ಜೈಲಿನಿಂದಲೇ ಕಾವೇರಿ ನೀರಿಗೆ ಸಂಚು ಮಾಡುವ ಶಶಿಕಲಾಗೆ ರಾಜ್ಯ ಸರ್ಕಾರದಿಂದ ರಾಜಾತಿಥ್ಯ

ಈ ಸುದ್ದಿಯನ್ನು ಶೇರ್ ಮಾಡಿ

Ashok

ಕುಣಿಗಲ್,ಜು.30- ರಾಜ್ಯದ ರೈತರಿಗೆ ನೀಡಬೇಕಾದ ನೀರನ್ನು ತಮಿಳುನಾಡಿಗೆ ಸುಪ್ರೀಂ ಕೋರ್ಟ್ ಮೂಲಕ ತೆಗೆದುಕೊಂಡು ಹೋಗಲು ಜೈಲಲ್ಲೇ ಕೂತು ಹುನ್ನಾರ ನಡೆಸಿರುವ ಶಶಿಕಲಾಗೆ ಈ ರಾಜ್ಯದ ಮುಖ್ಯಮಂತ್ರಿ ರಾಜಾತಿಥ್ಯ ನೀಡುವ ಮೂಲಕ ರಾಜ್ಯ ಜನತೆಗೆ ದ್ರೋಹ ಮಾಡಿರುವುದಲ್ಲದೆ, ರೈತರಿಗೆ ನೀರು ಒದಗಿಸುವಲ್ಲಿಯೂ ವಿಫಲರಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಆರ್. ಅಶೋಕ್ ವಾಗ್ದಾಳಿ ನಡೆಸಿದರು.

ಕುಣಿಗಲ್ ಪಟ್ಟಣದಿಂದ ತುಮಕೂರಿನವರೆಗೆ ಹೇಮಾವತಿ ನೀರಿಗಾಗಿ ಆಗ್ರಹಿಸಿ ಹಮ್ಮಿಕೊಂಡಿರುವ ಪಾದಯಾತ್ರೆಗೆ ಇಂದು ಚಾಲನೆ ನೀಡಿ ಮಾತನಾಡಿದ ಅವರು, ಮುಖ್ಯಮಂತ್ರಿ ಅವರು ನಿದ್ದೆ ಸಿದ್ದರಾಮಯ್ಯ ಅಲ್ಲ, ಬೆಂಕಿ ಸಿದ್ದರಾಮ್ಯ. ಕುತಂತ್ರ ರಾಜಕಾರಣದಲ್ಲಿ ನಿಪುಣರಾಗಿದ್ದಾರೆ. ಜಾತಿ ಜಾತಿಗಳ ಮಧ್ಯೆ, ಧರ್ಮ-ಧರ್ಮಗಳ ನಡುವೆ ಸಂಘರ್ಷ ಉಂಟು ಮಾಡಿ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಮಂಡ್ಯ, ಮೈಸೂರು, ತುಮಕೂರು ರೈತರಿಗೆ ಒದಗಿಸಬೇಕಾದ ನೀರನ್ನು ತಮಿಳುನಾಡಿಗೆ ಹರಿಬಿಡಲಾಗುತ್ತಿದೆ ಎಂದು ದೂರಿದರು. ಮಾಜಿ ಮಂತ್ರಿ ಸುರೇಶ್ ಕುಮಾರ್ ಮಾತನಾಡಿ ನಾವು ಮೋದಿ ನಾಯಕತ್ವದ ಕಾರ್ಯಕರ್ತರು. ಕಪಟ ಮತ್ತು ನಾಟಕೀಯತೆ ನಮ್ಮಲ್ಲಿಲ್ಲ . ಪ್ರಾಮಾಣಿಕವಾಗಿ ತುಮಕೂರಿಗೆ ಬರಬೇಕಾದ ನೀರಿಗಾಗಿ ಪ್ರಾಮಾಣಿಕ ಹೋರಾಟ ಮಾಡುವುದಾಗಿ ಹೇಳಿದರು. ತುಮಕೂರು ಗ್ರಾಮಾಂತರ ಶಾಸಕ ಬಿ.ಸುರೇಶ್‍ಗೌಡ ಮಾತನಾಡಿದರು.
ತಾಲ್ಲೂಕು ಬಿಜೆಪಿ ಅಧ್ಯಕ್ಷ ಬಿ.ಕೃಷ್ಣಕುಮಾರ್ ನೇತೃತ್ವ ವಹಿಸಿದ್ದರು.

ಪಾದಯಾತ್ರೆಯಲ್ಲಿ ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಆರ್.ದಿನೇಶ್, ಜಿಪಂ ಮಾಜಿ ಸದಸ್ಯ ಅರುಣ್ ಕುಮಾರ್, ಎಪಿಎಂಸಿ ಮಾಜಿ ನಿರ್ದೇಶಕ ತಿಮ್ಮೇಗೌಡ, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಗೌರಮ್ಮ ಗಂಗಾಧರಯ್ಯ ಇನ್ನಿತರರು ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin