ಚೀನಾ ಮೇಲೆ ಮುನಿಸಿಕೊಂಡ ಅಮೆರಿಕ ಅಧ್ಯಕ್ಷ ಟ್ರಂಪ್

Trump--01

ವಾಷಿಂಗ್ಟನ್, ಜು.30-ಖಂಡಾಂತರ ಕ್ಷಿಪಣಿ ಪ್ರಯೋಗಿಸಿ ಆತಂಕ ಸೃಷ್ಟಿಸಿರುವ ಉತ್ತರ ಕೊರಿಯಾ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಚೀನಾ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುನಿಸಿಕೊಂಡಿದ್ಧಾರೆ. ಚೀನಾದ ನಿರ್ಲಕ್ಷ್ಯಮನೋಭಾವದಿಂದ ನಾನು ತುಂಬಾ ನಿರಾಶನಾಗಿದ್ದೇನೆ. ಏಷ್ಯಾ ಖಂಡ ಸೇರಿದಂತೆ ವಿಶ್ವದಲ್ಲಿ ಆತಂಕ ಸೃಷ್ಟಿಸುತ್ತಿದ್ದರೂ ಉತ್ತರ ಕೊರಿಯಾಗೆ ಏನೂ ಮಾಡದೇ ಸುಮ್ಮನಿದೆ. ಇದು ನನಗೆ ಬೇಸರ ಮೂಡಿಸಿದೆ ಎಂದು ಅವರು ವಿಷಾದಿಸಿದ್ದಾರೆ.

ಅಮೆರಿಕದಲ್ಲಿ ಈ ಹಿಂದೆ ಆಡಳಿತ ನಡೆಸಿದ್ದ ಮೂರ್ಖ ನಾಯಕರು ವಾಣಿಜ್ಯ ವಹಿವಾಟಿಗಾಗಿ ಕೋಟ್ಯಂತರ ಡಾಲರ್‍ಗಳನ್ನು ಈ ದೇಶಕ್ಕಾಗಿ ಖರ್ಚು ಮಾಡಿದ್ದಾರೆ. ಆದರೆ ಉತ್ತರ ಕೊರಿಯಾ ವಿಷಯದಲ್ಲಿ ಚೀನಾ ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ. ಕೇವಲ ಮಾತಿನಲ್ಲೇ ಕಾಲಹರಣ ಮಾಡುತ್ತಿದೆ ಎಂದು ಟ್ವೀಟರ್‍ನಲ್ಲಿ ಟ್ರಂಪ್ ಆರೋಪಿಸಿದ್ದಾರೆ.  ಇದು ದೀರ್ಘ ಕಾಲ ಮುಂದುವರಿಯಲು ನಾವು ಅವಕಾಶ ನೀಡುವುದಿಲ್ಲ. ಚೀನಾ ಈ ಸಮಸ್ಯೆಯನ್ನು ಸುಲಭವಾಗಿ ಬಗೆಹರಿಸಬಹುದು. ಈ ನಿಟ್ಟಿನಲ್ಲಿ ಅದು ಚಿಂತಿಸಿ ಕ್ರಮ ಕೈಗೊಳ್ಳುವುದು ಸೂಕ್ತ ಎಂದು ಅಮೆರಿಕ ಅಧ್ಯಕ್ಷರು ಸಲಹೆ ಮಾಡಿದ್ಧಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin