ವಿಮಾನ ಉಡಾಯಿಸಲು ಸಂಚು ನಡೆಸಿದ್ದ ನಾಲ್ವರು ಉಗ್ರರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Police--01

ಮೆಲ್ಬೊರ್ನ್, ಜು.30-ಆಸ್ಟ್ರೇಲಿಯಾದ ಸಿಡ್ನಿ ನಗರದಲ್ಲಿ ಭಯೋತ್ಪಾದನೆ ನಿಗ್ರಹಕ್ಕಾಗಿ ಕಾರ್ಯಾಚರಣೆ ನಡೆಸಿದ ಪೊಲೀಸರು ನಾಲ್ವರು ಉಗ್ರರನ್ನು ಬಂಧಿಸಿ, ವಿಮಾನ ಧ್ವಂಸ ಸಂಚನ್ನು ವಿಫಲಗೊಳಿಸಿದ್ದಾರೆ ಎಂದು ಪ್ರಧಾನಮಂತ್ರಿ ಮಾಲ್ಕಂ ಟರ್ನ್‍ಬುಲ್ ಹೇಳಿದ್ಧಾರೆ.  ಆಸ್ಟ್ರೇಲಿಯಾ ಫೆಡರಲ್ ಪೊಲೀಸ್, ನ್ಯೂ ಸೌತ್ ವೇಲ್ಸ್ ಪೊಲೀಸ್ ಮತ್ತು ಎಎಸ್‍ಐಒ ಸಿಡ್ನಿಯ ಐದು ಕಡೆ ದಾಳಿ ನಡೆಸಿ ನಾಲ್ವರನ್ನು ಬಂಧಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ನಮಗೆ ಭಯೋತ್ಪಾದಕರ ದಾಳಿ ಆತಂಕವಿದೆ. ನಮ್ಮ ಮೇಲೆ ಆಕ್ರಮಣ ನಡೆಸಲು ಉಗ್ರರು ಸಂಚು ರೂಪಿಸುತ್ತಲೇ ಇದ್ದಾರೆ. ಇವರಲ್ಲಿ ಕೆಲವರು ಯಾವುದೇ ಸುಳಿವು ನೀಡದೇ ಕ್ಷಿಪ್ರ ಕಾರ್ಯಾಚರಣೆ ನಡೆಸುತ್ತಾರೆ. ಈಗ ಬೆಳಕಿಗೆ ಬಂದಿರುವ ಪ್ರಕರಣವೂ ಇದೇ ರೀತಿಯದ್ದಾಗಿದೆ ಎಂದು ಪ್ರಧಾನಿ ಹೇಳಿದ್ಧಾರೆ.
ಸಿಡ್ನಿಯಲ್ಲಿರ ಉಗ್ರರ ಗುಂಪೊಂದು ಸುಧಾರಿತ ಸ್ಫೋಟಕದ ಮೂಲಕ ವಿಮಾನವನ್ನು ಧ್ವಂಸಗೊಳಿಸಿ ಭಾರೀ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿತ್ತು. ಬಂಧಿತರಾದ ನಾಲ್ವರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದ್ದು, ಮತ್ತಷ್ಟು ಮಹತ್ವದ ಸಂಗತಿಗಳು ಬೆಳಕಿಗೆ ಬರುವ ಸಾಧ್ಯತೆ ಇದೆ ಎಂದು ಆಸ್ಟ್ರೇಲಿಯಾ ಫೆಡರಲ್ ಪೊಲೀಸ್ ಆಯುಕ್ತ ಆಂಡ್ರ್ಯೂ ಕೊಲ್ವಿನ್ ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin