ಗುಜರಾತ್‍ನಲ್ಲಿ ಜಲಪ್ರಳಯ, 100ಕ್ಕೂ ಹೆಚ್ಚು ಮಂದಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Gujatar--01

ಅಹಮದಾಬಾದ್, ಜು.30- ಗುಜರಾತ್‍ನ ಬಹುತೇಕ ಜಿಲ್ಲೆಗಳು ಭಾರೀ ಮಳೆ ಮತ್ತು ಪ್ರವಾಹದಿಂದ ಅಕ್ಷರಶಃ ಜಲಪ್ರಳಯಕ್ಕೆ ತುತ್ತಾಗಿದ್ದು, ಈವರೆಗೆ 100ಕ್ಕೂ ಹೆಚ್ಚು ಮಂದಿ ಮೃತಪಟ್ಟು ಲಕ್ಷಾಂತರ ಜನರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಬನಸ್‍ಕಾಂತ ಜಿಲ್ಲೆ ಸೇರಿದಂತೆ ರಾಜ್ಯದ ಬಹುತೇಕ ನಗರಗಳು ಪ್ರವಾಹದಿಂದ ಭಾಗಶಃ ಮುಳುಗಡೆಯಾಗಿದ್ದು, ಸಮರೋಪಾದಿಯಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯ ನಡೆಯುತ್ತಿದೆ.

ಪ್ರವಾಹದಿಂದಾಗಿ ವಾಹನ, ರೈಲು ಮತ್ತು ವಿಮಾನಗಳ ಸಂಚಾರಕ್ಕೆ ಅಡಚಣೆಯಾಗಿದ್ದು, ಅನೇಕ ಜಿಲ್ಲೆಗಳು ಹೊರ ಜಗತ್ತಿನ ಸಂಪರ್ಕ ಕಳೆದುಕೊಂಡಿದೆ. ಅಸ್ಸೊಂನಲ್ಲೂ ನೆರೆ ಹಾವಳಿಯಿಂದ ಲಕ್ಷಾಂತರ ಮಂದಿ ಸಂತ್ರಸ್ತರಾಗಿದ್ದಾರೆ. ಈಗಾಗಲೇ ಗುಜರಾತ್‍ನಲ್ಲಿ ವೈಮಾನಿಕ ಸಮೀಕ್ಷೆ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ಅಸ್ಸೊಂನಲ್ಲೂ ಪರಿಸ್ಥಿತಿಯನ್ನು ಅವಲೋಕಿಸಲಿದ್ದಾರೆ.

gujarat-floods-5-june-2015

gujarat-floods-6-june-2015

gujaratfloods-kmFB--621x414@LiveMint

india-flood-weather_927d6f94-71ff-11e7-a55a-ab3ca1304be3

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin