ವರ್ಷಾಂತ್ಯಕ್ಕೆ ರಷ್ಯಾದ 48 ಸೇನಾ ಹೆಲಿಕಾಪ್ಟರ್ ಪೂರೈಕೆ ಒಪ್ಪಂದಕ್ಕೆ ಸಹಿ

ಈ ಸುದ್ದಿಯನ್ನು ಶೇರ್ ಮಾಡಿ

MI-17

ಝುಕೊವ್‍ಸ್ಕಿ(ರಷ್ಯಾ), ಜು.30-ಭಾರತಕ್ಕೆ ರಷ್ಯಾದ 48 ಮಿ-17 ಸೇನಾ ಸಾರಿಗೆ ಹೆಲಿಕಾಪ್ಟರ್‍ಗಳ ಪೂರೈಕೆಗಾಗಿ ಉಭಯ ದೇಶಗಳ ನಡುವೆ ಮಾತುಕತೆ ನಡೆಯುತ್ತಿದ್ದು, ಈ ವರ್ಷಾಂತ್ಯದ ವೇಳೆಗೆ ಒಪ್ಪಂದಕ್ಕೆ ಸಹಿ ಹಾಕುವ ನಿರೀಕ್ಷೆ ಇದೆ ಎಂದು ಮಾಸ್ಕೋದ ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಭಾರತವು ಮಿ-8 ಮತ್ತು ಮಿ-17 ವರ್ಗಕ್ಕೆ ಸೇರಿದ 300ಕ್ಕೂ ಹೆಚ್ಚು ಮಿಲಿಟರಿ ಹೆಲಿಕಾಪ್ಟರ್‍ಗಳನ್ನು ಹೊಂದಿದೆ. ಇವುಗಳು ಸೇನಾಪಡೆಗಳು ಮತ್ತು ಶಸ್ತ್ರಾಸ್ತ್ರಗಳ ರವಾನೆ, ಅಗ್ನಿಶಾಮಕ, ಬೆಂಗಾವಲು, ಕಣ್ಗಾವಲು, ಶೋಧ ಮತ್ತು ರಕ್ಷಣೆ (ಎಸ್‍ಎಆರ್) ಕಾರ್ಯಾಚರಣೆಗಳಲ್ಲಿ ನೆರವಾಗುತ್ತಿವೆ ಎಂದು ರಷ್ಯಾದ ಶಸ್ತ್ರಾಸ್ತ್ರ ಪೂರೈಕೆ ಸಂಸ್ಥೆ ರೊಸೊಬೊರೊನ್ ಎಕ್ಸ್ಪೋರ್ಟ್ ನ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಅಲೆಗ್ಸಾಂಡರ್ ಮಿಖೀವಿ ಹೇಳಿದ್ದಾರೆ.

ಸೇನಾ ಹೆಲಿಕಾಪ್ಟರ್‍ಗಳ ಖರೀದಿ ವ್ಯವಹಾರದಲ್ಲಿ ರಷ್ಯಾ ಮತ್ತು ಭಾರತದ ನಡುವೆ ಹಿಂದಿನಿಂದಲೂ ಉತ್ತಮ ಸಂಬಂಧವಿದೆ. ಈಗ 48 ಮಿ-17ವಿ-5 ಶ್ರೇಣಿಯ ಮಿಲಿಟರಿ ಟ್ರಾನ್ಸ್ಪೋರ್ಟ್ ಹೆಲಿಕಾಪ್ಟರ್‍ಗಳ ಪೂರೈಕೆಗಾಗಿ ಮಾತುಕತೆ ನಡೆಯುತ್ತಿದೆ. ತಾಂತ್ರಿಕ-ವಾಣಿಜ್ಯ ಸಮಾಲೋಚನೆ ನಂತರ ಡಿಸೆಂಬರ್ ವೇಳೆಗೆ ಒಪ್ಪಂದಕ್ಕೆ ಅಂಕಿತ ಹಾಕುವ ಆಶಾಭಾವನೆ ಇದೆ ಎಂದು ಅವರು ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin