ಕೇಬಲ್ ಕಳ್ಳತನ ಮಾಡುತ್ತಿದ್ದ ನಾಲ್ವರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Cable--01

ಬೆಂಗಳೂರು, ಜು.30- ರೋಲಿಂಗ್ ಶೆಟರ್ ಬೀಗವನ್ನು ನಕಲಿ ಕೀ ಬಳಸಿ ತೆಗೆದು ಸೈಡ್‍ಲಾಕ್‍ಗಳನ್ನು ಮೀಟಿ ಕೇಬಲ್ ವೈರ್ ಕಳವು ಮಾಡುತ್ತಿದ್ದ ನಾಲ್ಕು ಮಂದಿ ಕಳ್ಳರನ್ನು ಸಿಟಿ ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿ 18.62 ಲಕ್ಷ ಬೆಲೆಯ ಫಿನೋಲೆಕ್ಸ್ ಕೇಬಲ್ ವೈರ್ ವಶಪಡಿಸಿಕೊಂಡಿದ್ದಾರೆ.
ನಗರದ ಶ್ರೀರಾಂಪುರ ದಯಾನಂದ ನಗರ ನಿವಾಸಿ ರತನ್‍ಲಾಲ್(32) ಮಹಾಲಕ್ಷ್ಮೀಲೇಔಟ್‍ನ ಪೇಮಾರಾಮ್(27), ಕುರುಬರಹಳ್ಳಿಯ ರಮೇಶ್(31), ಶ್ರೀರಾಂಪುರ ದಯಾನಂದ ನಗರದ ಬಾಬುಲಾಲ್(25) ಬಂಧಿತ ಆರೋಪಿಗಳು.

ಜುಲೈ 16ರಂದು ಸಿಟಿ ಮಾರ್ಕೆಟ್ ಠಾಣೆ ವ್ಯಾಪ್ತಿಯ ಲಕ್ಷ್ಮೀನಾರಾಯಣ್ ಎಂಬುವರ ಖುಷ್ಬು ಎಲೆಕ್ಟ್ರಿಕಲ್ಸ್ ಅಂಗಡಿಯ ರೋಲಿಂಗ್‍ಶೆಟರ್ ಸೆಂಟರ್ ಲಾಕ್‍ನ್ನು ನಕಲಿ ಕೀಯಿಂದ ತೆಗೆದು ಸೈಡ್ ಲಾಕ್‍ಗಳನ್ನು ಮೀಟಿ ಅಂಗಡಿಯಲ್ಲಿದ್ದ ಸುಮಾರು 18.62 ಲಕ್ಷ ಬೆಲೆಯ ಫಿನೋಲೆಕ್ಸ್ ಕೇಬಲ್ ವೈರ್ ಇದ್ದ 98 ಬಾಕ್ಸ್‍ಗಳನ್ನು ಕಳವು ಮಾಡಲಾಗಿತ್ತು. ಈ ಸಂಬಂಧ ಲಕ್ಷ್ಮೀನಾರಾಯಣ್ ಸಿಟಿ ಮಾರ್ಕೆಟ್ ಠಾಣೆಗೆ ದೂರು ನೀಡಿದ್ದರು. ಆರೋಪಿಗಳನ್ನು ಪತ್ತೆ ಮಾಡಲು ಸಿಟಿ ಮಾರ್ಕೆಟ್ ಇನ್ಸ್‍ಪೆಕ್ಟರ್ ಬಿ.ಮಾರುತಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.

ಈ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, 18.62ಲಕ್ಷ ಬೆಲೆಯ ಫಿನೊಲೆಕ್ಸ್ ಕೇಬಲ್ ವೈರನ್ನು ವಶಪಡಿಸಿಕೊಳ್ಳಲಾಗಿದೆ.
ಪಶ್ಚಿಮ ವಿಭಾಗದ ಉಪ ಪೊಲೀಸ್ ಕಮೀಷನರ್ ಎಂ.ಎನ್.ಅನುಚೇತ್ ಮಾರ್ಗದರ್ಶನದಲ್ಲಿ ಚಿಕ್ಕಪೇಟೆ ಉಪವಿಭಾಗದ ಸಹಾಯಕ ಪೊಲೀಸ್ ಕಮೀಷನರ್ ಎನ್.ನಿರಂಜನರಾಜ್ ಅರಸ್ ನೇತೃತ್ವದಲ್ಲಿ ಸಿಟಿ ಮಾರ್ಕೆಟ್ ಠಾಣೆ ಇನ್ಸ್‍ಪೆಕ್ಟರ್ ಬಿ.ಮಾರುತಿ ಮತ್ತು ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin