ಜಿಎಸ್‍ಟಿಯಿಂದ ಅಗತ್ಯ ವಸ್ತುಗಳ ಬೆಲೆ ಸಾಕಷ್ಟು ಇಳಿಕೆಯಾಗಿದೆ : ಮೋದಿ ಮನದ ಮಾತು

Man-Ki-Baat

ನವದೆಹಲಿ, ಜು.30- ಜುಲೈ 1ರಿಂದ ದೇಶಾದ್ಯಂತ ಜಾರಿಗೆ ಬಂದಿರುವ ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್‍ಟಿ) ಪದ್ಧತಿಯಿಂದ ದೇಶದ ಆರ್ಥಿಕತೆಯಲ್ಲಿ ಮಹತ್ವದ ಪರಿವರ್ತನೆಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ಧಾರೆ. ಪ್ರತಿ ತಿಂಗಳ ಕೊನೆ ಭಾನುವಾರ ಬಿತ್ತರವಾಗುವ ಮನ್ ಕೀ ಬಾತ್ (ಮನದ ಮಾತು) ಬಾನುಲಿ ಕಾರ್ಯಕ್ರಮದ 34ನೇ ಆವೃತ್ತಿಯಲ್ಲಿ ಮಾತನಾಡಿದ ಅವರು, ಈ ತೆರಿಗೆ ಪದ್ದತಿ ಜÁರಿಯಿಂದ ಹಲವಾರು ಅನುಕೂಲಗಳಿವೆ. ದೇಶದ ಅರ್ಥಿಕ ವ್ಯವಸ್ಥೆ ಮೇಲೆ ಸಕಾರಾತ್ಮಕ ಪರಿಣಾಮ ಬೀರಿವೆ. ಅನೇಕ ಅಗತ್ಯ ವಸ್ತುಗಳು ಮತ್ತು ಉತ್ಪನ್ನಗಳ ಬೆಲೆ ಸಾಕಷ್ಟು ಇಳಿಕೆಯಾಗಿದೆ ಎಂದು ಹೇಳಿದರು.

ಒಂದು ದೇಶ ಮತ್ತು ಒಂದೇ ತೆರಿಗೆ ಎಂಬ ಕನಸು ಸಾಕಾರಗೊಂಡಿದ್ದು, ದೇಶಾದ್ಯಂತ ಏಕರೂಪ ತೆರಿಗೆ ಪದ್ದತಿಯಾದ ಜಿಎಸ್‍ಟಿ ದೊಡ್ಡ ಮಟ್ಟದ ಆರ್ಥಿಕ ಪರಿವರ್ತನೆಗೆ ನಾಂದಿಯಾಗಿದೆ ಎಂದು ತಿಳಿಸಿದರು.  ದೇಶದ ವಿವಿಧ ರಾಜ್ಯಗಳಲ್ಲಿ ತಲೆದೋರಿರುವ ಪ್ರವಾಹದಿಂದ ತೀವ್ರ ಕಳವಳ ವ್ಯಕ್ತಪಡಿಸಿರುವ ಮೋದಿ, ಸಂತ್ರಸ್ತರಾದವರಿಗೆ ನೆರವು ನೀಡಲು ಸರ್ಕಾರದೊಂದಿಗೆ ಕೈಜೋಡಿಸುವಂತೆ ದೇಶದ ಜನರಿಗೆ ಮನವಿ ಮಾಡಿದರು.

ಭಾರತದ ಪಾಲಿಗೆ ಆಗಸ್ಟ್ ಕ್ರಾಂತಿಕಾರಿ ಮಾಸ. ಬ್ರಿಟಿಷರ ವಿರುದ್ಧ ನಡೆದ ಭಾರತ ಬಿಟ್ಟು ತೊಲಗಿ ಚಳವಳಿ ಯಶಸ್ವಿಯಾದ ತಿಂಗಳು. ಭಾರತಕ್ಕೆ ಸ್ವಾತಂತ್ರ ದಕ್ಕಿಸಿಕೊಡಲು ಸಾವಿರಾರು ದೇಶಪ್ರೇಮಿಗಳು ತಾಗ್ಯ-ಬಲಿದಾನ ಮಾಡಿದ್ದಾರೆ ಎಂದು ನರೇಂದ್ರ ಮೋದಿ ಮನ್ ಕೀ ಬಾತ್‍ನಲ್ಲಿ ಸ್ಮರಿಸಿದರು.  ಆಗಸ್ಟ್ ಕ್ರಾಂತಿಕಾರಿ ಮಾಸ. ಹೀಗಾಗಿ ಬ್ರಿಟಿಷರ ವಿರುದ್ಧ ನಾವು ನಡೆಸಿದ ಭಾರತ ಬಿಟ್ಟು ತೊಲಗಿ ಮಾದರಿಯಲ್ಲೇ ಕೊಳಚೆ ಭಾರತ ಬಿಟ್ಟು ತೊಲಗು, ಭಷ್ಟಾಚಾರ ಭಾರತ ಬಿಟ್ಟು ತೊಲಗು, ಭಯೋತ್ಪಾದನೆ ಭಾರತ ಬಿಟ್ಟು ತೊಲಗು ಈ ಹೋರಾಟವನ್ನು ಯಶಸ್ವಿಗೊಳಿಸಲು ನಾವೆಲ್ಲರೂ ಪಣ ತೊಡೊಣ ಎಂದು ಪ್ರಧಾನಿ ದೇಶವಾಸಿಗಳಿಗೆ ಕರೆ ನೀಡಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin