್ಯನವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಏತಕ್ಕಾಗಿ ಅನಿವಾರ್ಯವಾಗಿದ್ದಾರೇ ಎಂಬುದು ಅರ್ಥವಾಗುತ್ತಿಲ್ಲ ಎಂದರು.

ಕರಾವಳಿ ಭಾಗದಲ್ಲಿ ಇತ್ತೀಚಿಗೆ ನಡೆದ ಗಲಭೆ ಕುರಿತಂತೆ ಪ್ರಸ್ತಾಪಿಸಿದ ಅವರು ಈ ಭಾಗದಲ್ಲಿ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಅಧಿಕಾರ ನಡೆಸುತ್ತಿವೆ. ರಮಾನಾಥ ರೈ ಅವರು ನಾಮಕಾವಸ್ತೆಗೆ ಗೃಹಸಚಿವರು ಆಗುವ ಸಾಧ್ಯತೆಗಳಿವೆ ಎಂದು ವ್ಯಂಗ್ಯವಾಡಿದರು.   ಎರಡು ರಾಷ್ಟ್ರೀಯ ಪಕ್ಷಗಳು ಧರ್ಮ ಸಾಮರಶ್ಯೆಕ್ಕೆ ಆದ್ಯತೆ ನೀಡುತ್ತಿಲ್ಲ . ಗಲಭೆ ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿವೆ ಎಂದು ಆರೋಪಿಸಿದರು.

ಪಕ್ಕದ ರಾಜ್ಯಕ್ಕೆ ನೀರು ಕೊಡಲು ನಾವು ಅಣೆಕಟ್ಟುಗಳನ್ನು ಕಟ್ಟಿದೆವೇಯೇ ಎಂದು ಪ್ರಶ್ನಿಸಿದ ಅವರು ಹಾರಂಗಿ ನೀರು ನೆರೆಯ ರಾಜ್ಯಕ್ಕೆ ಹರಿಯುವುದನ್ನು ತಪ್ಪಿಸಿ ನಮ್ಮಲ್ಲಿರುವ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಿ ಎಂದು ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin