ನಿತೀಶ್ ರಾಜೀನಾಮೆ ನೀಡುವ ಮುನ್ನ ಲಾಲೂಗೆ ಫೋನ್ ಮಾಡಿ ಹೇಳಿದ್ದೇನು ಗೊತ್ತೇ..?

Lalu-Phone--01

ಪಾಟ್ನಾ, ಜು.30-ಲಾಲೂಜಿ… ನನ್ನನ್ನು ಕ್ಷಮಿಸಿ. ಮಹಾಮೈತ್ರಿಯನ್ನು ತೊರೆದು ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ…. ಇದು ಸಿಎಂ ಹುದ್ದೆಗೆ ತಮ್ಮ ತ್ಯಾಗ ಪತ್ರ ನೀಡುವುದಕ್ಕೆ 10 ನಿಮಿಷಗಳ ಮುನ್ನ ಜೆಡಿಯು ನಾಯಕ ನಿತೀಶ್‍ಕುಮಾರ್ ಆರ್‍ಜೆಡಿ ವರಿಷ್ಠ ಲಾಲೂಪ್ರಸಾದ್ ಯಾದವ್‍ಗೆ ದೂರವಾಣಿಯಲ್ಲಿ ಹೇಳಿದ ಮಾತು.

ಇಪ್ಪತ್ತು ತಿಂಗಳ ಮಹಾಮೈತ್ರಿಯನ್ನು ನಾನು ತೊರೆಯುತ್ತಿದ್ದೇನೆ. ರಾಜ್ಯದ ಹಿತಕೋಸ್ಕರ ನಾನು ರಾಜೀನಾಮೆ ನೀಡುವುದು ಅನಿವಾರ್ಯ. ಇದಕ್ಕಾಗಿ ನನ್ನನ್ನು ಕ್ಷಮಿಸಿ ಎಂದು ನಿತೀಶ್ ಲಾಲೂ ಅವರಲ್ಲಿ ಮನವಿ ಮಾಡಿದ್ದರು. ಈ ನಿರ್ಧಾರವನ್ನು ಬದಲಿಸುವಂತೆ ಲಾಲೂ ನಿತೀಶ್‍ಗೆ ಕೋರಿದ್ದರೂ ನನ್ನ ಈ ನಿರ್ಧಾರ ಅಚಲ ಎಂದು ದೂರವಾಣಿಯಲ್ಲಿ ನಿತೀಶ್ ತಿಳಿಸಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin