ಸಿಮೆಂಟ್ ಟ್ಯಾಂಕರ್ ಪಲ್ಟಿ, ತಪ್ಪಿದ ಬಾರಿ ಅನಾಹುತ

Cemant-accident

ಗೌರಿಬಿದನೂರು, ಜು.30- ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ಟ್ಯಾಂಕರ್ ಲಾರಿಯೊಂದು ಉರುಳಿ ಬಿದ್ದು, ಆಶ್ಚರ್ಯಕರ ರೀತಿಯಲ್ಲಿ ಬಸ್‍ಗಾಗಿ ಕಾಯುತ್ತಿದ್ದ ಪ್ರಯಾಣಿಕರು ಪಾರಾಗಿರುವ ಘಟನೆ ಪಟ್ಟಣದ ಅಂಬೇಡ್ಕರ್ ವೃತ್ತ ಸಮೀಪ ನಡೆದಿದೆ. ಪೆನ್ನಾ ಸಿಮೆಂಟ್ ಕಾರ್ಖಾನೆಗೆ ಸೇರಿದ ಲಾರಿ ಹಿಂದೂಪುರದಿಂದ ಬೆಂಗಳೂರು ಕಡೆಗೆ ತೆರಳುತ್ತಿರುವಾಗ ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ಬೆಂಗಳೂರು ರಸ್ತೆಯ ಕಡೆಗೆ ತಿರುವು ಪಡೆಯುವ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ.

ಆ ಸಮಯದಲ್ಲಿ ಬೆಂಗಳೂರಿಗೆ ತೆರಳಲು ನಾಲ್ಕೈದು ಮಂದಿ ಪ್ರಯಾಣಿಕರು ಬಸ್ ನಿಲ್ದಾಣದ ಬಳಿ ಕಾಯುತ್ತಿರುವಾಗ ಅತಿ ವೇಗವಾಗಿ ಬಂದ ಟ್ಯಾಂಕರ್ ತಿರುವಿನಲ್ಲಿ ನಿಯಂತ್ರಣ ತಪ್ಪಿ ಉರುಳಿ ಬಿಳುತ್ತಿದ್ದಂತೆಯೇ ಪ್ರಯಾಣಿಕರು ಹಿಂದಕ್ಕೆ ಓಡಿದ್ದಾರೆ , ಕ್ಷಣಾರ್ಧದಲ್ಲಿ ಭಾರೀ ಅನಾಹುತ ತಪ್ಪಿದಂತಾಗಿದೆ. ಚಾಲಕ ಮತ್ತು ಕ್ಲೀನರ್ ಪರಾರಿಯಾಗಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪುರಠಾಣೆಯ ಎಸೈ ಸುಂದರ್ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸ್ಘಳಾಂತರ:

ಬೆಂಗಳೂರು-ಹಿಂದೂಪುರ ರಸ್ತೆ ಅಭಿವೃದ್ದಿ ಕಾಮಗಾರಿಯ ನಂತರ ಅಂಬೇಡ್ಕರ್ ವೃತ್ತವನ್ನು ರಸ್ತೆಯ ಮಧ್ಯಭಾಗಕ್ಕೆ (ಮುಂದಕ್ಕೆ ) ಸ್ಥಳಾಂತರಿಸಿ, ಬೃಹತ್ ಡಾ.ಬಿ.ಆರ್ ಅಂಬೇಡ್ಕರ್ ಸ್ಥೂಪ ಅಥವಾ ಪುತ್ತಳಿಯನ್ನು ನಿರ್ಮಾಣ ಮಾಡಲಾಗುವುದು ಎಂದು ವಿಧಾನಸಭೆ ಉಪಾಧ್ಯಕ್ಷ ಎನ್.ಎಚ್.ಶಿವಶಂಕರರೆಡ್ಡಿ ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin