ವಿದ್ಯಾರ್ಥಿನಿಗೆ ಅಶ್ಲೀಲ ಮೆಸೇಜ್ ಮಾಡಿದ್ದ ಪೋಲಿ ಲೆಕ್ಚರ್ ಗಾಯಬ್

Facebooka-Messange--01

ಮಂಗಳೂರು, ಜು.30- ತನ್ನ ವಿದ್ಯಾರ್ಥಿನಿಗೆ ಅಶ್ಲೀಲ ಮೆಸೇಜ್ ಕಳುಹಿಸಿ ಪ್ರಕರಣ ದಾಖಲಾದ ಕೂಡಲೇ ಈ ಉಪನ್ಯಾಸಕ ಮಹಾಶಯ ಗಾಯಬ್ ಆಗಿದ್ದಾನೆ. ಕುಕ್ಕೆಸುಬ್ರಹ್ಮಣ್ಯೇಶ್ವರ ಮಹಾ ವಿದ್ಯಾಲಯದಲ್ಲಿ 15 ವರ್ಷಗಳಿಂದ ರಾಜಕೀಯ ಶಾಸ್ತ್ರದ ಪ್ರಾಧ್ಯಾಪಕನಾಗಿರುವ ಕೆ.ಪುಷ್ಪರಾಜ್, ವಿದ್ಯಾರ್ಥಿನಿಗೆ ಅಸಹ್ಯವಾದ ಸಂದೇಶ ಕಳುಹಿಸಿದ್ದಾನೆ. ಫೇಸ್‍ಬುಕ್ ಮೆಸೇಂಜರ್‍ನಲ್ಲಿ ವಿದ್ಯಾರ್ಥಿನಿಗೆ ಅಶ್ಲೀಲ ಮೆಸೇಜ್ ಕಳುಹಿಸಿದ್ದ ಈ ಪೋಲಿ ಲೆಕ್ಚರರ್‍ನ ಕಾಟ ತಾಳಲಾರದೆ ಸಂತ್ರಸ್ಥ ವಿದ್ಯಾರ್ಥಿನಿ ಪೊಲೀಸರಿಗೆ ದೂರು ನೀಡಿದ್ದಳು.

ತನ್ನ ಕರ್ಮಕಾಂಡ ಬಯಲಾಗುತ್ತಿದ್ದಂತೆ ಪುಷ್ಪರಾಜ್ ಶಾಲೆಗೆ ರಜೆ ಹಾಕಿದ್ದಾನೆ. ಪ್ರಾಧ್ಯಾಪಕ ಹುದ್ದೆಗೆ ರಾಜೀನಾಮೆ ಕೂಡ ಕೊಟ್ಟಿದ್ದಾನೆ ಎಂದು ತಿಳಿದುಬಂದಿದೆ. ಗುರುದೇವೋ ಭವ ಎಂಬ ಮಾತಿದೆ. ಗುರುವನ್ನು ಶ್ರೇಷ್ಠ ಭಾವನೆಯಿಂದ ಕಾಣುತ್ತಾರೆ. ಆದರೆ, ಅದೇ ಗುರು ಇಂತಹ ಅಸಹ್ಯ ಕೆಲಸವನ್ನು ಮಾಡಿರುವುದರಿಂದ ವಿದ್ಯಾರ್ಥಿ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin