ಮೌಂಟ್‍ಬ್ಯಾಟನ್ ಪತ್ನಿ ಮತ್ತು ನೆಹರು ಮಧ್ಯೆ ಪ್ರೀತಿಯಿತ್ತು ಅಷ್ಟೇ, ದೈಹಿಕ ಸಂರ್ಪಕ ಇರಲಿಲ್ಲವಂತೆ..!

ಈ ಸುದ್ದಿಯನ್ನು ಶೇರ್ ಮಾಡಿ

Nehru--01

ನವದೆಹಲಿ, ಜು.30- ಪ್ರಥಮ ಪ್ರಧಾನಿಯಾಗಿದ್ದ ಜವಹರ್‍ಲಾಲ್ ನೆಹರು ಮತ್ತು ಎಡ್ವಿನಾ ಮೌಂಟ್ ಬ್ಯಾಟನ್ (ಭಾರತದ ಕೊನೆ ವೈಸರಾಯ್ ಮೌಂಟ್ ಬ್ಯಾಟನ್ ಪತ್ನಿ) ನಡುವಣ ಪ್ರೇಮ ಪ್ರಕರಣದ ಬಗ್ಗೆ ಈಗಲೂ ಗೊಂದಲವಿದೆ. ಈ ನಡುವೆಯೇ ಅವರ ಪುತ್ರಿ ತನ್ನ ಅಮ್ಮ ಮತ್ತು ನೆಹರು ನಡುವೆ ದೈಹಿಕ ಸಂರ್ಪಕ ಇರಲಿಲ್ಲ ಎಂದು ಹೇಳಿಕೆ ನೀಡಿದ್ಧಾರೆ.

ಪರಸ್ಪರ ಪ್ರೀತಿಸುತ್ತಿದ್ದರು ಹಾಗೂ ಗೌರವಿಸುತ್ತಿದ್ದರು. ಆದರೆ ಅವರು ದೈಹಿಕ ಸಂಬಂಧ ಹೊಂದಿರಲಿಲ್ಲ. ಅವರಿಬ್ಬರೂ ಎಂದಿಗೂ ಏಕಾಂತವಾಗಿರಲಿಲ್ಲ. ಹೀಗಾಗಿ ಅವರ ದೈಹಿಕ ಸಂಬಂಧದ ಸನ್ನಿವೇಶವೇ ಉದ್ಭವಿಸಿಲ್ಲ ಎಂದು ಪಮೇಲಾ ಹಿಕ್ಸ್ ನೀ ಮೌಂಟ್ ಬ್ಯಾಟನ್ ತಿಳಿಸಿದ್ದಾರೆ. ಕೊನೆಯ ವೈಸ್‍ರಾಯ್ ಆಗಿ ಲಾರ್ಡ್ ಲೂಯಿಸ್ ಮೌಂಟ್ ಬ್ಯಾಟನ್ ಭಾರತಕ್ಕೆ ಬಂದಾಗ ಪಮೇಲಾ 17 ವರ್ಷದ ಕಿಶೋರಿ. ನೆಹರು ಮತ್ತು ಎಡ್ವಿನಾ ಆಶ್ಲೇ ನಡುವೆ ಅವ್ಯಕ್ತ ಸಂಬಂಧ ಇತ್ತು ಎಂಬುದನ್ನು ತಾವು ಗಮನಿಸಿದ್ದಾಗಿ ಹೇಳಿಕೊಂಡಿದ್ದಾರೆ.

ತನ್ನ ತಾಯಿ ಪಂಡಿತ್‍ಜಿ ಅವರನ್ನು ಬಹುವಾಗಿ ಮೆಚ್ಚಿಕೊಂಡಿದ್ದರು. ಅವರು ಪರಸ್ಪರ ಪ್ರೀತಿಸುತ್ತಿದ್ದರು ಹಾಗೂ ಇಬ್ಬರ ನಡುವೆ ಸಮಾನವಾದ ಗೌರವ ಇತ್ತು. ಹಲವು ವಿಷಯಗಳ ಬಗ್ಗೆ ಅವರು ಚರ್ಚೆಸುತ್ತಿದ್ದರು. ನೆಹರು ಬರೆದ ಪತ್ರದಲ್ಲಿ ನನ್ನ ತಾಯಿ ಬಗ್ಗೆ ಅವರಿಗಿದ್ದ ಆಂತರಿಕ ಭಾವನೆಗಳು ವ್ಯಕ್ತವಾಗುತ್ತಿದ್ದವು.
ಅವರಿಬ್ಬರೂ ಪ್ರೀತಿಸುತ್ತಿದ್ದರೂ, ಅವರು ನಡುವೆ ದೈಹಿಕ ಸಂಬಂಧ ಇತ್ತು ಎಂಬುದನ್ನು ನಾನು ಒಪ್ಪುವುದಿಲ್ಲ. ನನ್ನ ತಾಯಿ ಮತ್ತು ನೆಹರು ಇಬ್ಬರು ಎಂದಿಗೂ ಏಕಾಂತವಾಗಿರಲಿಲ್ಲ ಎಂದು ಪಮೇಲಾ ಹೇಳಿಕೆ ನೀಡಿದ್ದಾರೆ. ಇದರೊಂದಿಗೆ ನೆಹರು ಮತ್ತು ಎಡ್ವಿನಾ ನಡುವಣ ಸಂಬಂಧದ ಸುದ್ದಿಗಳು ಹೊಸ ರೂಪ ಪಡೆದುಕೊಂಡಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin